ಕರ್ನಾಟಕ

karnataka

ಮಗುವಿನೊಟ್ಟಿಗೆ ಕಟ್ಟಡದಿಂದ ಹಾರಿ ಮಾಡೆಲ್​ ಆತ್ಮಹತ್ಯೆ: ಪತಿ ಅರೆಸ್ಟ್​​​​​​

By

Published : Aug 7, 2019, 1:24 PM IST

ಬೆಂಗಳೂರಿನ ಎಲೈಟ್​ ಅಪಾರ್ಟ್​ಮೆಂಟ್​ನಲ್ಲಿ ಮಾಡೆಲ್​ ಜ್ಯೋತಿ ತನ್ನ ಮಗುವಿನೊಂದಿಗೆ ಆ. 5ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿಗೂ ಮುನ್ನ ಪತಿ ಕಿರುಕುಳಕ್ಕೆ ನೊಂದಿರುವುದಾಗಿ ಆರೋಪಿಸಿದ್ದರು. ಪುಟ್ಟೇನಹಳ್ಳಿ ಠಾಣೆ ಪೊಲೀಸರು ಪತಿ ಪಂಕಜ್​​ನನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಮಾಡೆಲ್ ಜ್ಯೋತಿ, ಮಗುವಿನ ಜತೆ ಪತಿ ಪಂಕಜ್​

ಬೆಂಗಳೂರು:ಬರೋಬ್ಬರಿ 20ನೇ ಅಂತಸ್ತಿನ ಮಹಡಿಯಿಂದ 12 ವರ್ಷದ ಮಗುವಿನ ಜತೆ ತಾಯಿ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಗಸ್ಟ್ 5ರಂದು ನಗರದ ಬೆಂಗಳೂರಿನ ಎಲೈಟ್​ ಅಪಾರ್ಟ್​ಮೆಂಟ್​​​ನಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಮಾಡೆಲ್ ಜ್ಯೋತಿ, ಮಗುವಿನ ಜತೆ ಪತಿ ಪಂಕಜ್​

ಮಾಡೆಲ್​ ಆಗಿದ್ದ ಜ್ಯೋತಿ ಹಾಗೂ ಅವರ 12 ವರ್ಷದ ಮಗು ಮೃತಪಟ್ಟಿದ್ದು, ಆತ್ಮಹತ್ಯೆಗೂ ಮುನ್ನ ಪತಿ ಪಂಕಜ್​ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಆರೋಪಿಸಿದ್ದಾರೆ. ವಿಡಿಯೋ ಆಧರಿಸಿ ಮೃತ ಮಾಡೆಲ್​ನ ಸಹೋದರ ಪ್ರಶಾಂತ್, ಪಂಕಜ್ ವಿರುದ್ಧ ಪುಟ್ಟೇನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಈ ಸಂಬಂಧ ಪಂಕಜ್​​ನನ್ನು ಬಂಧಿಸಲಾಗಿದೆ.

Intro:ಮಗುವಿನ ಜೊತೆ ಕಟ್ಟಡದಿಂದ ಹಾರಿ ಮಾಡೆಲ್ ಆತ್ಮಹತ್ಯೆ ಪ್ರಕರಣ
ಸಾವಿಗೆ ಕಾರಣರಾದ ಪತಿ ಪಂಕಜ್ ಬಂಧನ..

ಮಗುವಿನ ಜೊತೆ ಕಟ್ಟಡದಿಂದ ಹಾರಿ ಮಾಡೆಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿಗೆ ಕಾರಣರಾದ ಪತಿ ಪಂಕಜ್ ಬಂಧನ ಮಾಡುವಲ್ಲಿ ಪುಟ್ಟೇನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆಗಸ್ಟ್ ೫ರಂದು ಮಾಡೆಲ್ ಜ್ಯೋತಿ ತನ್ನ ೧೨ ವರ್ಷದ ಮಗುವಿನ ಜೊತೆ ಎಲೈಟ್ ಅಪಾರ್ಟ್ಮೆಂಟ್ ನ ೨೦ನೇ ಅಂತಸ್ಥಿನಿಂದ ಕೆಳಗೆ ಹಾರಿ ಮೃತಪಟ್ಟಿದ್ದರು.
ಸಾವಿನ ಮುನ್ನ ಸೆಲ್ಫಿ ವಿಡಿಯೋ ಮಾಡಿ ತನ್ನ ಗಂಡ ತನ್ನ ಮೇಲೆ ಕಿಳಾಗಿ ಸಂಶಯಿಸಿದ್ದ..ತನ್ನ ಶೀಲದ ಬಗ್ಗೆ ಸಂಶಯ ಮಾಡಿ ಜಗಳವಾಡಿ ಪ್ರತಿ ದಿನ ಕಿರುಕುಳ ಕೊಡ್ತಿದ್ದಾರೆಂದು ತನ್ನ ನೋವಾನ್ನ ತೋಡಿಕೊಂಡಿದ್ದಳು.. ನಂತ್ರ ಇದೇ ವಿಚಾರಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆತ್ಮಹತ್ಯೆಗೆ ಶರಣಾಗಿದ್ದರು.
ವಿಡಿಯೋ ಆಧರಿಸಿ ಮೃತ ಮಾಡೆಲ್ ನ ಸಹೋದರ ಪ್ರಶಾಂತ್
ಜ್ಯೋತಿಯ ಪತಿ ಪಂಕಜ್ ವಿರುದ್ಧ ಪುಟ್ಟೇನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು..‌ದೂರು ಸಂಬಂಧ ಮಾಡೆಲ್ ನ ಪತಿ ಪಂಕಜ್ ಬಂಧಿಸಿ ತನೀಕೆ ಮುಂದುವರೆಸಿದ್ದಾರೆ.Body:KN_BNG_02_SUSIDE ARREST_7204498Conclusion:KN_BNG_02_SUSIDE ARREST_7204498

ABOUT THE AUTHOR

...view details