ಕರ್ನಾಟಕ

karnataka

ಧ್ವನಿವರ್ಧಕಗಳ ತೆರವಿಗೆ ಗಡುವು ನೀಡಲು ಪ್ರಮೋದ್ ಮುತಾಲಿಕ್ ಯಾರು?: ಶಾಸಕ ಜಮೀರ್ ವಾಗ್ದಾಳಿ

By

Published : Jun 7, 2022, 6:19 PM IST

Updated : Jun 7, 2022, 8:00 PM IST

ನ್ಯಾಯಾಲಯದ ಆದೇಶಗಳನ್ನು ಸರಿಯಾಗಿ ತಿಳಿದುಕೊಳ್ಳದೇ, ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳಲು ಮನಬಂದಂತೆ ಪ್ರಮೋದ್ ಮುತಾಲಿಕ್‌ ಹೇಳಿಕೆ ನೀಡುತ್ತಿದ್ದಾರೆ ಎಂದು ಜಮೀರ್​ ಟೀಕಿಸಿದರು.

who-is-pramod-muthalik-to-give-the-deadline-for-loudspeaker-removel-questions-zameer-ahmed-khan
ಧ್ವನಿವರ್ಧಕಗಳ ತೆರವಿಗೆ ಗಡುವು ನೀಡಲು ಪ್ರಮೋದ್ ಮುತಾಲಿಕ್ ಯಾರು?: ಶಾಸಕ ಜಮೀರ್ ವಾಗ್ದಾಳಿ

ಬೆಂಗಳೂರು: ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ತೆಗೆಸಲು ಸರ್ಕಾರಕ್ಕೆ ಗಡುವು ನೀಡಲು ಪ್ರಮೋದ್ ಮುತಾಲಿಕ್ ಯಾರು?. ನ್ಯಾಯಾಲಯದ ಆದೇಶ ಸರಿಯಾಗಿ ತಿಳಿದುಕೊಳ್ಳದೇ ತಾನೇ ಸರ್ಕಾರ, ತನ್ನಿಂದಲೇ ಸರ್ಕಾರ ಎಂಬಂತೆ ವರ್ತಿಸುತ್ತಿರುವ ಗೂಂಡಾ ಪ್ರವೃತ್ತಿಯ ಮುತಾಲಿಕ್ ಮಾನಸಿಕ ಸ್ಥಿಮಿತತೆ ಕಳೆದಿಕೊಂಡಿದ್ದು, ಕೂಡಲೇ ಅವರನ್ನು ನಿಮ್ಹಾನ್ಸ್​​ ಗೆ ದಾಖಲಿಸಬೇಕೆಂದು ಶಾಸಕ ಜಮೀರ್ ಅಹ್ಮದ್ ಖಾನ್ ವಾಗ್ದಾಳಿ ನಡೆಸಿದ್ದಾರೆ.

ಚಾಮರಾಜಪೇಟೆಯಲ್ಲಿ ಮಾತನಾಡಿದ ಅವರು, ಹೈಕೋರ್ಟ್​​ ಆಗಲಿ, ಸುಪ್ರೀಂಕೋರ್ಟ್​​ ಆಗಲಿ, ಧ್ವನಿವರ್ಧಕಗಳನ್ನು ತೆಗೆಯುವಂತೆ ಎಲ್ಲಿಯೂ ಸೂಚಿಸಿಲ್ಲ. ಬದಲಾಗಿ, ನಿಗದಿತ ಸ್ಥಳಗಳಲ್ಲಿ, ನಿಗದಿತ ಸಮಯದಲ್ಲಿ ಇಂತಿಷ್ಟು ಡೆಸಿಬಲ್ ಪ್ರಮಾಣದಲ್ಲಿ ಧ್ವನಿವರ್ಧಕಗಳನ್ನು ಬಳಸುವಂತೆ ನ್ಯಾಯಾಲಯ ಆದೇಶಿಸಿದೆ .

ಧ್ವನಿವರ್ಧಕಗಳ ತೆರವಿಗೆ ಗಡುವು ನೀಡಲು ಪ್ರಮೋದ್ ಮುತಾಲಿಕ್ ಯಾರು?: ಶಾಸಕ ಜಮೀರ್ ವಾಗ್ದಾಳಿ

ಧ್ವನಿವರ್ಧಕಗಳ ಬಳಕೆಗೆ ಪರವಾನಗಿ ಪಡೆಯುವುದಕ್ಕಾಗಿಯೇ ಸರ್ಕಾರ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಲು ಅವಕಾಶವನ್ನೂ ನೀಡಿದೆ. ಆದರೆ, ಇದ್ಯಾವುದನ್ನೂ ಸರಿಯಾಗಿ ತಿಳಿದುಕೊಳ್ಳದೇ, ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳಲು ಮನಬಂದಂತೆ ಮೋದ್ ಮುತಾಲಿಕ್‌ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.

ಇದೇ ವೇಳೆ ಚಾಮರಾಜಪೇಟೆ ಕ್ಷೇತ್ರದ ವ್ಯಾಪ್ತಿಯ ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕಗಳ ಬಳಕೆಗೆ ಸ್ವತಃ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿ ಸರ್ಕಾರದಿಂದ ಪರವಾನಗಿಯನ್ನು ಜಮೀರ್​ ಕೊಡಿಸಿದರು. ಧ್ವನಿವರ್ಧಕಗಳನ್ನು ಬಳಕೆ ಮಾಡಲು 450 ರೂ.ಶುಲ್ಕ ಪಾವತಿಯೊಂದಿಗೆ ಹೊಸ ನಮೂನೆಯ ಅರ್ಜಿ ಸಲ್ಲಿಸಿ ಪರವಾನಗಿ ಪಡೆಯುವಂತೆ ಸರ್ಕಾರವು ಸೂಚಿಸಿತ್ತು.

ಆ ಪ್ರಕಾರ ತಮ್ಮ ಕ್ಷೇತ್ರದ ವ್ಯಾಪ್ತಿಯ ಮಸೀದಿಗಳು, ಮಂದಿರಗಳು ಮತ್ತು ಚರ್ಚ್​​ಗಳು ಸೇರಿದಂತೆ ಧಾರ್ಮಿಕ ಕೇಂದ್ರಗಳ ಪರವಾಗಿ ಮಸ್ಜಿದ್ -ಇ- ಸುಭಾನಿಯಾದಲ್ಲಿ ಪರವಾನಗಿ ನವೀಕರಣಕ್ಕಾಗಿ 450 ರೂ. ಶುಲ್ಕದೊಂದಿಗೆ ಅರ್ಜಿ ಸಲ್ಲಿಸಿ, ಸ್ವೀಕೃತಿ ಪತ್ರವನ್ನು ಧಾರ್ಮಿಕ ಕೇಂದ್ರಗಳ ಮುಖಂಡರಿಗೆ ವಿತರಿಸಿದರು.

ಇದನ್ನೂ ಓದಿ:ವಾಹನ ತಪಾಸಣೆ ನಡೆಸುತ್ತಿದ್ದ ಟ್ರಾಫಿಕ್ ಪೊಲೀಸರು: ಗಾಬರಿಗೊಂಡು ಸೆಲ್ಫ್ ಆಕ್ಸಿಡೆಂಟ್ ಮಾಡಿಕೊಂಡ ಬೈಕ್‌ ಸವಾರರು

Last Updated :Jun 7, 2022, 8:00 PM IST

ABOUT THE AUTHOR

...view details