ಕರ್ನಾಟಕ

karnataka

ಕುಮಾರಸ್ವಾಮಿ ವಿರುದ್ಧ ಸಿಡಿದೆದ್ದಿದ್ದ ರೈತ ಮಹಿಳೆ ಜಯಶ್ರೀ  ಸುಮಲತಾ ಪರ ಬ್ಯಾಟಿಂಗ್​

By

Published : Apr 9, 2019, 12:53 PM IST

ಜೆಡಿಎಸ್ ಪಕ್ಷ ಕುಟುಂಬ ರಾಜಕರಣಕ್ಕೆ ಅಂಟಿಕೊಂಡಿದೆ - ಕಬ್ಬಿನ ಬಾಕಿ ಬಿಲ್ ಪಾವತಿ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿದ್ದ ರೈತ ಮಹಿಳೆ ಜಯಶ್ರೀ ಗುರಣ್ಣವರ್ ಅವರಿಗೆ 'ಇಷ್ಟು ದಿನ ಎಲ್ಲಿ ಮಲಗಿದ್ದಿಯಮ್ಮಾ' ಎಂದು ವ್ಯಂಗ್ಯವಾಡಿದ್ದರು ಸಿಎಂ ಕುಮಾರಸ್ವಾಮಿ - ಈ ವಿಚಾರ ರಾಜ್ಯಾದ್ಯಂತ ಸದ್ದು ಮಾಡಿತ್ತು. ಇದೀಗ ಜಯಶ್ರೀ ಸುಮಲತಾ ಅಂಬರೀಶ್ ಪರ ಪರ ಪ್ರಚಾರಕ್ಕೆ ಹೋಗುತ್ತೇನೆ ಎಂದಿದ್ದಾರೆ

ರೈತ ಮಹಿಳೆ ಜಯಶ್ರೀ

ಬೆಳಗಾವಿ:ಕುಟುಂಬ ರಾಜಕಾರಣ ಹಾಗೂ ಸಿಎಂ ಕುಮಾರಸ್ವಾಮಿ ಅವರ ರೈತ ವಿರೋಧಿ ನಡೆ ವಿರೋಧಿಸಿ ಮಂಡ್ಯ ರೈತರಲ್ಲಿ ಅವರ ಮಗನ ಪರವಾಗಿ ಮತ ನೀಡದಂತೆ ಕೇಳಿಕೊಳ್ಳಲು ಸುಮಲತಾ ಅಂಬರೀಶ್ ಪರ ಪ್ರಚಾರಕ್ಕೆ ಹೋಗುತ್ತೇನೆ ಎಂದು ರೈತ ಮಹಿಳೆ ಜಯಶ್ರೀ ಗುರಣ್ಣವರ ಹೇಳಿದ್ದಾರೆ.

ಸುಮಲತಾ ಪರ ಪ್ರಚಾರಕ್ಕೆ ರೈತ ಮಹಿಳೆ ಜಯಶ್ರೀ ಭಾಗಿ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಯಶ್ರೀ, ಜೆಡಿಎಸ್ ಪಕ್ಷ ಕುಟುಂಬ ರಾಜಕರಣಕ್ಕೆ ಅಂಟಿಕೊಂಡಿದೆ. ರೈತರ ಹಲವಾರು ಸಮಸ್ಯೆಗಳಿಗೆ ಸಿಎಂ ಕುಮಾರಸ್ವಾಮಿ ಸರಿಯಾಗಿ ಸ್ಪಂದಿಸಿಲ್ಲ. ಉತ್ತರ ಕರ್ನಾಟಕ ಭಾಗದ ಕಬ್ಬು ಬೆಳೆಗಾರರ ಬಾಕಿ ಬಿಲ್ ಕೊಡಿಸುವಲ್ಲಿ ವಿಫಲವಾಗಿದ್ದು, ಇದನ್ನು ಮಂಡ್ಯ ಜನರಿಗೆ ತಿಳಿಸುವ ಉದ್ದೇಶದಿಂದ ಸುಮಲತಾ ಪರವಾಗಿ ಪ್ರಚಾರ ಮಾಡಲು ಹೋಗುತ್ತೇನೆ ಎಂದರು.

