ಕರ್ನಾಟಕ

karnataka

ETV Bharat / state

ಭಾರಿ ಮಳೆಯಲ್ಲಿ ರಕ್ಷಣೆಗಿಳಿದಿದ್ದ ಸಿಬ್ಬಂದಿಗೆ ಅವಾಚ್ಯ ಶಬ್ದಗಳ ಬಳಕೆ.... ವಿಡಿಯೋ ವೈರಲ್

ಕೆಲ ಪುಂಡರು ಭಾರಿ ಮಳೆಯಲ್ಲಿ ರಕ್ಷಣೆಗಿಳಿದಿದ್ದ ಸಿಬ್ಬಂದಿಗೆ ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿರುವ ವಿಡಿಯೋ ಈಗ ವೈರಲ್ ಆಗ್ತಿದ್ದು, ವ್ಯಾಪಕ ವಿರೋದ ವ್ಯಕ್ತವಾಗಿದೆ.

viral Video, viral Video of abusing rescue staff, viral Video of abusing rescue staff in Bengaluru, Bengaluru rain, Bengaluru rain news, ವಿಡಿಯೋ ವೈರಲ್​, ರಕ್ಷಣಾ ಸಿಬ್ಬಂದಿಗೆ ಅವಾಚ್ಯ ಶಬ್ದ ಬಳಕೆ ವಿಡಿಯೋ ವೈರಲ್​, ಬೆಂಗಳೂರಿನಲ್ಲಿ ರಕ್ಷಣಾ ಸಿಬ್ಬಂದಿಗೆ ಅವಾಚ್ಯ ಶಬ್ದ ಬಳಕೆ ವಿಡಿಯೋ ವೈರಲ್, ಬೆಂಗಳೂರು ಮಳೆ ಸುದ್ದಿ, ಬೆಂಗಳೂರು ಮಳೆ,
ಭಾರಿ ಮಳೆಯಲ್ಲಿ ರಕ್ಷಣೆಗಿಳಿದಿದ್ದ ಸಿಬ್ಬಂದಿಗೆ ಅವಾಚ್ಯ ಶಬ್ದಗಳ ಬಳಕೆ

By

Published : Nov 6, 2021, 12:40 AM IST

ಬೆಂಗಳೂರು:ಗುರುವಾರ ರಾತ್ರಿ ಸುರಿದ ಭಾರೀ ಮಳೆಗೆ ಪ್ರಾಣದ ಹಂಗು ಲೆಕ್ಕಿಸದೇ ಕೆಲಸ ಮಾಡಿದ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.

ಬೆಂಗಳೂರು ಮಳೆ ಸುದ್ದಿ, ಬೆಂಗಳೂರು ಮಳೆ

ಮಳೆಯಿಂದಾಗಿ ರಕ್ಷಣೆಗೆ ಮುಂದಾದ ಸಿಬ್ಬಂದಿಗಳಿಗೆ ಕೆಟ್ಟ ಮಾತುಗಳಿಂದ ನಿಂದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಜೆ.ಸಿ ರೋಡ್​ನ ಶಾಪ್​ಗಳಿಗೆ ನೀರು ನುಗ್ಗಿತ್ತು. ಅಲ್ಲಿದ್ದವರನ್ನು ರಕ್ಷಣೆಗೆ ಮುಂದಾಗಿದ್ದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಎಡವಿ ಬಿದ್ದಿದ್ದರು. ಆಗ ವಿಕೃತವಾಗಿ ಕೇಕೆ ಹಾಕಿ ಪುಂಡರು ನಕ್ಕಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಗ್ನಿ ಶಾಮಕ ದಳದ ಅಧಿಕಾರಿಗಳು ಕಾರ್ಯಾಚರಣೆಯ ವೇಳೆ ಪುಂಡರು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೇಕೆ ಹಾಕಿದ್ದಾರೆ. ಈ ವಿಡಿಯೋ ಕುರಿತು ರಕ್ಷಣಾ ಸಿಬ್ಬಂದಿಗಳು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details