ಕರ್ನಾಟಕ

karnataka

ಪಿಎಸ್ಐ ಪರೀಕ್ಷಾ ನೇಮಕಾತಿ ಪ್ರಕರಣ: ಇಬ್ಬರು ಪಿಸಿ ಸೇರಿ ಮೂವರ ಬಂಧನ

By

Published : Jun 6, 2022, 3:14 PM IST

Updated : Jun 6, 2022, 4:44 PM IST

ಕಲಾಸಿಪಾಳ್ಯ ಪೊಲೀಸ್ ಠಾಣೆ ಹೆಡ್​​ಕಾನ್ ಸ್ಟೇಬಲ್ ಹರೀಶ್, ನೆಲಮಂಗಲ ಪೊಲೀಸ್ ಠಾಣೆಯ ಮೋಹನ್‌‌ ಕುಮಾರ್ ಹಾಗೂ ಅಭ್ಯರ್ಥಿ ದರ್ಶನ್ ಗೌಡನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

ಪಿಎಸ್ಐ ಪರೀಕ್ಷಾ ನೇಮಕಾತಿ ಪ್ರಕರಣ
ಪಿಎಸ್ಐ ಪರೀಕ್ಷಾ ನೇಮಕಾತಿ ಪ್ರಕರಣ

ಬೆಂಗಳೂರು: ಬೆಂಗಳೂರು: ಪೊಲೀಸ್ ಪರೀಕ್ಷಾ ನೇಮಕಾತಿ ಪ್ರಕರಣದ ತನಿಖೆ‌ ನಡೆಸುತ್ತಿರುವ ಸಿಐಡಿ ಪೊಲೀಸರು ಈ ತಿಂಗಳೊಳಗೆ ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಹಗರಣದಲ್ಲಿ ಶಾಮೀಲಾಗಿದ್ದ ಆರೋಪದಡಿ ಇಬ್ಬರು‌ ಪೊಲೀಸ್ ಕಾನ್‌ಸ್ಟೇಬಲ್ ಸೇರಿ ಮೂವರು ಆಭ್ಯರ್ಥಿಗಳನ್ನು ಬಂಧಿಸಿದ್ದಾರೆ.

ಕಲಾಸಿಪಾಳ್ಯ ಪೊಲೀಸ್ ಠಾಣೆ ಹೆಡ್​​ಕಾನ್ ಸ್ಟೇಬಲ್ ಹರೀಶ್, ನೆಲಮಂಗಲ ಪೊಲೀಸ್ ಠಾಣೆಯ ಮೋಹನ್‌‌ ಕುಮಾರ್ ಹಾಗೂ ಅಭ್ಯರ್ಥಿ ದರ್ಶನ್ ಗೌಡನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

ಪಿಎಸ್ಐ ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ದರ್ಶನ್ ಗೌಡನನ್ನು ಸಿಐಡಿ ಪೊಲೀಸರು ವಶಕ್ಕೆ‌ ಪಡೆದುಕೊಂಡು ಪ್ರಶ್ನಿಸಿದ್ದರು. ಮೋಸದ ಜಾಲದಲ್ಲಿ ಹಾಲಿ ಸಚಿವ ಅಶ್ವತ್ಥ್​ ನಾರಾಯಣ್ ಹಾಗೂ ಸಹೋದರ ಕುಮ್ಮಕ್ಕು‌ ನೀಡಿದ್ದಾರೆ ಎಂದು‌ ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿತ್ತು‌‌. ಇದು ಆಡಳಿತಾರೂಢ ಹಾಗೂ ವಿರೋಧ ಪಕ್ಷಗಳ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು. ದರ್ಶನ್ ಗೌಡ ಸೇರಿದಂತೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಸಿಐಡಿ ದೂರು ನೀಡಿತ್ತು. ಕೆಲ ದಿನಗಳ ಬಳಿಕ ಸಿಐಡಿ ಪೊಲೀಸರು ಬಿಟ್ಟು ಕಳುಹಿಸಿದ್ದರು.

