ಕರ್ನಾಟಕ

karnataka

ಸೇನೆಗೆ ಸೇರಿಸುವುದಾಗಿ ಯುವಕರಿಗೆ ಮಕ್ಮಲ್​ ಟೋಪಿ: ಬೆಳಗಾವಿಯಲ್ಲಿ ಆರೋಪಿ ಅಂದರ್​

By

Published : Dec 20, 2019, 10:42 PM IST

ಭಾರತೀಯ ಸೇನೆಗೆ ಸೇರಿಸುವುದಾಗಿ ಹೇಳಿ ಯುವಕರಿಂದ ಹಣ ಪಡೆದು ವಂಚಿಸಿದ್ದ ಆರೋಪಿಯನ್ನು ಬೆಳಗಾವಿ ಕ್ಯಾಂಪ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

Money laundering claiming to be added to Indian Army
ಭಾರತೀಯ ಸೇನೆಗೆ ಸೇರಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ವಂಚನೆ

ಬೆಳಗಾವಿ:ಭಾರತೀಯ ಸೇನೆಗೆ ಸೇರಿಸುವುದಾಗಿ ಹೇಳಿ ಯುವಕರಿಂದ ಹಣ ಪಡೆದು ವಂಚಿಸಿದ್ದ ಆರೋಪಿಯನ್ನು ಬೆಳಗಾವಿ ಕ್ಯಾಂಪ್ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿಯ ಅನಗೋಳ ನಿವಾಸಿ ಸಾಗರ ಪರಶುರಾಮ ಪಾಟೀಲ್​ ಬಂಧಿತ ಆರೋಪಿ. ಈತನಿಂದ ಮಿಲಿಟರಿ ಸಮವಸ್ತ್ರ, 2 ನಕಲಿ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.

ಈ ಹಿಂದೆ ನಗರದಲ್ಲಿ ಸೇನಾ ಭರ್ತಿಗೆ ಆಗಮಿಸಿದ್ದ ಉದ್ಯೋಗಾಕಾಂಕ್ಷಿಗಳು ನಗರದ ಸಿಪಿಇಡಿ ಮೈದಾನದಲ್ಲಿ ‌ರನ್ನಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದರು. ಆಗ ಸೇನಾ ಸಮವಸ್ತ್ರ ಧರಿಸಿಕೊಂಡು‌ ಯುವಕರ ಬಳಿ ಬಂದಿರುವ ಈ ಆರೋಪಿ ಸೇನೆಗೆ ಸೇರಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಪಡೆದಿದ್ದ. ಬಳಿಕ ಸೇನೆಗೂ ಸೇರಿಸದೇ ಹಣ ಮರಳಿಸದೇ ಯುವಕರನ್ನು ‌ಸತಾಯಿಸಿದ್ದಾನೆ ಎಂದು ತಿಳಿದುಬಂದಿದೆ.

ಮೋಸಕ್ಕೆ ಒಳಗಾದ ಯುವಕರು ಸಾಗರ ವಿರುದ್ಧ ಕ್ಯಾಂಪ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ABOUT THE AUTHOR

...view details