ಕರ್ನಾಟಕ

karnataka

ಕೊರೊನಾ ನೆಗೆಟಿವ್‌ ವರದಿಗೂ ಮುನ್ನವೇ ಆಸ್ಪತ್ರೆಯಿಂದ ರಮೇಶ್ ಜಾರಕಿಹೊಳಿ ಡಿಸ್ಚಾರ್ಜ್‌

By

Published : Apr 7, 2021, 8:51 AM IST

ಕೊರೊನಾ ತಗುಲಿ ಗೋಕಾಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಇಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ರಮೇಶ್ ಜಾರಕಿಹೊಳಿ‌ ಡಿಶ್ಚಾರ್ಜ್
Former Minister Ramesh Jarkiholi discharged from hospital

ಬೆಳಗಾವಿ:ಕೊರೊನಾ ಸೋಂಕಿನಿಂದ ಗೋಕಾಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಇಂದು‌ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಆಸ್ಪತ್ರೆಯಿಂದ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಡಿಸ್ಚಾರ್ಜ್​

ಕೊರೊನಾ ಜೊತೆಗೆ ರಮೇಶ್ ಜಾರಕಿಹೊಳಿ‌ ದೇಹದಲ್ಲಿ ಮಧುಮೇಹ ಹಾಗೂ ರಕ್ತದೊತ್ತಡ ಹೆಚ್ಚಾಗಿತ್ತು. ಈ ಕಾರಣಕ್ಕೆ ಮೂರು ದಿನಗಳ ಹಿಂದೆ ಅವರು ಗೋಕಾಕಿನ ಸರ್ಕಾರಿ ಆಸ್ಪತ್ರೆಯ ಐಸಿಯು ವಾರ್ಡ್​​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಅವರ ದೇಹದಲ್ಲಿ ಶುಗರ್ ಹಾಗೂ ಬಿಪಿ ಸಹಜ ಸ್ಥಿತಿಗೆ ಬಂದಿದ್ದು, ಮನೆಯಲ್ಲೇ ಕ್ವಾರಂಟೈನ್ ಆಗುವುದಾಗಿ ಹೇಳಿ ರಮೇಶ್ ಜಾರಕಿಹೊಳಿ‌ ಬಿಡುಗಡೆ ಆಗಿದ್ದಾರೆ.

ಕೊರೊನಾ ವರದಿ ನೆಗೆಟಿವ್ ಬಂದಿಲ್ಲ. ಆದರೂ ನಾನು ಮನೆಯಲ್ಲಿ ಹೋಮ್ ಕ್ವಾರಂಟೈನ್ ಹಾಗೂ ಕೊರೊನಾ ಮಾರ್ಗಸೂಚಿ ಪಾಲಿಸುವುದಾಗಿ ಹೇಳಿ ಅವರು ಮನೆಗೆ ತೆರಳಿದ್ದಾರೆ.

ಇದನ್ನೂ ಓದಿ: ಬಸ್ ಸ್ಟಾಪ್‌: ತಪ್ಪದ ಪ್ರಯಾಣಿಕರ ಪರದಾಟ

ರಮೇಶ್ ಜಾರಕಿಹೊಳಿ‌ ಇನ್ನೂ 12 ದಿನ ಮನೆಯಲ್ಲಿಯೇ ಕ್ವಾರಂಟೈನ್ ಆಗಲಿದ್ದು, ಕೊರೊನಾ ವರದಿ ನೆಗೆಟಿವ್ ಬಂದ ನಂತರ ಅವರು ಮತ್ತಷ್ಟು ದಿನ ವಿಶ್ರಾಂತಿ ಪಡೆಯಲಿದ್ದಾರೆ. ಬಳಿಕ ಸಿಡಿ ಪ್ರಕರಣದ ತನಿಖೆಗೆ ಹಾಜರಾಗುವ ಸಾಧ್ಯತೆ ಇದೆ.

ABOUT THE AUTHOR

...view details