ಕರ್ನಾಟಕ

karnataka

ಬೆಳಗಾವಿ : ನಿವೃತ್ತ ಯೋಧನನ್ನು ಹತ್ಯೆಗೈದ ಬಾಮೈದ

By ETV Bharat Karnataka Team

Published : Sep 2, 2023, 9:22 PM IST

Updated : Sep 2, 2023, 10:51 PM IST

ನಿವೃತ್ತ ಯೋಧನನ್ನು ಬಾಮೈದ ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ.

crime-brother-in-law-killed-a-retired-soldier-in-chikkodi
ಬೆಳಗಾವಿ : ನಿವೃತ್ತ ಯೋಧನನ್ನು ಹತ್ಯೆಗೈದ ಬಾಮೈದ

ಚಿಕ್ಕೋಡಿ (ಬೆಳಗಾವಿ): ಚಾಕುವಿನಿಂದ ಕತ್ತು ಸೀಳಿ ನಿವೃತ್ತ ಯೋಧನನ್ನು ಬಾಮೈದ ಹತ್ಯೆಗೈದಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಶನಿವಾರ ನಡೆದಿದೆ. ಮೃತರನ್ನು ಚಿಕ್ಕೋಡಿಯ ವಿದ್ಯಾನಗರ ನಿವಾಸಿ ನಿವೃತ್ತ ಯೋಧ ಈರಗೌಡ ಟೋಪಗೋಳ(45) ಎಂದು ಗುರುತಿಸಲಾಗಿದೆ. ಮೃತ ಈರಗೌಡ ಪತ್ನಿಯ ಸಹೋದರ ಸಂಜಯ್ ಭಾಕರೆ ಕೊಲೆಗೈದ ಆರೋಪಿ ಎಂದು ತಿಳಿದುಬಂದಿದೆ.

ಮೂಲತಃ ಜೈನಾಪುರ ಗ್ರಾಮದವರಾಗಿದ್ದ ಈರಗೌಡ ಟೋಪಗೋಳ ಸೇನೆಯಿಂದ ನಿವೃತ್ತಿ ಹೊಂದಿದ ಬಳಿಕ ಸ್ಟೋನ್‌ ಕ್ರಷರ್ ಘಟಕ ನಡೆಸುತ್ತಿದ್ದರು. ಶನಿವಾರ ಸಂಜೆ ಈರಗೌಡರ ಭೇಟಿಗೆ ಆಗಮಿಸಿದ್ದ ಸಂಜಯ್ ಏಕಾಏಕಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಗಂಭೀರ ಗಾಯಗೊಂಡ ಈರಗೌಡ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಕೌಟುಂಬಿಕ ಕಲಹ ಹಿನ್ನೆಲೆ ಕೊಲೆ ನಡೆದಿರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.

ನೀರಿನ ಟ್ಯಾಂಕರ್ ಡಿಕ್ಕಿ .. ವೃದ್ಧೆ ಸ್ಥಳದಲ್ಲೇ ಸಾವು :ರಸ್ತೆ ದಾಟುವಾಗ ನೀರಿನ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ವೃದ್ದೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಖಾನಾಪುರ ರಸ್ತೆಯ ಬೆಮ್ಕೊ- ಮಜಗಾಂವ್ ಕ್ರಾಸ್ ಬಳಿ ಶನಿವಾರ ಸಂಜೆ ನಡೆದಿದೆ. ಮೃತ ವೃದ್ಧೆಯನ್ನು ಉದ್ಯಮಬಾಗ ರಾಜಾರಾಮ ನಗರದ ಜೈರುನ್ನಬಿ ಮೊಹಮ್ಮದ್ ಸಾಬ್ ಚೌಧರಿ(74) ಎಂದು ಗುರುತಿಸಲಾಗಿದೆ.

ಜೈರುನ್ನಬಿ ಅವರು ಅಂಗಡಿಯಿಂದ ಸಾಮಗ್ರಿ ಖರೀದಿಸುವ ಸಲುವಾಗಿ ರಸ್ತೆ ದಾಟುತಿದ್ದಾಗ ವೇಗವಾಗಿ ಬಂದ ನೀರಿನ ಟ್ಯಾಂಕರ್ ಡಿಕ್ಕಿಯಾಗಿದೆ. ಈ ವೇಳೆ ತೀವ್ರ ರಕ್ತಸ್ರಾವವಾಗಿ ಜೈರುನ್ನಬಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ವಿಜಯಪುರ: ಮಕ್ಕಳಿಗೆ ವಿಷ ಹಾಕಿ ತಂದೆ ಆತ್ಮಹತ್ಯೆ ಯತ್ನ, ಇಬ್ಬರು ಕಂದಮ್ಮಗಳು ಸಾವು

Last Updated : Sep 2, 2023, 10:51 PM IST

ABOUT THE AUTHOR

...view details