ಕರ್ನಾಟಕ

karnataka

ನೆರೆ ಪರಿಹಾರ ವಿಳಂಬ: ಪಂಚಾಯಿತಿ ಕಚೇರಿ ಎದುರೇ ಆತ್ಮಹತ್ಯೆಗೆ ಯತ್ನಿಸಿದ ರೈತ

By

Published : Oct 10, 2019, 1:52 PM IST

ನೆರೆ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗುಳ ಗ್ರಾಮದಲ್ಲಿ ರೈತನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗ್ರಾಮದ ರವೀಂದ್ರ ಗುಣಕೆ ಎಂಬ ರೈತ ಗ್ರಾಮ ಪಂಚಾಯತಿ ಕಚೇರಿ ಮುಂಭಾಗವೇ ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಆತ್ಮಹತ್ಯೆಗೆ ಯತ್ನಿಸಿದ ರೈತ

ಚಿಕ್ಕೋಡಿ:ನೆರೆ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗುಳ ಗ್ರಾಮದಲ್ಲಿ ರೈತನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗ್ರಾಮದ ರವೀಂದ್ರ ಗುಣಕೆ ಎಂಬ ರೈತ ಗ್ರಾಮ ಪಂಚಾಯತಿ ಕಚೇರಿ ಮುಂಭಾಗವೇ ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ನೆರೆ ಪರಿಹಾರದ ಕುರಿತು ಗ್ರಾಮ ಪಂಚಾಯತಿಗೆ ಕೇಳಲು ತೆರಳಿದ್ದ ರವೀಂದ್ರನಿಗೆ ಗ್ರಾಮ ಪಂಚಾಯತಿ ಸಿಬ್ಬಂದಿ ಸರಿಯಾಗಿ ಸ್ಪಂದಿಸಿಲ್ಲ. ಹಾಗೆಯೇ ಗ್ರಾಮ ಪಂಚಾಯತಿ ಸಿಬ್ಬಂದಿ ಸರಿಯಾದ ಸರ್ವೆಗಳನ್ನ ಮಾಡುತ್ತಿಲ್ಲ, ಸರ್ಕಾರದಿಂದ ಪರಿಹಾರ ಕೂಡ ಬರುತ್ತಿಲ್ಲವೆಂದು ಮನನೊಂದು ವಿಷ ಸೇವಿಸಿದ್ದಾನೆ. ಇನ್ನು ರವೀಂದ್ರನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Intro:ಪರಿಹಾರ ಸಿಗದ ಹಿನ್ನಲೆ ನೆರೆ ಸಂತ್ರಸ್ತನಿಂದ ಆತ್ಮಹತ್ಯೆಗೆ ಯತ್ನ
Body:
ಚಿಕ್ಕೋಡಿ :

ಪರಿಹಾರ ಸಿಗದ ಹಿನ್ನಲೆಯಲ್ಲಿ ನೆರೆ ಸಂತ್ರಸ್ತ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜೂಗಳ ಗ್ರಾಮದಲ್ಲಿ ನಡೆದಿದೆ.

ಜುಗುಳ ಗ್ರಾಮ ಪಂಚಾಯತನಲ್ಲೇ ವಿಷ ಸೇವಿಸಿದ ಸಂತ್ರಸ್ತ ರವೀಂದ್ರ ಗುಣಕೆ (35) ಗ್ರಾಮ ಪಂಚಾಯತ ಸಿಬ್ಬಂದಿ ಸರಿಯಾದ ಸರ್ವೆಗಳನ್ನ ಮಾಡುತ್ತಿಲ್ಲ. ಸರ್ಕಾರದಿಂದ ಪರಿಹಾರ ಕೂಡ ಬರುತ್ತಿಲ್ಲ. ಪರಿಹಾರದ ಕುರಿತು ಗ್ರಾಮ ಪಂಚಾಯತಿಗೆ ಕೇಳಲು ತೆರಳಿದ್ದ ರವೀಂದ್ರನಿಗೆ ಗ್ರಾ.ಪಂ ಸಿಬ್ಬಂದಿ ಸರಿಯಾಗಿ ಸ್ಪಂದಿಸದ ಹಿನ್ನಲೆಯಲ್ಲಿ ಮನನೊಂದು ವಿಷ ಸೇವಿಸಿದ್ದಾನೆ. ರವೀಂದ್ರನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಘಟನೆ ಕಾಗವಾಡ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ

ABOUT THE AUTHOR

...view details