ಪಿಎಸ್ಐ ತಾತ್ಕಾಲಿಕ ನೇಮಕಾತಿ ಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕ ಕೋಟಾದಡಿ ಐದನೇ ಸ್ಥಾನ ಪಡೆದಿದ್ದ ದರ್ಶನ್ ಗೌಡನನ್ನು ಈ ಹಿಂದೆ ಸಿಐಡಿ ವಶಕ್ಕೆ ಪಡೆದುಕೊಂಡಿತ್ತು.ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪರೀಕ್ಷಾ ಕೇಂದ್ರವೊಂದರಲ್ಲಿ ಪರೀಕ್ಷೆ ಬರೆದಿದ್ದ. ಓಎಂಆರ್ ಶೀಟ್ ಖಾಲಿ ಬಿಟ್ಟಿದ್ದ. ನಂತರ ಓಎಂಆರ್ ಶೀಟ್ ಭರ್ತಿಯಾಗಿತ್ತು. ಒಂಎಆರ್ ಶೀಟ್‌ ಎಫ್ಎಸ್​​ಎಲ್ ಗೆ ಕಳುಹಿಸಿದಾಗ ತಿದ್ದಿರುವ ಸಂಗತಿ ಬೆಳಕಿಗೆ ಬಂದಿತ್ತು. ‌ಎಫ್ಎಸ್ಎಲ್‌ ವರದಿ ಆಧಾರದ ಮೇಲೆ ದರ್ಶನ್ ಗೌಡನನ್ನು ಬಂಧಿಸಿದ್ದಾರೆ.

ಪ್ರಕರಣದಲ್ಲಿ ಮತ್ತಿಬ್ಬರು ಸಹ‌ ಮೋಸದಿಂದ ಪರೀಕ್ಷೆ ಬರೆದಿದ್ದ ಆಪಾದನೆ ಹಿನ್ನೆಲೆ ಬಂಧಿಸಲಾಗಿದೆ. ಹೆಡ್‌ಕಾನ್​​​ಸ್ಟೇಬಲ್ ಹರೀಶ್, ಎಫ್ಐಡಿ ಹರ್ಷ, ಖಾಸಗಿ ವ್ಯಕ್ತಿ ಮನೋಜ್ ವಿರುದ್ಧ ಸಿಐಡಿ ಡಿವೈಎಸ್ಪಿ ಶಿವಕುಮಾರ್ ದೂರಿನ ಮೇರೆಗೆ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಪಿಎಸ್​​ಐ ಪರೀಕ್ಷೆಯಲ್ಲಿ ಅಭ್ಯರ್ಥಿಯಾಗಿದ್ದ ಹರೀಶ್ 50 ಲಕ್ಷಕ್ಕೆ ಡೀಲ್‌‌‌ ಮಾಡಿಕೊಂಡಿದ್ದ ಎನ್ನಲಾಗಿದ್ದು, ಮನೋಜ್ ಮುಖಾಂತರ ಸಿಐಡಿಯಲ್ಲಿ ಎಫ್ಐಡಿ ಯಾಗಿರುವ ಹರ್ಷ ಸಹಾಯದಿಂದ ಓಎಂಆರ್ ಶೀಟ್ ತಿದ್ದಿದ್ದ ಎನ್ನಲಾಗ್ತಿದೆ.ಸದ್ಯ ದರ್ಶನ್ ವಿರುದ್ಧ ಯಲಹಂಕ ಉಪನಗರ, ಕೋರಮಂಗಲ ಠಾಣೆಯಲ್ಲಿ ಮೋಹನ್ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಾಗಿವೆ‌.

ಇದನ್ನೂ ಓದಿ: ಮೊಬೈಲ್ ಕ್ಲಿನಿಕ್​ಗೆ ಸಿಎಂ ಚಾಲನೆ: ಬೇರೆ ಜಿಲ್ಲೆಗಳಿಗೂ ವಿಸ್ತರಿಸಲು ಚಿಂತನೆ ಎಂದ ಬೊಮ್ಮಾಯಿ

Last Updated : Jun 6, 2022, 4:44 PM IST

ABOUT THE AUTHOR

...view details