ಕರ್ನಾಟಕ

karnataka

ಚಿಕ್ಕೋಡಿ: ಹೆತ್ತ ಮಗನ ಕೊಲೆಗೈದ ಮಹಿಳೆಗೆ ಜೀವಾವಧಿ ಶಿಕ್ಷೆ

By

Published : Aug 15, 2023, 3:35 PM IST

Updated : Aug 15, 2023, 10:51 PM IST

ತಾಯಿಯೊಬ್ಬಳು ತನ್ನ ಮಗನನ್ನೇ ಕೊಂದ ಘಟನೆ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ನಡೆದಿತ್ತು. ಇದೀಗ ಅಪರಾಧಿಗೆ ಚಿಕ್ಕೋಡಿ ಕೋರ್ಟ್‌ ದಂಡಸಹಿತ ಜೈಲುಶಿಕ್ಷೆ ವಿಧಿಸಿದೆ.

ಅನೈತಿಕ ಸಂಬಂಧ
ಅನೈತಿಕ ಸಂಬಂಧ

ಚಿಕ್ಕೋಡಿ (ಬೆಳಗಾವಿ) : ತನ್ನ ಅನೈತಿಕ ಸಂಬಂಧ ಗೊತ್ತಾಯಿತು ಎಂದು ಮಗನನ್ನು ಬಾವಿಗೆ ತಳ್ಳಿ ಕೊಲೆಗೈದ ಮಹಿಳೆಗೆ ಚಿಕ್ಕೋಡಿ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 7 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ. ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಸುಧಾ ಸುರೇಶ ಕರಿಗಾರ (31) ಶಿಕ್ಷೆಗೊಳಗಾದವರು. ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ (22/10/2019ರಲ್ಲಿ) ನಡೆದ ಕೊಲೆ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶ ಎಸ್.ಎಲ್.ಚೌವ್ಹಾಣ ನಡೆಸಿದರು.

