ಕರ್ನಾಟಕ

karnataka

ಮದ್ಯ ಸೇವಿಸಿ ಯುವತಿಯರ 'ಆಟೋ'ಟೋಪ! ಸುಮ್ಮನೆ ಕಿರುಚಿ, ಚಾಲಕನಿಗೆ ಕಪಾಳಮೋಕ್ಷ!

By

Published : Jun 2, 2019, 6:18 PM IST

ಕಳೆದ ಶುಕ್ರವಾರ ರಾತ್ರಿ ಎಂಜಿ ರಸ್ತೆಯಲ್ಲಿ ಸುರೇಂದ್ರ ಎಂಬುವರ ಆಟೋ ರಿಕ್ಷಾ ಹತ್ತಿದ ಯುವತಿಯರು ಶಿವಾನಂದ ಸರ್ಕಲ್ ವೃತ್ತದ ಕಡೆ ಬರುವಾಗ ಕಿರುಚಾಡಿ‌ ಪುಂಡಾಟ ನಡೆಸಿದ್ದಾರೆ.

ಎಣ್ಣೆ ಏಟಲ್ಲಿ ಆಟೋ ಚಾಲಕನಿಗೆ ಗೂಸಾ ಕೊಟ್ಟ ಯುವತಿಯರ

ಬೆಂಗಳೂರು:ಮದ್ಯ ಅಮಲಿನಲ್ಲಿ ಮೂವರು ಯುವತಿಯರು ನನ್ನ ಮೇಲೆ ಪುಂಡಾಟ ನಡೆಸಿದ್ದಾರೆ ಎಂದು‌ ಆರೋಪಿಸಿ ಆಟೋ ರಿಕ್ಷಾ ಚಾಲಕ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಳೆದ ಶುಕ್ರವಾರ ರಾತ್ರಿ ಎಂಜಿ ರಸ್ತೆಯಲ್ಲಿ ಸುರೇಂದ್ರ ಎಂಬುವರ ಆಟೋ ಹತ್ತಿದ ಯುವತಿಯರು ಶಿವಾನಂದ್ ಸರ್ಕಲ್ ವೃತ್ತದ ಕಡೆ ಬರುವಾಗ ಸುಖಾಸುಮ್ಮನೆ‌‌ ಕಿರುಚಾಡಿ‌ ಪುಂಡಾಟ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಯಾಕೆ ಕೂಗಾಡುತ್ತೀರಾ? ಸುಮ್ಮನೆ ಕುಳಿತುಕೊಳ್ಳಿ ಎಂದು ಆಟೋ ಚಾಲಕ ಪ್ರಶ್ನಿಸಿದ್ರೆ, ಕೋಪಗೊಂಡು ಆಟೋ ಚಾಲಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ನಂತರ ಆಟೋದಿಂದ ಇಳಿದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಸಂಬಂಧ ಹೈಗ್ರೌಂಡ್ ಪೊಲೀಸ್ ಠಾಣೆಗೆ ತೆರಳಿ ಯುವತಿಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ.

Intro:Body:ಕುಡಿದ ಆಮಲಿನಲ್ಲಿ ಆಟೊ ಚಾಲಕನಿಗೆ ಕಪಾಳಮೋಕ್ಷ ಮಾಡಿದ ಯುವತಿಯರು

ಬೆಂಗಳೂರು: ಕುಡಿತ ಆಮಲಿನಲ್ಲಿ ಮೂವರು ಹುಡುಗಿಯರು ನನ್ನ ಮೇಲೆ ಪುಂಡಾಟ ನಡೆಸಿದ್ದಾರೆ ಎಂದು‌ ಆರೋಪಿಸಿ ಆಟೊ ಚಾಲಕನೊಬ್ಬ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಳೆದ ಶುಕ್ರವಾರ ರಾತ್ರಿ ಎಂಜಿ ರಸ್ತೆಯಲ್ಲಿ ಸುರೇಂದ್ರ ಎಂಬುವರ ಆಟೊ ಹತ್ತಿದ ಯುವತಿಯರು ಶಿವಾನಂದ್ ಸರ್ಕಲ್ ವೃತ್ತದ ಕಡೆ ಬರುವಾಗ
ಮೂರು ಜನ ಹುಡುಗಿಯರು ಸುಖಾಸುಮ್ಮನೆ‌‌ ಕಿರುಚಾಡಿ‌ ಪುಂಡಾಟ ನಡೆಸಿದ್ದಾರೆ.ಆಟೋ ಚಾಲಕ ಯಾಕೆ ಕೂಗಾಡುತ್ತೀರಾ ಸುಮ್ಮನೆ ಕುಳಿತುಕೊಳ್ಳಿ ಎಂದು ಹೇಳಿದಕ್ಕೆ ಕೋಪಗೊಂಡು ಆಟೋ ಚಾಲಕನಿಗೆ ಕಪಾಳಮೋಕ್ಷ‌ ಮಾಡಿದ್ದಾರೆ. ನಂತರ ಆಟೋದಿಂದ ಇಳಿದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಸಂಬಂಧ ಹೈಗ್ರೌಂಡ್ ಪೊಲೀಸ್ ಠಾಣೆಗೆ ತೆರಳಿ ಯುವತಿಯರ ವಿರುದ್ಧ‌‌ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ.Conclusion:

TAGGED:

ABOUT THE AUTHOR

...view details