ಕರ್ನಾಟಕ

karnataka

ಪುನರ್ವಸತಿ ಕೇಂದ್ರದಲ್ಲಿ ಯುವಕನ ಅನುಮಾನಸ್ಪಾದ ಸಾವು: ಇಬ್ಬರು ಆರೋಪಿಗಳ ಬಂಧನ

By

Published : Jan 19, 2023, 8:41 PM IST

ದುಶ್ಚಟ ನಿವಾರಣಾ ಕೇಂದ್ರದಲ್ಲಿ ಕ್ಷುಲ್ಲಕ ಕಾರಣಕ್ಕೆ ಸಿಬ್ಬಂದಿ ಮತ್ತು ಚಿಕಿತ್ಸೆಗೆ ದಾಖಲಾಗಿದ್ದ ವ್ಯಕ್ತಿಯ ನಡುವೆ ಗಲಾಟೆ ನಡೆದಿದ್ದು, ಸಿಬ್ಬಂದಿ ರಾಡ್​ನಿಂದ ಹಲ್ಲೆ ನಡೆಸಿ ಚಿಕಿತ್ಸೆಗೆ ದಾಖಲಾಗಿದ್ದ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.

yalahanka-murder-case
ರಿಹ್ಯಾಬಿಲಿಟೇಶನ್ ಸೆಂಟರ್​ನಲ್ಲಿ ಯುವಕನ ಅನುಮಾನಸ್ಪಾದ ಸಾವು

ಡಿಸಿಪಿ ಡಾ.ಅನೂಪ್ ಶೆಟ್ಟಿ ಪ್ರತಿಕ್ರಿಯೆ

ಬೆಂಗಳೂರು: ಚಿಕಿತ್ಸೆಗೆ ಎಂದು ದಾಖಲಾಗಿದ್ದ ಯುವಕ ದುಶ್ಚಟ ನಿವಾರಣಾ ಕೇಂದ್ರದಲ್ಲೇ ಅನುಮಾಸ್ಪಾದವಾಗಿ ಸಾವನ್ನಪ್ಪಿರುವ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಯಲಹಂಕ ಉಪನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರವಿ ಹಾಗೂ ರೋಹಿತ್​ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಆರೀಫ್ ಖಾನ್ ಸಾವಿಗೀಡಾದ ದುದೈರ್ವಿ.

ಯಲಹಂಕ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅಂಬಾಭವಾನಿ ದೇವಸ್ಥಾನ ರಸ್ತೆಯ ವೀರಸಾಗರದ ಶ್ರೀಸಾಯಿ ದೀನಬಂಧು ರಿಹ್ಯಾಬಿಲಿಟೇಶನ್ ಸೆಂಟರ್ ಸಿಬ್ಬಂದಿಯಾಗಿರುವ ರವಿ ಹಾಗೂ ರೋಹಿತ್​ರನ್ನು ಕೊಲೆ‌ ಮಾಡಿರುವ ಆರೋಪದಡಿ ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಶ್ಯಾಂಪುರದ ಆರೀಫ್ ನವಾಜ್ ಶ್ರೀಸಾಯಿ ಧೀನ ಬಂದು ರಿಹ್ಯಾಬಿಲಿಟೇಶನ್ ಸೆಂಟರ್​ಗೆ ವಾರದ ಹಿಂದೆ ಡ್ರಗ್ಸ್ ಸೇವನೆಯಿಂದ ಮುಕ್ತನಾಗಲು ಎಂದು ದಾಖಲಾಗಿದ್ದ. ಸ್ನಾನಕ್ಕೆ ಬಿಸಿ ನೀರು ಬೇಕೆಂದು ಪ್ರಾರಂಭವಾದ ಜಗಳ ಸಾವಿನಲ್ಲಿ ಅಂತ್ಯವಾಗಿದೆ.

ಇನ್ನು ಇದಕ್ಕೆ ಮೃತ ಆರೀಫ್​ ಅವರ ಸಹೋದರ ಆಸೀಫ್​ ಪ್ರತಿಕ್ರಿಯಿಸಿ, ಚಿಕಿತ್ಸೆ‌ ನೀಡಿ ವ್ಯಸನ ಮುಕ್ತನನ್ನಾಗಿ ಮಾಡಬೇಕಿದ್ದ ಪುನರ್ವಸತಿ ಕೇಂದ್ರದದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಆರೀಫ್​ನ ಕಾಲು, ಸೊಂಟ, ಬೆನ್ನಿಗೆ ಕಬ್ಬಿಣದ ರಾಡ್ ಮತ್ತು ಕೋಲಿನಿಂದ ರಕ್ತ ಹೆಪ್ಪುಗಟ್ಟುವಂತೆ ಹಲ್ಲೆ ಮಾಡಲಾಗಿದೆ. ಸಿಬ್ಬಂದಿ ನಡೆಸಿದ ಹಲ್ಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಆರೀಫ್​ ಮೃತ ಪಟ್ಟಿದ್ದಾನೆ. ನಮಗಾದ ಅನ್ಯಾಯ ಇನ್ಯಾರಿಗೂ ಆಗಬಾರದು.

