ಕರ್ನಾಟಕ

karnataka

ಹಳೇ ಬೆಳಗಾವಿಯಲ್ಲಿ ನಡೆದ ಕೊಲೆ ಪ್ರಕರಣ: 24 ಗಂಟೆಯೊಳಗೆ 6 ಆರೋಪಿಗಳ ಬಂಧನ

By

Published : Dec 18, 2020, 3:27 PM IST

ಹಳೇ ಬೆಳಗಾವಿಯ ಅಂಬೇಡ್ಕರ್ ಗಲ್ಲಿಯಲ್ಲಿ ನಡೆದ ಕೊಲೆ ಪ್ರಕರಣವನ್ನು 24 ಗಂಟೆಯೊಳಗೆ ಭೇದಿಸಿದ ಶಹಾಪುರ ಠಾಣೆ ಪೊಲೀಸರು, 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ

Arrest of 6 accused in Belgavi murder case
ಬೆಳಗಾವಿ ಕೊಲೆ ಪ್ರಕರಣದ 6 ಆರೋಪಿಗಳ ಬಂಧನ

ಬೆಳಗಾವಿ: ಹಳೇ ಬೆಳಗಾವಿಯ ಅಂಬೇಡ್ಕರ್ ಗಲ್ಲಿಯಲ್ಲಿ ನಿನ್ನೆ ಜೈಪಾಲ್ ಗರಾಣೆ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ 6 ಮಂದಿ ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಶಾಹಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಡಿಸಿಪಿ ವಿಕ್ರಮ ಆಮ್ಟೆ ಹೇಳಿದರು.

ಪ್ರಕರಣದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಹಳೇ ಬೆಳಗಾವಿಯ ಅಂಬೇಡ್ಕರ್ ಗಲ್ಲಿಯ ನಿವಾಸಿ ಜೈಪಾಲ್ ಗರಾಣೆ ಎಂಬುವನನ್ನು ಬುಧವಾರ ಮಧ್ಯರಾತ್ರಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಈ ಸಂಬಂಧ ಕೊಲೆಯಾದ ಜೈಪಾಲ್ ಸಹೋದರ ಸುಭಾಷ ಮಸನು ಗರಾಣೆ ಶಾಹಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಶಾಹಪುರ ಠಾಣೆ ಸಿಪಿಐ ರಾಘವೇಂದ್ರ ಹವಾಲ್ದಾರ್ ನೇತೃತ್ವದಲ್ಲಿ ತಂಡ ರಚಿಸಿ ಕೊಲೆ ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಶಾಹಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.

ಪ್ರಕರಣದ ಕುರಿತು ಮಾಹಿತಿ ನೀಡಿದ ಡಿಸಿಪಿ ವಿಕ್ರಮ ಆಮ್ಟೆ

ಇದನ್ನೂ ಓದಿ :ಬೆಳಗಾವಿಯಲ್ಲಿ ವ್ಯಕ್ತಿಯ ಬರ್ಬರ ಕೊಲೆ: ಕುಂದಾನಗರಿಯಲ್ಲಿ ಹರಿದ ನೆತ್ತರು

ಪ್ರಕರಣವನ್ನು ಭೇದಿಸಿದ ಶಾಹಪುರ ಠಾಣೆಯ ಸಿಬ್ಬಂದಿಗೆ ಪೊಲೀಸ್ ಆಯುಕ್ತರು ಬಹುಮಾನ ಘೋಷಣೆ ಮಾಡಿದ್ದಾರೆ. ಹಳೇ ಬೆಳಗಾವಿಯ ಜ್ಯೋತಿರಾಜ ದೊಡಮನಿ (24), ಅಕ್ಷಯ ಕೋಲಕಾರ್ (24), ಪ್ರಶಾಂತ ಕಳ್ಳಿಮನಿ (30), ಪ್ರತಾಪ ಗರಾಣಿ (28), ರೋಹಿತ ದೊಡಮನಿ (23), ಶಿವರಾಜ್ ದೊಡಮನಿ (28) ಬಂಧಿತ ಆರೋಪಿಗಳು. ಇವರನ್ನು ಪೊಲೀಸರು ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ. ಹಳೇ ವೈಷಮ್ಯದ ಹಿನ್ನೆಲೆ ಕೊಲೆ ಮಾಡಲಾಗಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಡಿಸಿಪಿ ಡಾ. ವಿಕ್ರಮ್ ಆಮ್ಟೆ ಹೇಳಿದರು.

ABOUT THE AUTHOR

...view details