ಕರ್ನಾಟಕ

karnataka

ಪರಪ್ಪನ ಅಗ್ರಹಾರ ಬದಲಾಗುವ 'ಯೋಗ.. ಕುಖ್ಯಾತಿ ಪಡೆದ ಸೆಂಟ್ರಲ್ ಜೈಲ್‌ ಫಿಟ್‌ ಅಂಡ್ ಫೈನ್‌..

By

Published : Jul 21, 2021, 4:28 PM IST

Updated : Jul 21, 2021, 4:53 PM IST

ಮೊದಲು ಜೈಲಿನ ಸಿಬ್ಬಂದಿಗೆ ತರಬೇತಿ ಕೊಟ್ಟು, ಬಳಿಕ‌ ಕೈದಿಗಳಿಗೆ ಯೋಗ ಟ್ರೈನಿಂಗ್ ಕೊಡಲು ಸಿದ್ಧತೆ ನಡೆಸಲಾಗುತ್ತಿದೆ.‌ ಕೇವಲ ಟ್ರೈನಿಂಗ್ ಅಷ್ಟೇ ಅಲ್ಲದೆ ಪ್ರತಿ ನಿತ್ಯ ಎಲ್ಲರೂ ಕ್ರೀಡಾ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳಬೇಕು ಅಂತಾ ಅಧಿಕಾರಿಗಳು ಈಗಾಗಲೇ ಸೂಚಿಸಿದ್ದಾರೆ..

yoga classes  for parappana agrahara jail staffs
ಪರಪ್ಪನ ಅಗ್ರಹಾರದಲ್ಲಿ ಯೋಗಾಭ್ಯಾಸ

ಬೆಂಗಳೂರು: ಸದಾ ನೆಗೆಟಿವ್ ಸುದ್ದಿಯಲ್ಲಿರ್ತಿದ್ದ ನಗರದ ಸೆಂಟ್ರಲ್ ಜೈಲಿನಲ್ಲೀಗ ಪಾಸಿಟಿವ್ ವೈಬ್ಸ್ ಆರಂಭವಾಗಿದೆ. ಪರಪ್ಪನ ಅಗ್ರಹಾರದಲ್ಲಿ‌ ಫಿಟ್ನೆಸ್ ಮಂತ್ರ ಜಪಿಸಲಾಗುತ್ತಿದ್ದು, ಕೋವಿಡ್ ಹಿನ್ನೆಲೆ ಜೈಲು ಸಿಬ್ಬಂದಿ ಸದೃಢವಾಗಬೇಕು ಹಾಗೂ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.

ಪರಪ್ಪನ ಅಗ್ರಹಾರದಲ್ಲಿ ಯೋಗಾಭ್ಯಾಸ

ಗಾಂಜಾ, ಚಾಕು, ಚೂರಿ ಹೊಡೆದಾಟ ಅಂತಿದ್ದ ಜೈಲಿನಲ್ಲೀಗ ಧ್ಯಾನ, ಯೋಗ ಅನ್ನೋ ಮಾತು ಕೇಳಿ ಬರುತ್ತಿವೆ. ಸಿಬ್ಬಂದಿಗೆ ಶ್ರೀ ರವಿಶಂಕರ್ ಗುರೂಜಿ ಆಶ್ರಮದಿಂದ ಯೋಗ ತರಬೇತಿ ನೀಡಲಾಗ್ತಿದೆ. ಸೂರ್ಯ ನಮಸ್ಕಾರ, ಯೋಗ, ಧ್ಯಾನ, ಗೂರೂಜಿ ಪುಸ್ತಕಗಳ ಬಗ್ಗೆ ಪ್ರವಚನ ನೀಡಲಾಗ್ತಿದೆ.

