ಕರ್ನಾಟಕ

karnataka

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಭವಿಷ್ಯ ನುಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ

By

Published : Jan 25, 2023, 8:53 AM IST

ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ಶಹಜಾನ್ ಡೊಂಗರಗಾಂವ ರಾಜಕೀಯ ಸಾಧನೆ ಹಾಗೂ ಜೀವನ ಚರಿತೆ ಗ್ರಂಥ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಸಮ್ಮಿಶ್ರ ಸರ್ಕಾರ ರಚನೆಯ ಕುರಿತು ಪರೋಕ್ಷವಾಗಿ ಮಾತನಾಡಿದರು.

cm ibrahim
ಸಿಎಂ ಇಬ್ರಾಹಿಂ

ಚಿಕ್ಕೋಡಿಯಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ

ಚಿಕ್ಕೋಡಿ: ಸಾರ್ವತ್ರಿಕ ಚುನಾವಣೆ ಮುಗಿದ ಮೇಲೆ ಸರ್ಕಾರ ರಚನೆಗೆ ಯಾರು ಒಳ್ಳೆಯ ಮೇಕಪ್ ಹಾಕಿಕೊಂಡು ಬರ್ತಾರೆ ಎಂದು ಆವಾಗ ನೋಡೋಣ ಎನ್ನುವ ಮೂಲಕ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಮತ್ತೆ ಸಮ್ಮಿಶ್ರ ಸರ್ಕಾರ ರಚನೆ ಸುಳಿವು ಕೊಟ್ಟರು. ಅಥಣಿ ಪಟ್ಟಣದಲ್ಲಿ ಮಾಜಿ ಶಾಸಕ, ಜೆಡಿಎಸ್ ಮುಖಂಡ ಶಹಜಾನ್ ಡೊಂಗರಗಾಂವ ಅವರ ರಾಜಕೀಯ ಸಾಧನೆ ಹಾಗೂ ಜೀವನ ಚರಿತೆ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಸುಳಿವು ನೀಡಿದರು.

ಕಾಂಗ್ರೆಸ್ ಪಕ್ಷದ ಉಚಿತ ವಿದ್ಯುತ್ ಘೋಷಣೆ ವಿಚಾರವಾಗಿ ಪ್ರತಿಕ್ರಿಯಿಸಿ, "ನೀರು ಕೊಡದವರು ಉಚಿತವಾಗಿ ಮಜ್ಜಿಗೆ ನೀಡುತ್ತಾರಾ?. ಕಾಂಗ್ರೆಸ್​ ಮತ್ತು ಬಿಜೆಪಿಯವರು ಎಲ್ಲಾ ಸುಳ್ಳು ಹೇಳುತ್ತಾರೆ. ಆದ್ರೆ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾತ್ರ ಹೇಳಿದಂತೆ ನಡೆಯುತ್ತಾರೆ. ಹೇಳಿದಂತೆ ನಡೆಯುವುದು ಜೆಡಿಎಸ್ ಮಾತ್ರ. ವಿಧಾನಸಭಾ ಚುನಾವಣೆಯಲ್ಲಿ ನಾವು ಸ್ಪಷ್ಟ ಬಹುಮತದೊಂದಿಗೆ ಆಯ್ಕೆಯಾಗಿ ಬರುತ್ತೇವೆ. ಪಂಚರತ್ನ ಯಾತ್ರೆಯಲ್ಲಿ ಹೇಳಿದಂತೆ ನಾವು ನಡೆಯುತ್ತೇವೆ" ಎಂದರು.

ಇದನ್ನೂ ಓದಿ:ಸಿಎಂ ಬೊಮ್ಮಾಯಿ ಜೆಡಿಎಸ್​ಗೆ ಬಂದರೆ ಅವರನ್ನೂ ಆದರದಿಂದ ಸ್ವಾಗತಿಸುತ್ತೇವೆ: ಸಿಎಂ ಇಬ್ರಾಹಿಂ..

ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಯಾರು? ಎಂಬ ಬಿಜೆಪಿ ನಾಯಕರ ಪ್ರಶ್ನೆಗೆ ಉತ್ತರಿಸಿ, "ರಾಜ್ಯದಲ್ಲಿ ಮೊದಲ ಬಾರಿಗೆ ಜೆಡಿಎಸ್ ಅಭ್ಯರ್ಥಿ ಪಟ್ಟಿ ಬಿಡುಗಡೆಗೊಳಿಸಿದೆ. ಈಗಾಗಲೇ ನಾವು 93 ಅಭ್ಯರ್ಥಿಗಳ ಹೆಸರು ಬಿಡುಗಡೆ ಮಾಡಿದ್ದೇವೆ. ಬಿಜೆಪಿಯವರು ಒಂದೂ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿಲ್ಲ, ಬಸವರಾಜ ಬೊಮ್ಮಾಯಿ ಎಲ್ಲಿಂದ ಸ್ವರ್ಧೆ ಮಾಡುತ್ತಾರೆ?. ಜಗದೀಶ್ ಶೆಟ್ಟರ್ ಎಲ್ಲಿಂದ ಸ್ವರ್ಧೆ ಮಾಡುತ್ತಾರೆ? ಎಂಬುದನ್ನು ಮೊದಲು ಹೇಳಲಿ" ಎಂದು ಮರುಪ್ರಶ್ನೆ ಹಾಕಿದರು.

ಇದನ್ನೂ ಓದಿ:ಮೈತ್ರಿ ಸರ್ಕಾರ ಉರುಳಲು ಸಿದ್ದರಾಮಯ್ಯ ಕಾರಣ: ಸಿ.ಎಂ‌ ಇಬ್ರಾಹಿಂ

"ಪೆಟ್ರೋಲ್,​ ಡೀಸೆಲ್​, ಎಣ್ಣೆ, ಅಕ್ಕಿ ರೇಟ್​ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಒಳ್ಳೆಯ ಕಾಲ ಭಾರತಕ್ಕೆ ಬರುವ ವಿಶ್ವಾಸವಿದೆ. ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ನಾವು 123 ಸ್ಥಾನ ಪಡೆಯುತ್ತೇವೆ. ಬೆಳಗಾವಿ, ಚಿಕ್ಕೋಡಿಯಲ್ಲಿ ಏಳು ಸ್ಥಾನ ಗೆಲ್ಲುವ ನಿರೀಕ್ಷೆ ಇದೆ" ಎಂದು ಇಬ್ರಾಹಿಂ ಭವಿಷ್ಯ ನುಡಿದರು.

ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಮಾಜಿ ಶಾಸಕ ಶಹಜಹಾನ ಡೊಂಗರಗಾವ, ಕಕಮರಿ ಸಂಸ್ಥಾನ ಮಠದ ಅಭಿನವ ಗುರುಲಿಂಗ ಸ್ವಾಮೀಜಿ, ಬಿ.ಎಲ್.ಪಾಟೀಲ್​ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇದನ್ನೂ ಓದಿ:ಜಾರಕಿಹೊಳಿ ಬ್ರದರ್ಸ್ ಜೆಡಿಎಸ್ ಸೇರ್ಪಡೆ ಆಗ್ತಾರಾ?: ಸಿಎಂ ಇಬ್ರಾಹಿಂ ಹೇಳಿದ್ದೇನು?

ABOUT THE AUTHOR

...view details