ಕರ್ನಾಟಕ

karnataka

ಸಾಲಗಾರರ ಕಾಟ ತಾಳಲಾರದೆ ಫೇಸ್​​ಬುಕ್ ಲೈವ್‌ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ರೈತ

By

Published : Aug 28, 2021, 12:53 PM IST

ಸಾಲಗಾರರ ಕಾಟ ತಾಳಲಾರದೆ ರೈತನೋರ್ವ ಫೆಸ್​​​​ಬುಕ್ ಲೈವ್​​​ನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಹಣ ನೀಡಿದರು ರೈತನ ಟ್ರ್ಯಾಕ್ಟರ್ ವಾಪಾಸು ನೀಡದೆ ಸಾಲಗಾರರು ಸತಾಯಿಸುತ್ತಿದ್ದಾರೆ ಎಂದು ರೈತ ಆರೋಪಿಸಿದ್ದಾನೆ.

Farmer attempt suicide making Facebook live video
ಸಾಲಗಾರರ ಕಾಟ ತಾಳಲಾರದೆ ಫೇಸ್​​ಬುಕ್ ಲೈವ್​​ ಬಂದು ಆತ್ಮಹತ್ಯೆಗೆ ಯತ್ನಿಸಿದ ರೈತ

ಬೆಳಗಾವಿ: ಸಾಲಗಾರರ ಕಾಟಕ್ಕೆ ಬೇಸತ್ತ ವ್ಯಕ್ತಿಯೊಬ್ಬ ಫೇಸ್‌ಬುಕ್‌ ಲೈವ್‌ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗೋಕಾಕ್​ನಲ್ಲಿ ನಡೆದಿದೆ. ಜಿಲ್ಲೆಯ ಗೋಕಾಕ್ ತಾಲೂಕಿನ ಮಕ್ಕಳಗೇರಿ ಗ್ರಾಮದ ಲಕ್ಷ್ಮಣ ಇಳಗೇರಿ ಆತ್ಮಹತ್ಯೆಗೆ ಯತ್ನಿಸಿದ ರೈತ.

ಸಾಲಗಾರರ ಕಾಟ ತಾಳಲಾರದೆ ಫೇಸ್​​ಬುಕ್ ಲೈವ್​​ ಬಂದು ಆತ್ಮಹತ್ಯೆಗೆ ಯತ್ನಿಸಿದ ರೈತ

ಅದೃಷ್ಟವಶಾತ್ ಲಕ್ಷ್ಮಣ ಪ್ರಾಣಾಪಾಯದಿಂದ ಪಾರಾಗಿದ್ದು, ಗೋಕಾಕ್​​​ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ರೈತ ಮಾಡಿರುವ ಫೇಸ್​ಬುಕ್​​​​ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಂತ್ರಸ್ತ ವಿಷ ಸೇವನೆಗೂ ಮುನ್ನಾ ಈ ನಿರ್ಧಾರಕ್ಕೆ ಕಾರಣ ಏನು ಎನ್ನುವುದನ್ನು ತಿಳಿಸಿದ್ದು, ಮೂವರು ಆರೋಪಿಗಳ ಹೆಸರನ್ನು ಹೇಳಿದ್ದಾನೆ.

ಆರೋಪಿಗಳು ತನ್ನ ಟ್ರ್ಯಾಕ್ಟರ್‌ ಕಸಿದುಕೊಂಡು ಹೋಗಿ ಕಿರುಕುಳ ನೀಡಿದ್ದಾರೆ. ಅರುಣ ಪವಾರ, ಅಶೋಕ ಅಂಕಲಗಿ ಮತ್ತು ಯಲ್ಲಪ್ಪ ಗಸ್ತಿ ಈ ಮೂವರು ಕಿರುಕುಳ ನೀಡಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಿದ್ದಾರೆ. ಒಮ್ಮೆ 25 ಸಾವಿರ, ಮತ್ತೊಮ್ಮೆ 1 ಲಕ್ಷ ರೂ.ಗಳನ್ನು ಕಟ್ಟಿ ಮೂರು ತಿಂಗಳು ಕಳೆದರೂ ಟ್ರ್ಯಾಕ್ಟರ್‌ ಕೊಟ್ಟಿಲ್ಲ. ಇನ್ನೂ 3.5 ಲಕ್ಷ ರೂಪಾಯಿ ಪಾವತಿಸದಿದ್ದರೆ ನಿನ್ನ ಹೊಲ, ಮನೆ ಮಾರಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ರೈತ ಅಳಲು ತೋಡಿಕೊಂಡಿದ್ದಾನೆ.

ಇವರಿಂದ ಮಾನಸಿಕ ಹಿಂಸೆ ತಾಳಲಾಗದೆ ಕ್ರಿಮಿನಾಶಕ ಸೇವಿಸಿರುವುದಾಗಿ ತಿಳಿಸಿದ್ದಾನೆ. ಘಟನೆ ಸಂಬಂಧ ಗೋಕಾಕ್​ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ:ರಸ್ತೆಯಲ್ಲಿ ಆಟೋ ಚಾಲಕನಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ ಪುಂಡ: ವಿಡಿಯೋ ವೈರಲ್

ABOUT THE AUTHOR

...view details