ಕರ್ನಾಟಕ

karnataka

ಮನೆ ಕೆಲಸಕ್ಕಿದ್ದು ಚಿನ್ನಾಭರಣ ದೋಚಿದ್ದ ಕಿಲಾಡಿ ಲೇಡಿ ಅರೆಸ್ಟ್

By

Published : Nov 20, 2021, 4:51 PM IST

Updated : Nov 20, 2021, 6:26 PM IST

ಐದು ತಿಂಗಳಿಂದ ಮನೆ ಕೆಲಸ ಮಾಡಿಕೊಂಡಿದ್ದ ಮಹಿಳೆ, ಇತ್ತೀಚೆಗೆ ಚಿನ್ನಾಭರಣ ಇಟ್ಟಿದ್ದ ಜಾಗ ನೋಡಿ ಕದ್ದು ಪರಾರಿಯಾಗಿದ್ದಳು. ಇದೀಗ ಯಲಹಂಕ ಪೊಲೀಸರು ಖತರ್ನಾಕ್ ಲೇಡಿಯನ್ನು ಬಂಧಿಸಿದ್ದಾರೆ..

ಮನೆ ಕೆಲಸಕ್ಕಿದ್ದು ಚಿನ್ನಾಭರಣ ದೋಚಿದ್ದ ಕಿಲಾಡಿ ಲೇಡಿ ಅರೆಸ್ಟ್
ಮನೆ ಕೆಲಸಕ್ಕಿದ್ದು ಚಿನ್ನಾಭರಣ ದೋಚಿದ್ದ ಕಿಲಾಡಿ ಲೇಡಿ ಅರೆಸ್ಟ್

ಬೆಂಗಳೂರು :ಮನೆ ಕೆಲಸ ಮಾಡಲು ಬಂದಿದ್ದ ಕಿಲಾಡಿ ಲೇಡಿ ಒಬ್ಬಳು ಮನೆಯಲ್ಲಿದ್ದ ಚಿನ್ನಾಭರಣ ದೋಚಿರುವ ಘಟನೆ ಬೆಳಕಿಗೆ ಬಂದಿತ್ತು. ಇದೀಗ ಯಲಹಂಕ ಪೊಲೀಸರು ಖತರ್ನಾಕ್ ಲೇಡಿಯನ್ನು ಬಂಧಿಸಿದ್ದಾರೆ.

ಪ್ರಕರಣದ ಕುರಿತು ಡಿಸಿಪಿ ಸಿಕೆ ಬಾಬಾ ಮಾಹಿತಿ

ಯಲಹಂಕ ಮಾರುತಿನಗರ ನಿವಾಸಿ ಸಬಿನಾ ಬಂಧಿತ ಆರೋಪಿ. ಬಂಧಿತಳಿಂದ 14 ಲಕ್ಷ ಮೌಲ್ಯದ 310 ಗ್ರಾಂ ತೂಕದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಈಶಾನ್ಯ ವಿಭಾಗದ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಪಿ.ಎಸ್ ಶೇಷಾದ್ರಿ ಎನ್ನುವವರ ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆ, ಐದು ತಿಂಗಳಿಂದ ಮನೆ ಕೆಲಸ ಮಾಡಿಕೊಂಡಿದ್ದಳು. ಇತ್ತೀಚೆಗೆ ಚಿನ್ನಾಭರಣ ಇಟ್ಟಿದ್ದ ಜಾಗ ನೋಡಿ ಕದ್ದು ಪರಾರಿಯಾಗಿದ್ದಳು.

ಸದ್ಯ ಆರೋಪಿಯನ್ನು ಬಂಧಿಸಿ ಚಿನ್ನಾಭರಣ ವಶಕ್ಕೆ ಪಡೆದಿರುವ ಯಲಹಂಕ ಠಾಣೆಯ ಪೊಲೀಸರು ಹೆಚ್ಚಿನ ವಿಚಾರಣೆ ನೆಡೆಸಿದ್ದಾರೆ ಎಂದು ಡಿಸಿಪಿ ಸಿಕೆ ಬಾಬಾ ಮಾಹಿತಿ ನೀಡಿದ್ದಾರೆ.

Last Updated : Nov 20, 2021, 6:26 PM IST

ABOUT THE AUTHOR

...view details