ಕರ್ನಾಟಕ

karnataka

ಪಶ್ಚಿಮ ಶಿಕ್ಷಕರ ಕ್ಷೇತ್ರದ ಮತಗಳಲ್ಲಿ ವ್ಯತ್ಯಾಸ ಕಂಡು ದಂಗಾದ ಅಧಿಕಾರಿಗಳು

By

Published : Jun 15, 2022, 10:55 AM IST

Updated : Jun 15, 2022, 11:20 AM IST

ಪಶ್ಚಿಮ ಶಿಕ್ಷಕ ಕ್ಷೇತ್ರದ ಮತಪೆಟ್ಟಿಗೆಯಲ್ಲಿ ಹೆಚ್ಚುವರಿಯಾಗಿ ಎರಡು ಮತಗಳು ಸೇರ್ಪಡೆಯಾಗಿವೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು ಚಲಾವಣೆಗೊಂಡ ಮತಗಳ ಸಂಖ್ಯೆ 15,577 ಆಗಿದ್ದು, ಮತಪೆಟ್ಟಿಗೆಯಲ್ಲಿರುವ ಮತಗಳ ಸಂಖ್ಯೆ 15,579 ಆಗಿದೆ.

difference-in-votes-in-counting-at-council-election
ಪಶ್ಚಿಮ ಶಿಕ್ಷಕರ ಕ್ಷೇತ್ರದ ಮತಗಳಲ್ಲಿ ವ್ಯತ್ಯಾಸ ಕಂಡು ದಂಗಾದ ಅಧಿಕಾರಿಗಳು

ಬೆಳಗಾವಿ:ನಗರದ ಜ್ಯೋತಿ ಕಾಲೇಜಿನಲ್ಲಿ ವಿಧಾನಪರಿಷತ್​ ಚುನಾವಣೆ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಪಶ್ಚಿಮ ಶಿಕ್ಷಕರ ಕ್ಷೇತ್ರದ ಮತಗಳಲ್ಲಿ ವ್ಯತ್ಯಾಸ ಕಂಡು ಅಧಿಕಾರಿಗಳು ದಂಗಾದರು. ಒಟ್ಟು ಚಲಾವಣೆಗೊಂಡ ಮತ ಹಾಗೂ ಮತಪೆಟ್ಟಿಗೆಯಲ್ಲಿರುವ ಮತಗಳಲ್ಲಿ ವ್ಯತ್ಯಾಸ ಕಂಡು ಬಂದಿದೆ.

ಮತಪೆಟ್ಟಿಗೆಯಲ್ಲಿ ಹೆಚ್ಚುವರಿಯಾಗಿ ಎರಡು ಮತಗಳು ಸೇರ್ಪಡೆಯಾಗಿವೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು ಚಲಾವಣೆಗೊಂಡ ಮತಗಳ ಸಂಖ್ಯೆ 15,577 ಆಗಿದ್ದು, ಮತಪೆಟ್ಟಿಗೆಯಲ್ಲಿರುವ ಮತಗಳ ಸಂಖ್ಯೆ 15,579 ಆಗಿದೆ.

ಹುಬ್ಬಳ್ಳಿಯ ರೋಟರಿ ಶಾಲೆಯ ಮತಗಟ್ಟೆಯಲ್ಲಿನ ಮತಗಳಲ್ಲಿ ವ್ಯತ್ಯಾಸ ಉಂಟಾಗಿದೆ. ಮತದಾನ ದಿನದಂದು ಅಲ್ಲಿ 757 ಮತಗಳು ದಾಖಲಾಗಿತ್ತು. 25 ಮತಗಳ ಬಂಡಲ್ ಸಿದ್ದಪಡಿಸುವಾಗ 2 ಮತಗಳು ಹೆಚ್ಚಿಗೆ ಬಂದಿವೆ. ನಾಲ್ಕು ಬಾರಿ ಮತಗಳ ಲೆಕ್ಕ ಮಾಡಿದರೂ 2 ಮತಗಳು ಹೆಚ್ಚಿಗೆ ಆಗಿವೆ. ಮತಗಳ ವ್ಯತ್ಯಾಸಕ್ಕೆ ಜೆಡಿಎಸ್ ಅಭ್ಯರ್ಥಿ ಶ್ರೀಶೈಲ್ ಗಡದಿನ್ನಿ ಆಕ್ಷೇಪ ವ್ಯಕ್ತಪಡಿಸಿದ್ದು, ಚುನಾವಣಾಧಿಕಾರಿಗಳ ವಿರುದ್ಧ ಹರಿಹಾಯ್ದರು.