ಕಬ್ಬಿನ ಬಾಕಿ ಬಿಲ್ ಪಾವತಿ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿದ್ದ ರೈತ ಮಹಿಳೆ ಜಯಶ್ರಿ ಗುರಣ್ಣವರ್ ಗೆ 'ಇಷ್ಟು ದಿನ ಎಲ್ಲಿ ಮಲಗಿದ್ದಿಯಮ್ಮಾ' ಎಂದು ಸಿಎಂ ವ್ಯಂಗ್ಯ ಮಾಡಿ ಎಲ್ಲೆಡೆಗಳಿಂದ ಸಿಎಂ ಟೀಕೆಗಳಿಗೆ ಒಳಗಾಗಿದ್ದರು. ಮಂಡ್ಯದ ಅನೇಕ ರೈತ ಮುಖಂಡರು ಜಯಶ್ರೀ ಅವರಿಗೆ ಸುಮಲತಾ ಪರವಾಗಿ ಪ್ರಚಾರ ಮಾಡಲು ಬರುವಂತೆ ಕೇಳಿಕೊಂಡಿದ್ದಾರೆ. ಇದರಿಂದ ಇನ್ನು ಜಿಲ್ಲೆಯ ಅನೇಕ ರೈತರ ಜೊತೆ ಸೇರೆ ಪ್ರಚಾರಕ್ಕೆ ಹೋಗುವುದಾಗಿ ಅವರು ತಿಳಿಸಿದರು.

ಸುಮಲತಾ ಪರ ಪ್ರಚಾರಕ್ಕೆ ರೈತ ಮಹಿಳೆ ಜಯಶ್ರೀ ಭಾಗಿ ಬೆಳಗಾವಿ : ಕುಟುಂಬ ರಾಜಕಾರಣ ಹಾಗೂ ಸಿಎಂ ಕುಮಾರಸ್ವಾಮಿ ಅವರ ರೈತ ವಿರೋಧಿ ನಡೆ ವಿರೋದಿಸಿ ಮಂಡ್ಯ ರೈತರಲ್ಲಿ ಅವರ ಮಗನ ಪರವಾಗಿ ಮತ ನೀಡದಂತೆ ಕೇಳಿಕೊಳ್ಳಲು ಸುಮಲತಾ ಅಂಬರೀಶ್ ಪರ ಪರ ಪ್ರಚಾರಕ್ಕೆ ಹೋಗುತ್ತೇನೆ ಎಂದು ರೈತ ಮಹಿಳೆ ಜಯಶ್ರೀ ಗುರಣ್ಣವರ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಯಶ್ರೀ. ಜೆಡಿಎಸ್ ಪಕ್ಷ ಕುಟುಂಬ ರಾಜಕಾರಣಕ್ಕೆ ಅಂಟಿಕೊಂಡಿದೆ. ರೈತರ ಹಲವಾರು ಸಮಸ್ಯೆಗಳಿಗೆ ಸಿಎಂ ಕುಮಾರಸ್ವಾಮಿ ಸರಿಯಾಗಿ ಸ್ಪಂದಿಸಿಲ್ಲ. ಉತ್ತರ ಕರ್ನಾಟಕ ಭಾಗದ ಕಬ್ಬು ಬೆಳೆಗಾರರ ಬಾಕಿ ಬಿಲ್ ಕೊಡಿಸುವಲ್ಲಿ ವಿಫಲವಾಗಿದ್ದು ಇದನ್ನು ಮಂಡ್ಯ ಜನರಿಗೆ ತಿಳಿಸುವ ಉದ್ದೇಶದಿಂದ. ಸುಮಲತಾ ಪರವಾಗಿ ಪ್ರಚಾರ ಮಾಡಲು ಹೊಗುತ್ತೇನೆ ಎಂದರು. ಕಬ್ಬಿನ ಬಾಕಿ ಬಿಲ್ ಪಾವತಿ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿದ್ದ ರೈತ ಮಹಿಳೆ ಜಯಶ್ರಿ ಗುರಣ್ಣವರ್ ಅವರಿಗೆ ಇಷ್ಟು ದಿನ ಎಲ್ಲಿ ಮಲಗಿದ್ದಿಯಮ್ಮಾ ಎಂದು ಸಿಎಂ ವ್ಯಂಗ್ಯ ಮಾಡಿ ಎಲ್ಲೆ ಟೀಕೆಗಳಿಗೆ ಒಳಗಾಗಿದ್ದರು. ಮಂಡ್ಯದ ಅನೇಕ ರೈತ ಮುಖಂಡರು ಜಯಶ್ರೀ ಅವರಿಗೆ ಸುಮಲತಾ ಪರವಾಗಿ ಪ್ರಚಾರ ಮಾಡಲು ಬರುವಂತೆ ಕೇಳಿಕೊಂಡಿದ್ದಾರೆ. ಇದರಿಂದ ಇನ್ನು ಜಿಲ್ಲೆಯ ಅನೇಕ ರೈತರ ಜೊತೆ ಸೇರೆ ಪ್ರಚಾರಕ್ಕೆ ಹೋಗುವುದಾಗಿ ತಿಳಿಸಿದರು. ವಿನಾಯಕ ಮಠಪತಿ ಬೆಳಗಾವಿ

ABOUT THE AUTHOR

...view details