ಕರ್ನಾಟಕ

karnataka

ನನಗೆ ನನ್ನ ಜನ ಸನ್ಮಾನ ಮಾಡಿದ್ದಾರೆ: ರಮೇಶ್​ ಜಾರಕಿಹೊಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್..

By

Published : May 14, 2023, 4:33 PM IST

135ರಲ್ಲಿ ಬೆಳಗಾವಿ ಜಿಲ್ಲೆಯೊಂದರಿಂದಲೇ 11 ಜನ ಸಿಎಲ್​ಪಿ ಸಭೆಗೆ ಹೋಗುತ್ತಿರೋದು ಸ್ವಾಭಿಮಾನದ ಪ್ರತೀಕ ಎಂದು ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿದರು.

lakshmi-hebbalkar-reaction-on-ramesh-jarakiholli
ನನಗೆ ನನ್ನ ಜನ ಸನ್ಮಾನ ಮಾಡಿದ್ದಾರೆ: ರಮೇಶ ಜಾರಕಿಹೊಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್..

ಬೆಳಗಾವಿ:ಬೆಳಗಾವಿ ಗ್ರಾಮೀಣ ಕ್ಷೇತ್ರ ಸೋತ್ರೆ ನಮಗೆ ಅಪಮಾನ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನನಗೆ ನನ್ನ ಜನ ಸನ್ಮಾನ ಮಾಡಿದ್ದಾರೆ ಎಂದಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​, ಸಿಎಲ್​ಪಿ ನಾಯಕ ಸಿದ್ದರಾಮಯ್ಯ ಅವರಿಗೆ ಭಾಷೆ ಕೊಟ್ಟಿದ್ವಿ. ಜಿಲ್ಲೆಯ ಎಲ್ಲ ನಾಯಕರು ಸಾಮೂಹಿಕ ನಾಯಕತ್ವದಲ್ಲಿ ಸತೀಶ್ ಜಾರಕಿಹೊಳಿ ನಾಯಕತ್ವದಲ್ಲಿ 12 ಕ್ಷೇತ್ರಗಳಲ್ಲಿ ಗೆಲ್ಲೋದಾಗಿ ಹೇಳಿದ್ವಿ. ಜಿಲ್ಲೆಯ 11 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದೇವೆ ಎಂದರು.

ಬೆಳಗಾವಿ ಜಿಲ್ಲಾ ರಾಜಕಾರಣ ಇತಿಹಾಸದಲ್ಲಿ ಇಷ್ಟೊಂದು ಸೀಟ್ ಕಾಂಗ್ರೆಸ್​ಗೆ ಬಂದಿರಲಿಲ್ಲ. ಬಹಳ ಧೈರ್ಯದಿಂದ ಸಿಎಲ್​ಪಿ ಸಭೆಯಲ್ಲಿ ಮುಖ ಎತ್ತಿ ಮಾತನಾಡುವ ಧೈರ್ಯ ಇಟ್ಟುಕೊಂಡು ಹೋಗುತ್ತಿದ್ದೇವೆ. 135ರಲ್ಲಿ ಬೆಳಗಾವಿ ಜಿಲ್ಲೆಯೊಂದರಿಂದಲೇ 11 ಜನ ಸಿಎಲ್​ಪಿ ಸಭೆಗೆ ಹೋಗುತ್ತಿರೋದು ಸ್ವಾಭಿಮಾನದ ಪ್ರತೀಕ. ಹೀಗಾಗಿ ಖುಷಿಯಿಂದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹೋಗುತ್ತಿದ್ದೇನೆ. ಕಾಂಗ್ರೆಸ್ ಪಕ್ಷದ ಒಗ್ಗಟ್ಟು, ಜಿಲ್ಲೆಯ ನೇತೃತ್ವ ಗೆಲುವಿಗೆ ಪ್ರಮುಖ ಕಾರಣ, ನಿ‌ನ್ನೆ ಸತೀಶ್ ಜಾರಕಿಹೊಳಿ ಹೋಗಿದ್ದಾರೆ. ಇಂದು ಐದಾರು ಜನ ಶಾಸಕರು ಹೋಗುತ್ತಿದ್ದೇವೆ ಎಂದು ಹೇಳಿದರು.

