ಕರ್ನಾಟಕ

karnataka

ರಾಜ್ಯದಲ್ಲಿ 1,301 ಮಂದಿಗೆ ಕೋವಿಡ್ ದೃಢ: 17 ಸೋಂಕಿತರ ಸಾವು

By

Published : Aug 27, 2021, 7:13 PM IST

Updated : Aug 27, 2021, 7:19 PM IST

ಈ ದಿನ ರಾಜ್ಯದಲ್ಲಿ 1,301 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ತಗುಲಿದ್ದು, 1,614 ಜನರು ಕೋವಿಡ್​ನಿಂದ ಗುಣಮುಖರಾಗಿದ್ದಾರೆ. ಇಂದು ಸೋಂಕಿಗೆ 17 ಸೋಂಕಿತರು ಸಾವನ್ನಪ್ಪಿದ್ದಾರೆ.

corona
ಕೋವಿಡ್

ಬೆಂಗಳೂರು:ರಾಜ್ಯದಲ್ಲಿಂದು 1,86,900 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದ್ದು, ಇದರಲ್ಲಿ 1,301ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 29,44,764ಕ್ಕೆ ಏರಿಕೆಯಾಗಿದೆ.

ಈ ದಿನ 1,614 ಸೋಂಕಿತರು ಆಸ್ಪತ್ರೆಗಳಿಂದ ಡಿಸ್ಚಾರ್ಜ್​​ ಆಗಿದ್ದು, ಒಟ್ಟು 28,88,520 ಜನರು ಗುಣಮುಖರಾಗಿದ್ದಾರೆ. ಇನ್ನು ರಾಜ್ಯದಲ್ಲಿ 18,970 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ ಶೇ 0.69 ರಷ್ಟಿದೆ.

ಸೋಂಕಿಗೆ ಇಂದು 17 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 37,248ಕ್ಕೆ ಏರಿಕೆ ಕಂಡಿದೆ. ಸಾವಿನ ಪ್ರಮಾಣ ಶೇ1.30 ರಷ್ಟಿದೆ. ವಿಮಾನ ನಿಲ್ದಾಣದಿಂದ1,586 ಜನರು ತಪಾಸಣೆಗೆ ಒಳಪಟ್ಟಿದ್ದರೆ, 350 ಪ್ರಯಾಣಿಕರು ಯುಕೆಯಿಂದ ಆಗಮಿಸಿದ್ದಾರೆ.

ರೂಪಾಂತರಿ ವೈರಸ್ ಅಪಡೇಟ್ಸ್

1) ಡೆಲ್ಟಾ ( Delta/B.617.2) -1089

2)ಅಲ್ಪಾ(Alpha/B.1.1.7) - 155

3) ಕಪ್ಪಾ (Kappa/B.1.617) 159

4) ಬೇಟಾ ವೈರಸ್ (BETA/B.1.351) -7

5) ಡೆಲ್ಟಾ ಪ್ಲಸ್(Delta plus/B.1.617.2.1(AY.1) -4

6) ಈಟಾ (ETA/B.1.525) - 1

ಓದಿ: ಮೈಸೂರು ಚಿನ್ನಾಭರಣ ಅಂಗಡಿ ದರೋಡೆ ಪ್ರಕರಣದಲ್ಲಿ 6 ಜನರ ಬಂಧನ : ಡಿಜಿಪಿ ಪ್ರವೀಣ್ ಸೂದ್

Last Updated : Aug 27, 2021, 7:19 PM IST

ABOUT THE AUTHOR

...view details