ಘಟನೆಯ ವಿವರ:ಪರಪುರುಷನ ಜೊತೆ ಅನೈತಿಕ ಸಂಬಂಧ ಹೊಂದಿರುವುದು ಹಿರಿಯ ಮಗ ಪ್ರವೀಣ್(10) ಗೊತ್ತಾಗಿದೆ. ಈ ವಿಷಯವನ್ನು ತಂದೆಗೆ ಹೇಳುತ್ತೇನೆ ಎಂದು ಆತ ಓಡಿ ಹೋದಾಗ ಆತನನ್ನು ಕರೆದು 50 ರೂ. ಕೊಟ್ಟು ಅಂಗಡಿಯಲ್ಲಿ ತಿನಿಸು ತರಲು ಇನ್ನೊಬ್ಬ ಕಿರಿಯ ಮಗ ಪ್ರಜ್ವಲ್‌ನನ್ನೂ (8) ಜೊತೆಗೆ ಕಳುಹಿಸಿದ್ದಳು. ಇದೇ ವೇಳೆ ಮಕ್ಕಳ ಹಿಂದಿನಿಂದಲೇ ಹೋಗಿದ್ದ ಮಹಿಳೆ ಬೆಲ್ಲದ ಬಾಗೇವಾಡಿ ಉದಯಕುಮಾರ ಮಲ್ಲಿನಾಥ ಪಾಟೀಲ ಎಂಬವರ ಜಮೀನಿನಲ್ಲಿರುವ ಬಾವಿಗೆ ಪ್ರವೀಣ್‌ನನ್ನು ತಳ್ಳಿದ್ದಾಳೆ. ಅಲ್ಲೇ ಇದ್ದ ಪ್ರಜ್ವಲ್‌ಗೆ ನೀನು ಯಾರ ಮುಂದಾದರೂ ಕೊಲೆ ವಿಷಯ ಹೇಳಿದರೆ ನಿನ್ನನ್ನೂ ಸಹ ಹೀಗೇ ಸಾಯಿಸಿಬಿಡುತ್ತೇನೆ ಎಂದು ಜೀವಬೆದರಿಕೆ ಹಾಕಿದ್ದಳು. ಘಟನೆಯ ನಂತರ ಮಗ ಬಾವಿಗೆ ಬಿದ್ದು ತೀರಿಕೊಂಡ ಎಂದು ಸುಧಾ ಸುರೇಶ ಕರಿಗಾರ ನಾಟಕವಾಡಿದ್ದಳು. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ ಸಂಪೂರ್ಣವಾಗಿ ತನಿಖೆ ನಡೆಸಿದರು. ತನಿಖೆಯಲ್ಲಿ ಪ್ರಜ್ವಲ್​ ನಡೆದಿರುವ ಘಟನೆಯ ಬಗ್ಗೆ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಆರೋಪಿ ತಾಯಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಅನೈತಿಕ ಸಂಬಂಧ- ವ್ಯಕ್ತಿ ಆತ್ಯಹತ್ಯೆ: ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ ಆತ್ಯಹತ್ಯೆ ಮಾಡಿಕೊಂಡ ಘಟನೆ ಇತ್ತೀಚಿಗೆ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಬೂದಿಹಾಳ ಪಿ.ಹೆಚ್​ ಗ್ರಾಮದಲ್ಲಿ ನಡೆದಿತ್ತು. ​ಶಿವಣ್ಣ ಚೌಧರಿ (40) ಸಾವಿಗೀಡಾದ ವ್ಯಕ್ತಿ. ತನ್ನ ಸಾವಿಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೇ ಕಾರಣ ಎಂದು ವಿಡಿಯೋದಲ್ಲಿ ಹೇಳಿಕೆ ನೀಡಿ, ಡೆತ್ ನೋಟ್ ಬರೆದಿಟ್ಟಿದ್ದನು. ಸಿಂಧಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪತ್ನಿಯ ಶೀಲ ಶಂಕಿಸಿ ಬರ್ಬರ ಹತ್ಯೆ:ಶೀಲ ಶಂಕಿಸಿ ಪತ್ನಿಯನ್ನು ಪತಿ ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣ ಇತ್ತೀಚಿಗೆ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ದೊಡ್ಡಸಣ್ಣೆ ಗ್ರಾಮದಲ್ಲಿ ನಡೆದಿತ್ತು. ಗಂಡ ಮುನಿ ಆಂಜಿನಪ್ಪ ಜುಲೈ 13 ರ ರಾತ್ರಿ ವೇಳೆ ಹೆಂಡತಿಯ ಮೇಲೆ ಅನುಮಾನಗೊಂಡು ಪತ್ನಿಯೊಂದಿಗೆ ಗಲಾಟೆ ಮಾಡಿದ್ದನು. ಗಲಾಟೆ ವಿಕೋಪಕ್ಕೆ ತಿರುಗಿ ಪತ್ನಿಯನ್ನು ಮನಬಂದಂತೆ ಹಲ್ಲೆ ಮಾಡಿ, ಬಟ್ಟೆ ಕತ್ತರಿಸುವ ಕತ್ತರಿಯಿಂದ ಇರಿದಿದ್ದನು. ಗಾಯಗೊಂಡಿದ್ದ ಮಹಿಳೆ ತೀವ್ರ ರಕ್ತಸಾವ್ರಕ್ಕೆ ಒಳಗಾಗಿದ್ದು, ಆಸ್ವತ್ರೆಗೆ ಸಾಗಿಸುವ ಮಾರ್ಗ ಮದ್ಯೆ ಸಾವನ್ನಪ್ಪಿದ್ದಳು. ಈ ಸಂಬಂಧ ದೇವನಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ :ವಿಜಯಪುರ: ವಿವಾಹಿತ ‌ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ ಆತ್ಮಹತ್ಯೆ..

Last Updated : Aug 15, 2023, 10:51 PM IST

ABOUT THE AUTHOR

...view details