ಕರ್ನಾಟಕ

karnataka

ಬೆಂಗಳೂರು.. ಮೊದಲ ಮತದಾನದ ಖುಷಿ ಹಂಚಿಕೊಂಡ ಯುವ ಮತದಾರರು: ವಿಡಿಯೋ

By

Published : May 10, 2023, 4:20 PM IST

ರಾಜ್ಯ ರಾಜಧಾನಿ ಯುವ ಮತದಾರರು ಮೊದಲ ಬಾರಿಗೆ ತಮ್ಮ ಮತ ಹಕ್ಕು ಚಲಾವಣೆ ಮಾಡಿದ್ದಾರೆ. ತಮ್ಮ ಮೊದಲ ಮತದಾನದ ಖುಷಿ ಹಂಚಿಕೊಂಡಿದ್ದಾರೆ.

young-voters-reaction-after-cast-their-votes-in-bengaluru
ಮೊದಲ ಮತದಾನದ ಖುಷಿ ಹಂಚಿಕೊಂಡ ಯುವ ಮತದಾರರು: ವಿಡಿಯೋ

ಮೊದಲ ಮತದಾನದ ಖುಷಿ ಹಂಚಿಕೊಂಡ ಯುವ ಮತದಾರರು: ವಿಡಿಯೋ

ಬೆಂಗಳೂರು: ರಾಜ್ಯಾದ್ಯಂತ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ಈ ಬಾರಿ ಮೊದಲ ಬಾರಿಗೆ ಮತದಾನ ಮಾಡುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳತ್ತ ಹೆಜ್ಜೆ ಹಾಕಿದರು. ಯುವ ಮತದಾರರು ಕ್ಯೂನಲ್ಲಿ ನಿಂತು ತಮ್ಮ ಮತಹಕ್ಕು ಚಲಾಯಿಸಿದರು.

ಮೊದಲ ಬಾರಿ ಮತದಾನ ಹಾಕಿರುವುದರಿಂದ ತುಂಬನೇ ಖುಷಿಯಾಗಿದೆ. ಎಲ್ಲ ಯುವ ಮತದಾರರು ಮತ ಚಲಾಯಿಸಲು ಮುಂದೆ ಬರಬೇಕೆಂದು ಯುವ ಮತದಾರರು ಕರೆ ನೀಡಿದರು. ನಮ್ಮ ಹಕ್ಕು ನಾನು ಚಲಾಯಿಸಿದೆ. ಮತದಾನ ಪ್ರತಿಯೊಬ್ಬರ ಮೂಲಭೂತ ಹಕ್ಕು. ಮೊದಲ ಬಾರಿಗೆ ಮತದಾನವಾಗಿದ್ದರಿಂದ ಮತದಾನದ ಪ್ರಕ್ರಿಯೆ ಬಗ್ಗೆ ಗೊತ್ತಿರಲಿಲ್ಲ. ಹೀಗಾಗಿ ಸ್ವಲ್ಪ ನರ್ವಸ್ ಆಯ್ತು ಅಷ್ಟೇ ಎಂದು ಯುವ ಮತದಾರೆ ತನೀಷಾ ಹೇಳಿದರು.

ಇದನ್ನೂ ಓದಿ:ಮೊದಲ ಬಾರಿ ಮತದಾನ ಮಾಡಿ ಜನತಂತ್ರದ ಹಬ್ಬಕ್ಕೆ ಸಾಕ್ಷಿಯಾದ ಉತ್ಸಾಹಿ ಯುವಕ - ಯುವತಿಯರು

