ಕರ್ನಾಟಕ

karnataka

ರಾಜ್ಯದ ಜನತೆಗೆ ಶಾಕ್​ ನೀಡಿದ ಹವಾಮಾನ ಇಲಾಖೆ: ನಾಳೆಯಿಂದ ರಾಜ್ಯದಲ್ಲಿ ಮೂರು ದಿನ ಭಾರಿ ಮಳೆ ಅಲರ್ಟ್​

By

Published : Nov 25, 2021, 4:21 PM IST

rain
ಮಳೆ ()

ನಾಳೆಯಿಂದ (ನ.26) ರಾಜ್ಯಾದ್ಯಂತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರು:ಈಗಾಗಲೇ ಮಳೆಯಿಂದ ತತ್ತರಿಸಿರುವ ನಾಡಿನ ಜನತೆಗೆ ಹವಾಮಾನ ಇಲಾಖೆ ಮತ್ತೊಂದು ಶಾಕ್ ನೀಡಿದೆ. ನ.26 (ನಾಳೆ) ಯಿಂದ ರಾಜ್ಯಾದ್ಯಂತ ಮತ್ತೆ ವರುಣನ ಆರ್ಭಟ ಮುಂದುವರಿಯಲಿದೆ ಎಂದು ಮಾಹಿತಿ ನೀಡಿದ್ದು, ಜನರು ಮುನ್ನೆಚ್ಚರಿಕೆಯಿಂದ ಇರಬೇಕಾಗಿದೆ.

ಇಂದು ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಶಿವಮೊಗ್ಗ, ಹಾಸನ, ದಾವಣಗೆರೆ, ಚಿಕ್ಕಬಳ್ಳಾಪುರ, ಮೈಸೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಗಳಿವೆ. ಚಳಿ ಸಹ ಹೆಚ್ಚಾಗಲಿದೆ ಎಂದು ಹೇಳಿದೆ.

ಉತ್ತರದಲ್ಲಿ ಒಣ ಹವೆ:

ಉತ್ತರ ಕರ್ನಾಟಕದಲ್ಲಿ ಚಳಿ ಮತ್ತು ಸುಳಿ ಗಾಳಿಯ ಜೊತೆಗೆ ಒಣ ಹವೆ ಇರಲಿದೆ.

3 ದಿನಗಳ ಕಾಲ ಭಾರಿ ಮಳೆ:

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಚಾಮರಾಜನಗರ, ತುಮಕೂರಿನಲ್ಲಿ ನ. 26 (ನಾಳೆಯಿಂದ)ರಿಂದ 3 ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಸೈಕ್ಲೋನ್​​ ಕೇಂದ್ರ ಬಿಂದು:

ಚಂಡಮಾರುತದ ಕೇಂದ್ರ ಬಿಂದು ನೈಋತ್ಯ ಮತ್ತು ಆಗ್ನೇಯ ಬಂಗಾಳಕೊಲ್ಲಿಯಲ್ಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ABOUT THE AUTHOR

...view details