ಕರ್ನಾಟಕ

karnataka

ಚಿಕ್ಕೋಡಿಯಲ್ಲಿ ಮೊಸಳೆಗಳ ಕಾಟ... ಕಂಗೆಟ್ಟ ಜನ

By

Published : Apr 25, 2019, 10:02 AM IST

ಕಳೆದ ಒಂದು ವಾರದಿಂದ ಆಹಾರ ಅರಸಿ ಅಥಣಿ ತಾಲೂಕಿನ ಹುಲಗಬಾಳ, ಕಾಗವಾಡ ಗ್ರಾಮಗಳಿಗೆ ಮೊಸಳೆಗಳು ನುಗ್ಗುತ್ತಿವೆ. ಇದರಿಂದ ಜನರು ಆತಂಕದಲ್ಲೇ ಬದುಕುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಹುಲಗಬಾಳ ಗ್ರಾಮದಲ್ಲಿ ಕಂಡು ಬಂದ ಮೊಸಳೆ

ಚಿಕ್ಕೋಡಿ:ಕೃಷ್ಣಾ ನದಿ ಸಂಪೂರ್ಣ ಬತ್ತುತ್ತಿದ್ದು, ಸುತ್ತಮುತ್ತ ಕಬ್ಬಿನ ಗದ್ದೆಗಳು ಇರುವುದರಿಂದ ಆಹಾರ ಅರಸಿ ಗದ್ದೆಗಳಿಗೆ ಮೊಸಳೆಗಳು ನುಗ್ಗುತ್ತಿವೆ. ಇದರಿಂದ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದ ನದಿ ತೀರದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

ಕಳೆದ ಒಂದು ವಾರದಿಂದ ಆಹಾರಕ್ಕಾಗಿ ಮೊಸಳೆಗಳು ಕಬ್ಬು ಹಾಗೂ ಬಾಳೆ ತೋಟಗಳಿಗೆ ನುಗ್ಗುತ್ತಿವೆ. ಅಥಣಿ ತಾಲೂಕಿನ ಹುಲಗಬಾಳ, ಕಾಗವಾಡ ಗ್ರಾಮಗಳಲ್ಲಿ ಮೊಸಳೆ ಹಾವಳಿಯಿಂದ ಜನರು ಚಿಂತೆಗೀಡಾಗಿದೆ. ಅಲ್ಲದೆ, ಜನರಿಗೆ ರಾತ್ರಿ ವೇಳೆ ಭಯದಿಂದ ಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಿನ್ನೆ ಹುಲಗಬಾಳ ಗ್ರಾಮದ ಪವಾರ್ ಎಂಬುವರ ತೋಟದಲ್ಲಿ ಬೃಹತ್ ಗಾತ್ರದ ಮೊಸಳೆ ಪತ್ತೆಯಾಗಿದೆ. ಗ್ರಾಮದಲ್ಲಿ ಇಲ್ಲಿಯವರೆಗೂ ಒಟ್ಟು ಆರು ಮೊಸಳೆಗಳು ಕಂಡು ಬಂದಿವೆ. ಈ ಕುರಿತಂತೆ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆದರೆ ಯಾವೊಬ್ಬ ಅಧಿಕಾರಿಯೂ ಇತ್ತ ಸುಳಿದಿಲ್ಲ. ಕೂಡಲೇ ಈ ಸಮಸ್ಯೆಗೆ ಪರಿಹಾರ ಕಲ್ಪಿಸಿ ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.

Intro:ಸತತ ನಾಲ್ಕು ಬಾರಿ ಒಂದೇ ಗ್ರಾಮಕ್ಕೆ ಆಗಮಿಸಿದ ಮೊಸಳೆಗಳು
Body:ಚಿಕ್ಕೋಡಿ :

ಕೃಷ್ಣಾ ನದಿ ಸಂಪೂರ್ಣ ಬತ್ತಿದ್ದರಿಂದ ಸುತ್ತಮುತ್ತ ಕಬ್ಬಿನ ಗದ್ದೆಗಳಿರುವುದರಿಂದ ಆಹಾರ ಅರಸಿ ಕಬ್ಬಿನ ಗದ್ದೆಗಳಿಗೆ ಮೊಸಳೆಗಳು ಬರುತ್ತಿರುವುದರಿಂದ ದಿನಂಪ್ರತಿ ಮೊಸಳೆಗಳ ಕಾಟದಿಂದ ಅಥಣಿ, ಕಾಗವಾಡ ತಾಲೂಕಿನ ನದಿ ತೀರದ ಗ್ರಾಮಸ್ಥರು ಬೇಸತ್ತಿದ್ದಾರೆ.

ಆಹಾರ ಅರಸಿ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದ ಪವಾರ್ ಎಂಬವರ ತೋಟ ದಲ್ಲಿ ಬೃಹತ್ ಗಾತ್ರದ ಮೊಸಳೆ ಪತ್ತೆಯಾಗಿದ್ದು. ಮೊಸಳೆಗಳು ಆಹಾರಕ್ಕಾಗಿ ಕಬ್ಬು ಹಾಗೂ ಬಾಳೆಯ ತೋಟಕ್ಕೆ ಬರುತ್ತಿವೆ. ರೈತರು ಮೊಸಳೆ ಹಾವಳಿಯಿಂದ ಚಿಂತೆಗೀಡಾಗಿದ್ದು ಮೊಸಳೆಯಿಂದ ಜಾನುವಾರುಗಳಿಗೂ ಹಾನಿಯಾಗುತ್ತಿದೆ. ರೈತರು ರಾತ್ರಿ ವೇಳೆ ಗದ್ದೆಗಳಿಗೆ ತೆರಳಬೇಕಾದರೆ ಭಯಭೀತರಾಗುತ್ತಿದ್ದಾರೆ.

ಕಳೆದ ಒಂದು ವಾರದಲ್ಲಿ ಅಥಣಿ ಹಾಗೂ ಕಾಗವಾಡ ತಾಲ್ಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ 5 ಮೊಸಳೆಗಳು ಕಂಡುಬಂದಿದ್ದು, ಇದು ಆರನೇಯದ್ದಾಗಿದೆ. ಈ ಮೊಸಳೆ ಹಾವಳಿಯಿಂದಾಗಿ ನದಿ ದಡದ ಗ್ರಾಮಸ್ಥರು ರಾತ್ರಿ ವೇಳೆ ಭಯದಿಂದ ತಿರುಗಾಡುವ ಪರಸ್ಥಿತಿ ನಿರ್ಮಾಣವಾಗಿದೆ.

ಹುಲಗಬಾಳದ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಬಾರದ ಅರಣ್ಯ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತ ಪಡಿಸಿದ ಹುಲಗಬಾಳ ಗ್ರಾಮಸ್ಥರು


Conclusion:ಸಂಜಯ ಕೌಲಗಿ
ಚಿಕ್ಕೋಡಿ

TAGGED:

ABOUT THE AUTHOR

...view details