ಕರ್ನಾಟಕ

karnataka

ಮತದಾರರ ಮಾಹಿತಿ ಕಳ್ಳತನಕ್ಕೂ, ಕುಕ್ಕರ್ ಬ್ಲಾಸ್ಟ್‌ಗೂ ಲಿಂಕ್ ಮಾಡಬೇಡಿ: ಸಿಎಂ

By

Published : Dec 27, 2022, 9:44 PM IST

ಭಯೋತ್ಪಾದನೆ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಮತದಾರರ ಮಾಹಿತಿ ಕಳ್ಳತನಕ್ಕೂ ಕುಕ್ಕರ್​ ಬಾಂಬ್​ ಸ್ಪೋಟ ಪ್ರಕರಣಕ್ಕೂ ಸಂಬಂಧ ಕಲ್ಪಿಸಬೇಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದರು.

dont-link-between-voter-identity-theft-case-and-cooker-blast-case-says-cm-basavaraja-bommai
ಮತದಾರರ ಮಾಹಿತಿ ಕಳ್ಳತನಕ್ಕೂ, ಕುಕ್ಕರ್ ಬ್ಲಾಸ್ಟ್ ಗೂ ಲಿಂಕ್ ಮಾಡಬೇಡಿ, ಇದು ಎಷ್ಟು ಸರಿ?: ಸಿಎಂ ಬೊಮ್ಮಾಯಿ

ಬೆಂಗಳೂರು/ಬೆಳಗಾವಿ: ಮತದಾರರ ಮಾಹಿತಿ ಕಳ್ಳತನಕ್ಕೂ ಕುಕ್ಕರ್ ಬ್ಲಾಸ್ಟ್‌ಗೂ ಸಂಬಂಧ ಕಲ್ಪಿಸಬೇಡಿ ಎಂದು ಸಿಎಂ ಬೊಮ್ಮಾಯಿ ಡಿಕೆಶಿಗೆ ಮನವಿ ಮಾಡಿದರು. ವಿಧಾನಸಭೆಯಲ್ಲಿ ನಿಯಮ 69ರಡಿ ಭಯೋತ್ಪಾದನೆ ಬಗೆಗಿನ ಚರ್ಚೆ ವೇಳೆ ಮಾತನಾಡಿದ ಅವರು, ವೋಟ್​ ಕದಿಯುವಂತದ್ದು, ಇಲ್ಲದವರನ್ನು ಸೇರಿಸುವುದು, ಬೇಡದವರನ್ನು ತೆಗೆಯುವುದು ನಮ್ಮ ಪಕ್ಷದ ಸಂಸ್ಕೃತಿಯಲ್ಲ ಎಂದರು.

ಮುಂದುವರೆದು ಮಾತನಾಡಿ, ಇದು ಇವತ್ತಿನಿಂದ ನಡೆದಿದ್ದಲ್ಲ. ಬಿಲ್‌ಓಗಳ ನೇಮಕಕ್ಕೆ ನಾವು ಯಾರಿಗೂ ಅಧಿಕಾರ ಕೊಟ್ಟಿಲ್ಲ. ಆ ಸಂಸ್ಥೆಗೆ ಸ್ವೀಪ್ ಮಾಡಲು 2017ರಲ್ಲಿ ಅಧಿಕಾರ ಕೊಡಲಾಗಿತ್ತು. ಅವರ ಸರ್ಕಾರ ಇದ್ದಾಗಲೇ ಕೊಟ್ಟಿತ್ತು. ತನಿಖೆ ನಡೆಯುತ್ತಿದೆ. ಎಲ್ಲವೂ ಹೊರಗೆ ಬರಲಿ ಎಂದು ಹೇಳಿದರು.

ಹೆಸರು ಡಿಲೀಟ್ ಆಗಿದ್ದರೆ, ಯಾರು ತಪ್ಪು ಮಾಡಿದ್ದಾರೋ ಅವರನ್ನು ನೇಣಿಗೆ ಹಾಕೋಣ. ಅದರಲ್ಲಿ ಯಾವುದನ್ನೂ ಮುಚ್ಚಿಡುವ ಪ್ರಶ್ನೆಯೇ ಇಲ್ಲ. ಆದರೆ ಭಯೋತ್ಪಾದನೆ ವಿಚಾರದಲ್ಲಿ, ಕುಕ್ಕರ್ ಬ್ಲಾಸ್ಟ್ ಆದಾಗ ಅದರ ಬಗ್ಗೆ ಮಾತನಾಡಲೇ ಬಾರದು, ವೋಟ್ ಕಳ್ಳತನ ಮುಚ್ಚಲು ಇದನ್ನು ಮಾಡಲಾಗಿದೆ ಎಂಬುದು ಎಷ್ಟರ ಮಟ್ಟಿಗೆ ಸರಿ?. ಭಯೋತ್ಪಾದನೆಗೆ ತನ್ನದೇ ಆದ ಗಾಂಭಿರ್ಯತೆ ಇದೆ. ಎನ್‌ಐಎ ಸುಮ್ಮನೆ ಕೇಸ್‌ ತೆಗೆದುಕೊಳ್ಳುವುದಿಲ್ಲ. ಭಯೋತ್ಪಾದಕತೆ ವಿಚಾರದಲ್ಲಿ ಯಾವುದೇ ರಾಜಿ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಹು-ಧಾ ಕುಡಿಯುವ ನೀರು ಯೋಜನೆಯ ಗುತ್ತಿಗೆದಾರರ ಬದಲಾವಣೆಗೆ ಕ್ರಮ: ಸಚಿವ ಬೈರತಿ

ABOUT THE AUTHOR

...view details