ಕರ್ನಾಟಕ

karnataka

ಸಂಭಾಜಿ ಕುರಿತು ಸತೀಶ್​ ಜಾರಕಿಹೊಳಿ ಹೇಳಿಕೆ: ರಾಹುಲ್​ ಗಾಂಧಿಗೆ ಪ್ರಶ್ನೆ ಮಾಡಿದ ದೇವೇಂದ್ರ ಫಡ್ನವಿಸ್​

By

Published : Nov 11, 2022, 5:16 PM IST

ಸತೀಶ್ ಜಾರಕಿಹೊಳಿ ಅವರದ್ದು ಎನ್ನಲಾದ ಭಾಷಣದ ವಿಡಿಯೋವನ್ನು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಟ್ವೀಟ್​ ಮಾಡಿ ರಾಹುಲ್​ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ.

KPCC working president Satish Jarkiholi controversial statement
KPCC working president Satish Jarkiholi controversial statement

ಬೆಳಗಾವಿ: ಸತೀಶ್ ಜಾರಕಿಹೊಳಿ ಭಾಷಣದ ಬಗ್ಗೆ ಮತ್ತೊಂದು ವಿವಾದವನ್ನು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಟ್ವೀಟ್​​ ಮೂಲಕ ಹುಟ್ಟುಹಾಕಿದ್ದು ಧರ್ಮವೀರ ಸಂಭಾಜಿ ಮಹಾರಾಜರಿಗೆ ಸತೀಶ್ ಜಾರಕಿಹೊಳಿ ಅಪಮಾನ ಮಾಡಿದ್ದಾರೆ ಎಂದು ಟ್ವಿಟರ್ ಮೂಲಕ ಆರೋಪಿಸಿದ್ದಾರೆ.

ಕಳೆದ ನ.6ರಂದು ನಿಪ್ಪಾಣಿಯಲ್ಲಿ ಮಾನವ ಬಂಧುತ್ವ ವೇದಿಕೆಯಡಿ ನಡೆದಿದ್ದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​​ ಜಾರಕಿಹೊಳಿ‌ ಅವರು ಮಾತನಾಡಿದ್ದಾರೆ ಎನ್ನಲಾದ 42 ನಿಮಿಷದ ಭಾಷಣದ ವಿಡಿಯೋ ತುಣಕನ್ನು ಫಡ್ನವಿಸ್ ಟ್ವೀಟ್​ ಮಾಡಿ ಈ ರಾಹುಲ್​ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ.

'ಧರ್ಮವೀರ ಸಂಭಾಜಿ ಮಹಾರಾಜರ ಬಗ್ಗೆ ದಾರಿತಪ್ಪಿಸುವ, ಅವಮಾನಿಸುವ ಸುಳ್ಳು ಹೇಳಿಕೆ ಒಪ್ಪುತ್ತೀರಾ? ಎಂದು ರಾಹುಲ್ ಗಾಂಧಿಗೆ ಟ್ವೀಟ್​​ ಮೂಲಕ ಪ್ರಶ್ನೆ ಮಾಡಿದ್ದಾರೆ. ಇದು‌‌ ನಿಮ್ಮ ಕಾಂಗ್ರೆಸ್ ಪಕ್ಷದ ಅಧಿಕೃತ ಹೇಳಿಕೆಯಾ? ಮಹಾರಾಷ್ಟ್ರ ಇದನ್ನ ಸಹಿಸೋದಿಲ್ಲ' ಎಂದು ಟ್ವೀಟ್​​​​ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇವೇಂದ್ರ ಫಡ್ನವಿಸ್ ಟ್ವಿಟ್​

ಇದನ್ನೂ ಓದಿ:ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಎಲ್ಲ 6 ಅಪರಾಧಿಗಳ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ

ABOUT THE AUTHOR

...view details