ಸಿಎಂ ಆಯ್ಕೆ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದ ಲಕ್ಷ್ಮೀ ಹೆಬ್ಬಾಳ್ಕರ್, ಬೆಳಗಾವಿ ಜಿಲ್ಲೆಗೆ ಹೆಚ್ಚಿನ ಸಚಿವ ಸ್ಥಾನ ಸಿಗುತ್ತಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಬೆಳಗಾವಿ ದೊಡ್ಡ ಜಿಲ್ಲೆ ಎರಡನೇ ರಾಜಧಾನಿ ಎಂದು ಹೇಳ್ತೀವಿ. ಬೆಳಗಾವಿ ಯಾವತ್ತಿದ್ದರೂ ಪವರ್ ಸೆಂಟರ್ ಇದೆ. ಖಂಡಿತವಾಗಿ ಬೆಳಗಾವಿ ಜಿಲ್ಲೆಗೆ ಹೆಚ್ಚಿನ ಸಚಿವ ಸ್ಥಾನಗಳು ಸಿಗುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಲಕ್ಷ್ಮೀ ಅಕ್ಕಾ ಮಂತ್ರಿ ಪಕ್ಕಾ ಎಂದು ಅಭಿಮಾನಿಗಳ ಅಭಿಯಾನದ ಕುರಿತು ಮಾತನಾಡಿ, ನನ್ನ ಅಭಿಮಾನಿಗಳಿಗೆ ಧನ್ಯವಾದ ಹೇಳುವೆ. ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳುತ್ತೋ, ಕೊಟ್ಟ ಜವಾಬ್ದಾರಿ ನಿಭಾಯಿಸುತ್ತೇನೆ. ನಾನು ಅದರ ಬಗ್ಗೆ ಏನು ಮಾತನಾಡಲ್ಲ ಎಂದರು.

135 ಜನ ಗೆದ್ದಿದ್ದೇವೆ. ಕರ್ನಾಟಕದ ಮಹಾಜನತೆ ಆಶೀರ್ವಾದ ಮಾಡಿದ್ದಾರೆ. ಅಧಿಕಾರದ ಆಸೆಗೆ ನೋ ಬಾರ್ಗೇನಿಂಗ್​. ರಾಜ್ಯದ ಜನರಿಗೆ ಕೊಟ್ಟ ಐದು ಭರವಸೆ ಈಡೇರಿಸುವುದು ನಮ್ಮೆಲ್ಲರ ಲಕ್ಷ್ಯ ಹೊರತಾಗಿ ಅಧಿಕಾರದ ಆಸೆ ಅಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ರು.

ಬೆಂಗಳೂರು ತಲುಪಿದ ನೂತನ ಶಾಸಕರು:ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆಯ ಹಿನ್ನೆಲೆ ಬೆಳಗಾವಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೂತನ ಹಲವು ಕಾಂಗ್ರೆಸ್ ಶಾಸಕರು ತಲುಪಿದ್ದಾರೆ. ಶಾಸಕರಾದ ಲಕ್ಷಣ್ ಸವದಿ, ಲಕ್ಷ್ಮೀ ಹೆಬ್ಬಾಳ್ಕರ್, ಈಶ್ವರ್ ಖಂಡ್ರೆ, ಸೇರಿದಂತೆ ಹಲವು ನೂತನ ಶಾಸಕರು ಬೆಂಗಳೂರಿಗೆ ಬಂದಿಳಿದಿದ್ದಾರೆ. ಈ ವೇಳೆ ಕೆಂಪೇಗೌಡ ಏರ್​ಪೋರ್ಟ್​​​ನಲ್ಲಿ ಲಕ್ಷ್ಮಣ್​ ಸವದಿ ಮಾತನಾಡಿದ್ದು, ಇಡೀ ರಾಜ್ಯದ ಜನ ಬಿಜೆಪಿಯನ್ನ ತಿರಸ್ಕಾರ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸ್ವಷ್ಟವಾದ ಬಹುಮತ ನೀಡಿದ್ದಾರೆ ಎಂದರು.

ಇದನ್ನೂ ಓದಿ:ಸ್ಪಷ್ಟ ಬಹುಮತ ಪಡೆದ ಕಾಂಗ್ರೆಸ್ ಪಕ್ಷಕ್ಕೆ ಅಭಿನಂದನೆ: ಸಂಸದೆ ಮಂಗಳಾ ಅಂಗಡಿ

ABOUT THE AUTHOR

...view details