ಬೆಳಗಾವಿ: ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣಾ ಎದುರಿಸುತ್ತೇವೆ. ಮುಖ್ಯಮಂತ್ರಿ ಬದಲಾವಣೆ ಬರೀ ಗಾಳಿ ಸುದ್ದಿ, ಅದು ಕಾಲ್ಪನಿಕ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಸಿಎಂ ಭಾವನಾತ್ಮಕ ಭಾಷಣ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆ ಉದ್ಭವ ಆಗಲ್ಲ. ಯಾರು ಕನಸು ಕಾಣುವುದೂ ಬೇಡ. ದಿನ ಬೆಳಗಾದ್ರೆ ಜೋತಿಷ್ಯವನ್ನ ಹೇಳ್ತಾ ಇರ್ತಾರೆ. ನಾವು ಜೋತಿಷ್ಯವನ್ನ ನಂಬುವುದೂ ಇಲ್ಲ. ಕೇಳುವುದು ಇಲ್ಲ. ಸಿಎಂ ಜೊತೆ ನಾವು ಇದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಕಾಲ್ನಡಿಗೆಯಲ್ಲಿ ಸುವರ್ಣ ಸೌಧಕ್ಕೆ ತೆರಳಿ ಮುತ್ತಿಗೆ ಹಾಕುತ್ತೇವೆ : ಕರವೇ ನಾರಾಯಣಗೌಡ
ಕ್ಷೇತ್ರದ ಜನ ಪ್ರೀತಿಯಿಂದ ಗೆಲ್ಲಿಸಿದ್ದಾರೆ. ಅದಕ್ಕಾಗಿ ಹಾಗೇ ಮಾತನಾಡಿದ್ದಾರೆ. ನಾನು ಸಿಎಂ ಬಳಿ ಮಾತನಾಡಿದ್ದೇನೆ. ಕ್ಷೇತ್ರದ ಜನರ ಬಳಿ ಪ್ರೀತಿಯಿಂದ ಹಾಗೇ ಹೇಳಿದ್ದಾರೆ. ಮುಖ್ಯಮಂತ್ರಿ ಯಾವುದೇ ಅಡೆತಡೆಯಲ್ಲಿದೆ ಮುಂದುವರೆಯುತ್ತಾರೆ. ಗಟ್ಟಿಯಾದ ಮುಖ್ಯಮಂತ್ರಿ ಮುಂದಿನ ಚುನಾವಣೆ ಎದುರಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.
ಸಿಎಂ ಕುರ್ಚಿ ಮೇಲೆ ಯಾರೂ ಸಹ ಕನಸು ಕಾಣೋದು ಬೇಡ. ಬೊಮ್ಮಾಯಿ ನಾಯಕತ್ವದಲ್ಲೇ ಚುನಾವಣೆ ಎಂದಿದ್ದಾರೆ. ನಮ್ಮ ವರಿಷ್ಠ ನಾಯಕರು ಹೇಳಿದ್ದಾರೆ ಎಂದರು.
ಸಿಎಂ ಬದಲಾವಣೆ ಕೇವಲ ಊಹಾಪೋಹ:
ಈ ಬಗ್ಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸಹ ಪ್ರತಿಕ್ರಿಯೆ ನೀಡಿದ್ದು, ಸಿಎಂ ಭಾವನಾತ್ಮಕವಾಗಿ ಕ್ಷೇತ್ರದ ಜನರ ಮುಂದೆ ಮಾತನಾಡಿದ್ದಾರೆ. ಸಿಎಂ ಬದಲಾವಣೆ ಊಹಾಪೋಹ. ರಾಷ್ಟ್ರೀಯ ನಾಯಕರು ಯಡಿಯೂರಪ್ಪ ಅವರೆಲ್ಲರೂ ಒಟ್ಟಾಗಿ ಸರ್ವಾನುಮತದಿಂದ ತೀರ್ಮಾನ ಮಾಡಿ ಬೊಮ್ಮಾಯಿರನ್ನು ಸಿಎಂ ಮಾಡಿದ್ದಾರೆ. ಬದಲಾವಣೆ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಷ್ಟ್ರೀಯ ನಾಯಕರು ಯಾರೂ ಆ ರೀತಿ ಹೇಳಿಲ್ಲ. ರಾಷ್ಟ್ರೀಯ ನಾಯಕರು ಹೇಳಿದರೆ ಅದಕ್ಕೆ ಅರ್ಥ ಇರುತ್ತದೆ. ಸಿಎಂ ಆಗಿ ಬೊಮ್ಮಾಯಿ ಅವರೇ ಮುಂದುವರಿಯುತ್ತಾರೆ ಎಂದರು.
ಅಧಿಕಾರ ಶಾಶ್ವತ ಅಲ್ಲ ಅಂತ ಹೇಳಿದ್ದಾರೆ ಅಷ್ಟೇ. ಜನರ ಪ್ರೀತಿ ಮುಂದೆ ಯಾವುದೇ ಸ್ಥಾನಮಾನ ಶಾಸ್ವತ ಅಲ್ಲ ಎಂದಿದ್ದಾರೆ. ಎಲ್ಲಾ ಬಿಜೆಪಿ ಶಾಸಕರು ಬೊಮ್ಮಾಯಿ ಜೊತೆಗೆ ಇದ್ದಾರೆ. ಯಾವುದೇ ಶಾಸಕರು ಬಸವರಾಜ ಬೊಮ್ಮಾಯಿ ಬಗ್ಗೆ ಅಸಮಾಧಾನ ಹೊಂದಿಲ್ಲ ಎಂದು ತಿಳಿಸಿದರು.