ಮತ್ತೊಬ್ಬ ಯುವ ಮತದಾರೆ ಯಶಸ್ವಿನಿ ಮಾತನಾಡಿ, ಮೊದಲ ಬಾರಿಗೆ ಮತದಾನ ಹಿನ್ನೆಲೆ ಎಕ್ಸೈಟ್ ಆಗಿದ್ದೆ. ಎಲ್ಲರೂ ಮುಂದೆ ಮತದಾನ ಮಾಡಬೇಕು. ಮತದಾನದ ಮೂಲಕ ನಮ್ಮ ಧ್ವನಿ ಎತ್ತಲು ಸಾಧ್ಯವಾಗುತ್ತದೆ. ಆರ್ಥಿಕತೆ, ರಾಜಕೀಯ ಪರಿಸ್ಥಿತಿ ಬಗ್ಗೆಯೂ ಗೊತ್ತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಯಾವುದೇ ಸರ್ಕಾರ ಅಧಿಕಾರಕ್ಕೂ ಬಂದ್ರೆ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕೆಂದು ಮತ್ತೋರ್ವ ಮತದಾರೆ ವೈಶಾಲಿ ತಮ್ಮ ಮತ ಹಕ್ಕು ಚಲಾಯಿಸಿದ ಬಳಿಕ ಹೇಳಿದರು. ಇನ್ನೋರ್ವ ಮತದಾರೆ ಅಮೂಲ್ಯ ಮಾತನಾಡಿ, ಫಸ್ಟ್ ಟೈಮ್ ಮತದಾನ ಮಾಡಿದ್ದು ಸಖತ್ ಎಕ್ಸೈಟ್ ಆಗಿತ್ತು. ನಾನು ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ಹೋಗುತ್ತಿದ್ದೇನೆ. ಅದಕ್ಕಿಂತ ಮುಂಚೆ ನನ್ನ‌‌ ಮೊದಲ ಹಕ್ಕನ್ನು ಚಲಾಯಿಸಿದ್ದು, ತುಂಬಾ ಹೆಮ್ಮೆ ಇದೆ ಎಂದು ತಿಳಿಸಿದರು.

ಇದನ್ನೂ ಓದಿ:ಹಕ್ಕು ಚಲಾಯಿಸಿದ ಕಿಚ್ಚ.. ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುವಂತೆ ಸುದೀಪ್​ ಮನವಿ: ವಿಡಿಯೋ

ನಾನು ಮೊದಲ ಬಾರಿಗೆ ತನ್ನ ಮತ ಚಲಾಯಿಸಿದೆ. ಮತದಾನ ಮಾಡಿದ್ದು ವಿಶೇಷವಾದ ಅನುಭವ. ತಮ್ಮ ದೇಶ, ರಾಜ್ಯಕ್ಕಾಗಿ ಪ್ರತಿಯೊಬ್ಬರು ಕೂಡ ಮತದಾನ ಮಾಡಬೇಕು. ನಾವು ಇಂದು ಮತದಾನ ಮಾಡಿದರೆ, ಮುಂದೆ ಬರುವ ಪೀಳಿಗೆ ಸಹ ಮತದಾನ ಮಾಡಲು ಪ್ರೇರಣೆ ನೀಡಿದಂತೆ ಆಗುತ್ತದೆ ಎಂದು ಯುವ ಮತದಾರ ದೀಪೇಶ್ ಅಭಿಮತ ವ್ಯಕ್ತಪಡಿಸಿದರು. ಮೊದಲ ಸಲ ಮತದಾನ ಮಾಡಿದ್ದು ಖುಷಿ ಕೊಟ್ಟಿದೆ. ಮತಗಟ್ಟೆಯಲ್ಲಿ ಮತದಾನಕ್ಕೆ ಉತ್ತಮ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಎಲ್ಲ ಯುವಕರು ಸಹ ಮತ ಹಕ್ಕು ಹೊಂದಬೇಕು. ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೆಂದು ಆದಿತ್ಯ ಸಲಹೆ ನೀಡಿದರು.

ಇಂದು ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಎಲ್ಲೆಡೆ ಹಲವು ರಾಜಕಾರಣಿಗಳು, ಗಣ್ಯರು ಹಾಗೂ ಸಾಮಾನ್ಯ ನಾಗರಿಕರು ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ಧಾರೆ. ರಾಜ್ಯಾದ್ಯಂತ ಮಧ್ಯಾಹ್ನ 3 ಗಂಟೆಯವರೆಗೆ ಶೇ.52.81ರಷ್ಟು ಮತದಾನವಾಗಿದೆ.

ಇದನ್ನೂ ಓದಿ:ಮಂಗಳೂರು: ಮೊದಲ ಬಾರಿಗೆ ಮತ ಹಕ್ಕು ಚಲಾಯಿಸಿದ ಯುವ ಮತದಾರರು ಫುಲ್ ಖುಷ್

ABOUT THE AUTHOR

...view details