ಕೇವಲ ಯೋಗ ಅಷ್ಟೇ ಅಲ್ಲದೆ, ಕೈದಿಗಳ ಮನಪರಿವರ್ತನೆ ಮಾಡುವ ಬಗ್ಗೆ ತರಬೇತಿ ಕೂಡ ನೀಡಲಾಯಿತು. ಪರಪ್ಪನ ಅಗ್ರಹಾರದಲ್ಲಿ 6 ಸಾವಿರಕ್ಕೂ ಹೆಚ್ಚು ಕೈದಿಗಳಿಗಾಗಿ 600 ಜೈಲು ಸಿಬ್ಬಂದಿ ಇದ್ದಾರೆ. ಈ 600 ಮಂದಿಯನ್ನ ಹತ್ತು ಗುಂಪುಗಳಾಗಿ ವಿಂಗಡಣೆ ಮಾಡಿ, ಒಂದೊಂದು ಟೀಂನಲ್ಲಿ 60 ಮಹಿಳಾ ಹಾಗು ಪುರುಷ ಸಿಬ್ಬಂದಿಯನ್ನ ನೇಮಕ ಮಾಡಲಾಗಿದೆ. ಪ್ರತಿನಿತ್ಯ 6:30 ರಿಂದ‌ 8:30ರವರೆಗೂ ಒಂದೊಂದು ದಿನ ಒಂದೊಂದು ಟೀಂಗೆ ಯೋಗ ತರಬೇತಿ ನೀಡಲಾಗುತ್ತೆ.

ಈ ನಡುವೆ ಹೆಚ್ಚು ತೂಕ ಇರೋರು, ಅನಾರೋಗ್ಯವುಳ್ಳವ್ರಿಗೆ ಪ್ರತ್ಯೇಕ ತರಬೇತಿ ಕೂಡ ನೀಡಲಾಗುತ್ತೆ. ಮಹಿಳಾ ಜೈಲು, ಮುಖ್ಯ ಜೈಲಿನೊಳಗೆ ಹಾಗೂ ಹೊರಗೆ ಭದ್ರತೆ ಇರೋರನ್ನ ಪ್ರತ್ಯೇಕ ತಂಡ ಮಾಡಿರೋ ಜೈಲಾಧಿಕಾರಿಗಳು, ಹತ್ತು ದಿನವೂ ಒಂದೊಂದು ಟೀಂಗೆ ಆಶ್ರಮದ‌ ಇಬ್ಬರು ತರಬೇತುದಾರರಿಂದ ಟ್ರೈನಿಂಗ್ ನೀಡಲಾಗುತ್ತೆ.

ಮೊದಲು ಜೈಲಿನ ಸಿಬ್ಬಂದಿಗೆ ತರಬೇತಿ ಕೊಟ್ಟು, ಬಳಿಕ‌ ಕೈದಿಗಳಿಗೆ ಯೋಗ ಟ್ರೈನಿಂಗ್ ಕೊಡಲು ಸಿದ್ಧತೆ ನಡೆಸಲಾಗುತ್ತಿದೆ.‌ ಕೇವಲ ಟ್ರೈನಿಂಗ್ ಅಷ್ಟೇ ಅಲ್ಲದೆ ಪ್ರತಿ ನಿತ್ಯ ಎಲ್ಲರೂ ಕ್ರೀಡಾ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳಬೇಕು ಅಂತಾ ಅಧಿಕಾರಿಗಳು ಈಗಾಗಲೇ ಸೂಚಿಸಿದ್ದಾರೆ.

ಸದೃಢ ದೇಹ ಹಾಗೂ ಆರೋಗ್ಯದ ಜತೆಗೆ ಕೈದಿಗಳ ಮನಪರಿವರ್ತನೆಯಲ್ಲಿ ಸಕ್ರಿಯರಾದವ್ರಿಗೆ ಬಹುಮಾನದ ಭರವಸೆ ನೀಡಿದ್ದಾರೆ. ಜೊತೆಗೆ ಒಂದು ವೇಳೆ ಸಿಬ್ಬಂದಿಯ ನಿರ್ಲಕ್ಷ್ಯ ಕಂಡು ಬಂದ್ರೆ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ಕೂಡ ನೀಡಿದ್ದಾರೆ.

Last Updated : Jul 21, 2021, 4:53 PM IST

ABOUT THE AUTHOR

...view details