ಕರ್ನಾಟಕ

karnataka

UPSC Results: ಅಂಗನವಾಡಿ ಶಿಕ್ಷಕಿ ಮಗನಿಗೆ 448ನೇ ರ‍್ಯಾಂಕ್‌, ರಾಜ್ಯಕ್ಕೆ ಕೀರ್ತಿ ತಂದ 25ಕ್ಕೂ ಹೆಚ್ಚು ಸಾಧಕರ ಮಾಹಿತಿ

By

Published : May 23, 2023, 6:29 PM IST

Updated : May 25, 2023, 5:38 PM IST

ಈ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಒಟ್ಟು 933 ಅಭ್ಯರ್ಥಿಗಳು ಅರ್ಹತೆಯನ್ನು ಪಡೆದಿದ್ದಾರೆ. ಇದರಲ್ಲಿ ಕರ್ನಾಟಕದ 25ಕ್ಕೂ ಅಧಿಕ ಅಭ್ಯರ್ಥಿಗಳು ತೇರ್ಗಡೆಯನ್ನು ಹೊಂದಿದ್ದಾರೆ.

upsc-result-declared-more-than-20-candidates-from-karnataka-pass-dot-dot-dot
ಯುಪಿಎಸ್​ಸಿ ಫಲಿತಾಂಶ ಪ್ರಕಟ: ಕರ್ನಾಟಕದ 20ಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಸ್​​...

ಬೆಂಗಳೂರು: ಬಹು ನಿರೀಕ್ಷಿತ ಕೇಂದ್ರ ಲೋಕಸೇವಾ ಆಯೋಗದ ಫಲಿತಾಂಶ ಹೊರಬಿದ್ದಿದೆ. 2023ನೇ ಸಾಲಿನ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿಯೂ ಕನ್ನಡಿಗರು ತಮ್ಮ ಸಾಧನೆ ಮೂಲಕ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಪ್ರಮುಖವಾಗಿ ಕರ್ನಾಟಕದ 25ಕ್ಕೂ ಹೆಚ್ಚು ಅಭ್ಯರ್ಥಿಗಳು ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇದರಲ್ಲಿ ಹುಬ್ಬಳ್ಳಿಯ ಬಸ್ ಕಂಡಕ್ಟರ್ ಮಗ ಹಾಗೂ ತಾಂಡ ಯುವಕ ಕೂಡ ಅರ್ಹತೆ ಪಡೆದಿರುವುದು ಯುವ ಜನತೆಗೆ ಸ್ಫೂರ್ತಿಯಾಗಿದೆ.

ಇಂಡಿಯಾ ಫಾರ್ ಐಎಎಸ್ ಅಕಾಡೆಮಿಯಿಂದ 22 ಹಾಗೂ ಡಾ.ರಾಜಕುಮಾರ್ ಅಕಾಡೆಮಿಯಿಂದ 11 ಅಭ್ಯರ್ಥಿಗಳು ಯುಪಿಎಸ್​ಸಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಕರ್ನಾಟಕದ ಅಭ್ಯರ್ಥಿಗಳ ಪಟ್ಟಿ ಇಂತಿದೆ..