ವಾಯವ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ವೇಳೆಯೂ ಗೊಂದಲ ಉಂಟಾಗಿದ್ದು, ಮತಪೆಟ್ಟಿಗೆಯಲ್ಲಿ ಮೂರು ಪದವೀಧರ ಮತಗಳು ಕಂಡು ಬಂದಿವೆ. ಮತಗಳ ಕ್ರೋಢೀಕರಣದ ವೇಳೆ ಮತಗಟ್ಟೆ ಸಂಖ್ಯೆ 3ರ ಶಿಕ್ಷಕರ ಕ್ಷೇತ್ರದ ಮತಪೆಟ್ಟಿಗೆಯಲ್ಲಿ ಪದವೀಧರ ಮತಗಳು ಇದ್ದವು.

ಹೆಚ್ಚುವರಿ ಮತ:ಹಾಗೆಯೇ ವಾಯವ್ಯ ಶಿಕ್ಷಕರ ಮತಕ್ಷೇತ್ರದ ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದ ಮತಗಟ್ಟೆ 101(ಎ)ರಲ್ಲಿ ಐದು ಹೆಚ್ಚುವರಿ ಮತಗಳು ಕಂಡುಬಂದಿವೆ. ಮತಪೆಟ್ಟಿಗೆಯಲ್ಲಿ 171 ಮತ ಇದ್ದು, ಹೆಚ್ಚುವರಿ ಐದು ಮತಗಳು ಬಂದಿದ್ದಕ್ಕೆ ಪಕ್ಷೇತರ ಅಭ್ಯರ್ಥಿ ಎನ್.ಬಿ. ಬನ್ನೂರು ಆಕ್ರೋಶ ವ್ಯಕ್ತಪಡಿಸಿದರು.

ನಿಪ್ಪಾಣಿ ನಗರದ ಮತಗಟ್ಟೆಯ ಮತಪೆಟ್ಟಿಗೆಯಲ್ಲೂ ವ್ಯತ್ಯಾಸ ಉಂಟಾಗಿದೆ. ನಿಪ್ಪಾಣಿಯ ಮತಗಟ್ಟೆವೊಂದರಲ್ಲಿ ಮತದಾನ ಆಗಿದ್ದು 595, ಕ್ರೋಢಿಕರಣದ ವೇಳೆ ಮತಪೆಟ್ಟಿಗೆಯಲ್ಲಿರುವ ಮತಗಳ ಸಂಖ್ಯೆ 594 ಇದೆ. ನಾಲ್ಕೈದು ಸಲ ಎಣಿಕೆ ಮಾಡಿದರೂ ಮತಪೆಟ್ಟಿಗೆಯಲ್ಲಿ ವ್ಯತ್ಯಾಸ ಕಂಡುಬಂದಿದೆ.

ಆ್ಯಂಬುಲೆನ್ಸ್​ ಮೂಲಕ ಸಿಬ್ಬಂದಿ ರವಾನೆ

ಸಿಬ್ಬಂದಿ ಅಸ್ವಸ್ಥ: ಕೆಎಸ್​​ಆರ್​ಪಿ ಸಿಬ್ಬಂದಿ ಅಸ್ವಸ್ಥರಾದ ಘಟನೆ ಬೆಳಗಾವಿಯ ಜ್ಯೋತಿ ಕಾಲೇಜಿನ ಮತ ಎಣಿಕೆ ಕೇಂದ್ರದ ಬಳಿ ನಡೆಯಿತು. ಕೆಎಸ್​​ಆರ್​ಪಿ ಹವಾಲ್ದಾರ್ ಪಿ.ಜಿ ಕಾಪಶೆ ತೀವ್ರ ಅಸ್ವಸ್ಥರಾಗಿದ್ದು, ಪೀಟ್ಸ್ ಬಂದ ಕಾರಣ ಪ್ರಜ್ಣೆ ತಪ್ಪಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಆ್ಯಂಬುಲೆನ್ಸ್​ ಮೂಲಕ ಬೆಳಗಾವಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ.

ಇದನ್ನೂ ಓದಿ:ಪರಿಷತ್​ ಚುನಾವಣೆ ಮತ ಎಣಿಕೆ ಆರಂಭ: ಗೆಲವಿನ ವಿಶ್ವಾಸ ವ್ಯಕ್ತಪಡಿಸಿದ ಹನುಮಂತ ನಿರಾಣಿ

Last Updated : Jun 15, 2022, 11:20 AM IST

ABOUT THE AUTHOR

...view details