ಕರ್ನಾಟಕ

karnataka

ಗಡಿ ಭಾಗದಲ್ಲಿನ ಕನ್ನಡಿಗರ ಅಭಿವೃದ್ಧಿಗೆ ಸಿಎಂ ಅನುದಾನ: ಮಹಾರಾಷ್ಟ್ರ ಕನ್ನಡಿಗರ ಹರ್ಷ

By

Published : Nov 25, 2022, 5:42 PM IST

ಮಹಾರಾಷ್ಟ್ರ ಜತ್ತ ತಾಲೂಕಿನ ಹಳ್ಳಿ ಮಹಾದೇವ ಅಂಕಲಗಿ ಬೊಮ್ಮಾಯಿ ಅನುದಾನ ಕೊಟ್ಟಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ.

Etv Bharat
ಮಹಾರಾಷ್ಟ್ರ ಕನ್ನಡಿಗರ ಹರ್ಷ

ಬೆಳಗಾವಿ: ಗಡಿ ಭಾಗದಲ್ಲಿನ ಕನ್ನಡಿಗರ ಅಭಿವೃದ್ಧಿಗೆ ಸಿಎಂ ಬಸವರಾಜ ಬೊಮ್ಮಾಯಿ ಅನುದಾನ ಕೊಟ್ಟಿರುವುದಕ್ಕೂ ನಾವು ಆಭಾರಿ ಆಗಿದ್ದೇವೆ ಎಂದು ಮಹಾರಾಷ್ಟ್ರ ಕನ್ನಡಿಗ ಮಹದೇವ ಅಂಕಲಗಿ ಹರ್ಷವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರ ಜತ್ತ ತಾಲೂಕಿನ ಹಳ್ಳಿಗಳು ಕರ್ನಾಟಕಕ್ಕೆ ಸೇರಲು ಠರಾವು ಮಾಡಿದ್ದ ಬಗ್ಗೆ ಸಿಎಂ ಹೇಳಿಕೆ ವಿಚಾರಕ್ಕೆ ಜತ್ತ ಗ್ರಾಮದಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಮಹಾದೇವ ಅಂಕಲಗಿ, ಸಿಎಂ ಬಸವರಾಜ ಬೋಮ್ಮಾಯಿ ಅವರಿಗೆ ಜತ್ತ ತಾಲೂಕಿನ 44 ಹಳ್ಳಿಗಳ ಪರ ಮಾತನಾಡಿದ್ದಕ್ಕೆ ಅಭಿನಂದನೆ ವ್ಯಕ್ತಪಡಿಸುತ್ತೇವೆ.

ಗಡಿ ಭಾಗದಲ್ಲಿನ ಕನ್ನಡಿಗರ ಅಭಿವೃದ್ಧಿಗೆ ಸಿಎಂ ಅನುದಾನ

ಜತ್ತ ತಾಲೂಕು ಯಾವಾಗಲೂ ಬರಗಾಲದಲ್ಲಿಯೇ ಇದೆ. ಮಹಾರಾಷ್ಟ್ರ ಸರ್ಕಾರ ನಮ್ಮನ್ನ ನಿರ್ಲಕ್ಷ್ಯ ಮಾಡುತ್ತಲೇ ಬಂದಿದೆ. ಹೀಗಾಗಿ ಜತ್ತ ತಾಲೂಕು ಬರಗಾಲದಿಂದ ತತ್ತರಿಸಿದೆ. ಮಹಾಜನ್ ವರದಿ ಪ್ರಕಾರ ಜತ್ತ ತಾಲೂಕಿನ ಹಳ್ಳಿಗಳು ಕರ್ನಾಟಕಕ್ಕೆ ಸೇರಬೇಕು. ನಾವು ಮಹಾರಾಷ್ಟ್ರದಲ್ಲಿದ್ದರೂ ನಮ್ಮ ಮೇಲೆ ಪ್ರೇಮ ಮಾಡಿದ್ದೀರಿ. ಗಡಿ ಭಾಗದಲ್ಲಿ ಕನ್ನಡಿಗರ ಅಭಿವೃದ್ಧಿಗೆ ಅನುದಾನ ಕೊಟ್ಟಿರುವುದಕ್ಕೂ ನಾವು ಆಭಾರಿ ಆಗಿದ್ದೇವೆ ಎಂದು ಹರ್ಷವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ರಾಜ್ಯಗಳನ್ನು ಬೇರ್ಪಡಿಸುವ ಕೆಲಸವನ್ನು ಮಹಾರಾಷ್ಟ್ರ ಸರ್ಕಾರ ನಿಲ್ಲಿಸಬೇಕು, ಶೀಘ್ರ ಸರ್ವಪಕ್ಷ ಸಭೆ: ಸಿಎಂ

ABOUT THE AUTHOR

...view details