  1. 143 - ಹರ್ಷ್ ಪ್ರಶಾರ್
  2. 176 - ಲಕ್ಷ್ಮೀ ಪ್ರಿಯಾ ಉಪಾಧ್ಯ
  3. 197 - ಸೂರಜ್ ಡಿ
  4. 198 - ಸೌರಭ್ ನರೇಂದ್ರ
  5. 216 - ಶಿವಂ ಕುಮಾರ್
  6. 224 - ರವಿರಾಜ್ ಅವಸ್ತಿ
  7. 260 - ಸೌರಭ್ ಕೆ
  8. 345 - ದಾಮಿನಿ ಎಂ ದಾಸ್
  9. 362 - ಶೃತಿ ಯರಘಟ್ಟಿ
  10. 410 - ಢೋಂಗ್ರೇ ರೇವಯ್ಯ
  11. 413 - ಶ್ರೇಯಂಶ್ ಸುರಾನಾ
  12. 448 - ಭಾನುಪ್ರಕಾಶ್ ಜೆ
  13. 501 - ಧನುಷ್ ಕುಮಾರ್
  14. 582 - ರಾಹುಲ್ ಕುಮಾರ್
  15. 589 - ಸಿದ್ದಲಿಂಗಪ್ಪ ಕೆ ಪೂಜಾರ್
  16. 617 - ಮೇಘನಾ ಐ ಎನ್
  17. 659 - ನಿಮಿಶಾಂಬ ಸಿಪಿ
  18. 690 - ತನ್ಮಯ್ ಎಂ ಎಸ್
  19. 745 - ಮೊಹಮ್ಮದ್ ಸಿದ್ದಿಕ್ ಶರೀಫ್
  20. 813 - ಅಭಿಷೇಕ್ ಕೆ ಎಚ್
  21. 866 - ನಗುಲಾ ಕೃಪಾಕರ್
  22. 929 - ಮನೋಜ್ ಹೆಚ್‌ ಪಿ
  23. 890 - ಅರ್ಜುನ್ ನಾಯಕ
  24. 394 - ವಿಷ್ಣು ಶಶಿಕುಮಾರ್
  25. 746 - ಅಕ್ಷಯಗೌಡ
  26. 390 - ಪೂಜಾ

ಎರಡನೇ ಬಾರಿ ಪರೀಕ್ಷೆ ಬರೆದು ಪಾಸ್ ಆದ ವೈದ್ಯ:ಡಾ. ಭಾನುಪ್ರಕಾಶ್ ಅವರು ಯುಪಿಎಸ್​​ಸಿ ಪರೀಕ್ಷೆಯಲ್ಲಿ ತೆರ್ಗಡೆ ಹೊಂದಿದ್ದಾರೆ. 4 ವರ್ಷ ವೈದ್ಯರಾಗಿ ಸೇವೆ ಸಲ್ಲಿಸಿದ್ದ ಅವರು ತಮ್ಮ 2ನೇ ಪ್ರಯತ್ನದಲ್ಲೇ 448ನೇ ರ‍್ಯಾಂಕ್‌ ಗಳಿಸಿ ಸಾಧನೆ ಮಾಡಿದ್ದಾರೆ. ಡಾ.ಭಾನುಪ್ರಕಾಶ್ ಮಾತನಾಡಿ, ತಾಯಿ ಅಂಗನವಾಡಿ ಟೀಚರ್ ಆಗಿದ್ದರು, ಅವರನ್ನು ನೋಡಿ ಡಾಕ್ಟರ್‌ ಆದೆ. ಡಾಕ್ಟರ್ ವೃತ್ತಿಯನ್ನು ಮಾಡುವಾಗ ಒಂದು ದಿನ ಇನ್ನೇನಾದರೂ ಸಾಧಿಸಬೇಕು ಎನ್ನಿಸಿತ್ತು. ಆದ್ದರಿಂದ ಯು.ಪಿ.ಎಸ್.ಸಿ ಬರೆದು ಎರಡನೇ ಪ್ರಯತ್ನದಲ್ಲಿ ಪಾಸ್ ಆಗಿದ್ದೇನೆ ಎಂದು ಸಂತಸ ಹಂಚಿಕೊಂಡರು.

ಇದನ್ನೂ ಓದಿ: ನನ್ನ ಮಗ ಏನು ಓದಿದ್ದಾನೆ ಎಂಬುದೇ ಗೊತ್ತಿರಲಿಲ್ಲ: UPSC ಪಾಸಾದ ಕಂಡಕ್ಟರ್​​ ಮಗ ಸಿದ್ದಲಿಂಗಪ್ಪ ತಾಯಿಯ ಮುಗ್ದ ಮಾತು