ರಿಹ್ಯಾಬಿಲಿಟೇಶನ್ ಸೆಂಟರ್​​​​ನವರಿಗೆ ತಕ್ಕ ಶಿಕ್ಷೆಯಾಗಬೇಕು. ಮದುವೆಯಾಗಿ ಒಂದು ಮಗು ಇದ್ದ ಆರೀಫ್​ನ ಹೆಂಡತಿ, ಮಕ್ಕಳು ಅನಾಥರಾಗಿದ್ದಾರೆ. ಶ್ರೀಸಾಯಿ ರಿಹ್ಯಾಬಿಲಿಟೇಶನ್ ಸೆಂಟರ್​ನಲ್ಲಿ 50ಕ್ಕು ಹೆಚ್ಚು ಜನರಿದ್ದಾರೆ. ರಿಹ್ಯಾಬಿಲಿಟೇಶನ್ ಚಿಕಿತ್ಸೆ ಸೆಂಟರ್​ನಲ್ಲಿ ಹಲ್ಲೆ, ವಂಚನೆ ಪ್ರಕರಣ ಜಾಸ್ತಿಯಾಗ್ತಿವೆ. ಇದು ಆರೀಫ್ ಕೊಲೆ ಮೂಲಕ ವಿಷಯ ಹೊರ ಬಂದಿದ್ದು ಪ್ರಕರಣ ದಾಖಲಿಸಿಕೊಂಡ ಯಲಹಂಕ ಉಪನಗರ ಪೊಲೀಸರು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಸೀಫ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಮಾರಕಾಸ್ತ್ರಗಳಿಂದ ಯುವತಿ ಬರ್ಬರ ಹತ್ಯೆ: ನಾಪತ್ತೆಯಾಗಿದ್ದ ಆರೋಪಿ ಶವವಾಗಿ ಪತ್ತೆ

ಪ್ರಕಣದ ಕುರಿತು ಡಿಸಿಪಿ ಡಾ.ಅನೂಪ್ ಶೆಟ್ಟಿ ಮಾತನಾಡಿ, ಪ್ರಕಣದ ಪರಿಶೀಲನೆ ಮಡಾಲಾಗಿದ್ದು, ಸಿಬ್ಬಂದಿ ಹಲ್ಲೆ ಮಾಡಿ ಕೊಂದಿರುವುದಾಗಿ ಮೇಲ್ನೋಟಕ್ಕೆ ಮಾಹಿತಿ ದೊರೆತಿದೆ. ಕುಟುಂಬಸ್ಥರ ದೂರಿನನ್ವಯ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದ ತನಿಖೆ ಮಾಡಿ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ:ನಾಪತ್ತೆಯಾಗಿದ್ದ ಮಹಿಳಾ ಕ್ರಿಕೆಟರ್​ ಶವವಾಗಿ ಪತ್ತೆ... ತಂಡದಲ್ಲಿ ಸ್ಥಾನ ಸಿಗದ್ದಕ್ಕೆ ಪ್ರಾಣಬಿಟ್ಟಳೇ ಯುವ ಆಟಗಾರ್ತಿ?

ಬ್ರೇಕಪ್‌ ಆದ ಕಾರಣ ಮನನೊಂದು ಆತ್ಮಹತ್ಯೆ‌ ಶರಣಾದ ಯುವಕ: ಇನ್ನೊಂದು ಕಡೆ,ಆರು ವರ್ಷದ ಪ್ರೀತಿಗೆ ಬ್ರೇಕ್ ಬಿದ್ದಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಳ ಉಪನಗರದಲ್ಲಿ ನಡೆದಿದೆ. ರೋಹಿತ್ (25) ಮೃತ ಯುವಕ. ರೋಹಿತ್​ ಕೊರಿಯರ್ ಕಂಪನಿಯೊಂದರಲ್ಲಿ ಕೆಲಸ‌ ಮಾಡುತ್ತಿದ್ದ. ಕಳೆದ ಆರು ವರ್ಷಗಳಿಂದ ರೋಹಿತ್​ ಯುವತಿಯೊಬ್ಬಳನ್ನ ​ಲವ್​ ಮಾಡುತ್ತಿದ್ದ.

ಇಬ್ಬರ ನಡುವೆ ಮನಸ್ಥಾಪ ಉಂಟಾದ ಕಾರಣ ಯುವತಿ ರೋಹಿತ್​ ಜೊತೆಗೆ ಬ್ರೇಕ್​ಅಪ್​ ಮಾಡಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಈ ಇಬ್ಬರು ಭೇಟಿಯಾಗಿದ್ದಾರೆ. ಆಗ ಮತ್ತೇ ಇಬ್ಬರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಇದರಿಂದ ಮನನೊಂದು ರೋಹಿತ್​ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ‌ ಮಾಡಿಕೊಂಡಿದ್ದಾನೆ. ಘಟನೆ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

ಇದನ್ನೂ ಓದಿ:ವಿಜಯಪುರದಲ್ಲಿ ಪ್ರೇಮಿಗಳು ಆತ್ಮಹತ್ಯೆ.. ಹರಪನಹಳ್ಳಿಯಲ್ಲಿ ಮಕ್ಕಳೊಂದಿಗೆ ತಾಯಿ ಸೂಸೈಡ್​

ABOUT THE AUTHOR

...view details