ಪ್ರತಿದಿನ 2 ರಿಂದ 6 ಗಂಟೆಗಳ ಕಾಲ ಓದುತ್ತಿದ್ದೆ, ಸಾಕಷ್ಟು ಇನಸ್ಟಿಟ್ಯೂಟ್ ಗಳ ಸಹಾಯ ಪಡೆದಿದ್ದೇನೆ. ಭವಿಷ್ಯದ ಆಕಾಂಕ್ಷಿಗಳು ಪುಸ್ತಕಗಳು ಹಾಗೂ ಆನ್ಲೈನ್ ನಲ್ಲಿ ಸಿಗುವ ವಿಡಿಯೋ ಗಳನ್ನು ನೋಡಿ ಓದಬಹುದು. ನನಗೆ ಈ ರಿಸಲ್ಟ್ ತುಂಬಾ ಖುಷಿ ಕೊಟ್ಟಿದೆ, ನಮ್ಮ ಫ್ಯಾಮಿಲಿಗೂ ತುಂಬಾ ಖುಷಿಯಾಗಿದೆ ಎಂದು ಹೇಳಿದರು.

ಯುಪಿಎಸ್​ಸಿ ಪಾಸಾದ ಅಭ್ಯರ್ಥಿಗಳು

ಬಸ್ ಕಂಡಕ್ಟರ್ ಮಗ ಸಿದ್ಧಲಿಂಗಪ್ಪ 589 ರ‍್ಯಾಂಕ್‌:ಹುಬ್ಬಳ್ಳಿಯಲ್ಲಿ ಬಸ್ ಕಂಡಕ್ಟರ್ ಮಗ, ನಾಗರಭಾವಿಯ ಇಂಡಿಯನ್ ಫ಼ಾರ್ ಐ.ಎ.ಎಸ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಯು. ಪಿ. ಎಸ್. ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಬಡತನ, ಬದುಕಿನ ಕಷ್ಟವನ್ನು ಗೆದ್ದು ಯು.ಪಿ.ಎಸ್.ಸಿ ರ್ಯಾಂಕ್ ಪಡೆದ ಸಿದ್ದಲಿಂಗಪ್ಪ ಮನೆಯವರು ಸಂಭ್ರಮ ಪಡುತ್ತಿದ್ದಾರೆ. ಕಂಡೆಕ್ಟರ್ ಅಪ್ಪ ತನಗಾಗಿ ಪಟ್ಟ ಕಷ್ಟ ನೆನೆದು ಸಿದ್ದಲಿಂಗಪ್ಪ ಭಾವುಕರಾಗಿ ಮಾತನಾಡಿದರು.

ಯಲಗೂರೇಶ ಅರ್ಜುನ ನಾಯಕ 890ನೇ ರ‍್ಯಾಂಕ್‌: ವಿಜಯಪುರದ ಯಲಗೂರೇಶ ಅರ್ಜುನ ನಾಯಕ (ರೋಲ್​ ನಂಬರ್​ 7301629) 890ನೇ ರ‍್ಯಾಂಕ್‌ ಪಡೆದಿದ್ದಾರೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಸರೂರ ತಾಂಡಾ ನಿವಾಸಿ. ತಂದೆ - LIC Agency ಮಾಡುತ್ತಿದ್ದರು. ಈಗ ಇಲ್ಲ. ತಾಯಿ - ಗೃಹಿಣಿ. ಇಬ್ಬರು ಸಹೋದರರು, 3 ಜನ ಅಕ್ಕಂದಿರು. ಇದರಲ್ಲಿ ಇಬ್ಬರಿಗೆ ಮದುವೆಯಾಗಿದೆ. ಅಣ್ಣ ಮೈಸೂರಿನಲ್ಲಿ ಪೊಲೀಸ್ ಪೇದೆ. ತಮ್ಮ ಕಾಂಪಿಟೀಟಿವ್ ಪರೀಕ್ಷೆಗೆ ತಯಾರಾಗುತ್ತಿದ್ದಾರೆ.

ಇದನ್ನೂ ಓದಿ:ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟ..ಇಶಿತಾ ಕಿಶೋರ್​ ಈ ವರ್ಷದ ಟಾಪರ್​

Last Updated : May 25, 2023, 5:38 PM IST

ABOUT THE AUTHOR

...view details