ಕರ್ನಾಟಕ

karnataka

ಗೌರಿ - ಕಲಬುರ್ಗಿ ಹತ್ಯೆಗೆೆ ಬೈಕ್‌ ಸಪ್ಲೈ ಮಾಡಿದ್ದು ಒಬ್ಬನೇ.. SIT ತನಿಖೆಯಲ್ಲಿ ಸತ್ಯಾಂಶ ಬಯಲು!

By

Published : Jun 7, 2019, 1:24 PM IST

Updated : Jun 7, 2019, 2:38 PM IST

ದೇಶದಲ್ಲಿ ನಡೆದ ನಾಲ್ಕು ವಿಚಾರವಾದಿಗಳ ಹತ್ಯೆಗೆ ಬೈಕ್ ಸಪ್ಲೈ ಮಾಡಿದ್ದು ಒಬ್ಬನೇ ಒಬ್ಬ. ಇಂತಹದ್ದೊಂದು ಅಂಶವನ್ನು ಎಸ್​ಐಟಿ ಹೊರಹಾಕಿದೆ.

ಸಂಗ್ರಹ ಚಿತ್ರ

ಬೆಂಗಳೂರು:ವಿಚಾರವಾದಿಗಳ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಫೋಟಕ ಮಾಹಿತಿಯೊಂದು ಇದೀಗ ಹೊರಬಿದ್ದಿದೆ. ದೇಶದ ನಾಲ್ಕು ಹೈಪ್ರೊಫೈಲ್​ ಕೇಸ್​ಗಳಿಗೆ ಬೈಕ್ ಸಪ್ಲೈ ಮಾಡಿದ್ದು ಒಬ್ಬನೇ ಅನ್ನೋ ಅಂಶ ಎಸ್​ಐಟಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ‌.

ಕಲಬುರ್ಗಿ ಹತ್ಯೆ ಸಂಬಂಧ ವಾಸುದೇವ್ ಎಂಬ ಆರೋಪಿಯನ್ನ ಎಸ್​ಐಟಿ ಬಂಧಿಸಿದ್ದಾರೆ. ಆರೋಪಿ ವಾಸುದೇವ್ ತನಿಖಾಧಿಕಾರಿಗಳ ಎದುರು ಪನ್ಸಾರೆ, ದಾಬೋಲ್ಕರ್, ಕಲಬುರ್ಗಿ ಹಾಗೂ ಗೌರಿ ಹತ್ಯೆ ಪ್ರಕರಣಗಳಿಗೆ ಬೈಕ್ ಸಪ್ಲೈ ಮಾಡಿರುವ ವಿಚಾರವನ್ನ ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಗೌರಿ‌ ಹಾಗೂ ಕಲಬುರ್ಗಿ ಹತ್ಯೆಯ ಪ್ರಮುಖ ಆರೋಪಿ ಅಮೂಲ್ ಕಾಳೆ ಸೂಚನೆಯಂತೆ ತಾನು ಬೈಕ್ ಸಪ್ಲೈ ಮಾಡಿದ್ದೆ ಎಂದು ಎಸ್​ಐಟಿ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಉನ್ನತ ಮೂಲಗಳು ತಿಳಿಸಿವೆ. ವಾಸುದೇವ್ ಭಗವಾನ್ ಸೂರ್ಯವಂಶಿ ಮಹಾರಾಷ್ಟ್ರ ಮೂಲದವನಾಗಿದ್ದು ಮಹಾರಾಷ್ಟ್ರದಲ್ಲೇ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸ್ತಿದ್ದ. ಸದ್ಯ ಕಲಬುರ್ಗಿ‌ ಕೇಸ್ ವಿಚಾರವಾಗಿ ಎಸ್​ಐಟಿ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ‌.

Intro:ವಿಚಾರವಾದಿಗಳ ಹತ್ಯೆಗೆ ಬೈಕ್ ಸಪ್ಲೈ ಮಾಡಿದ್ದು ಒಬ್ಬನೇ
ಎಸ್ ಐಟಿ ತನಿಖೆಯಲ್ಲಿ ಬಯಲು..

ಭವ್ಯ

ನಾಲ್ಕು ಜನ ಫೈಲ್ ಬಳಸಿ

ವಿಚಾರವಾದಿಗಳ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಫೋಟಕ ಮಾಹಿತಿಯೊಂದು ಇದೀಗ ಹೊರಬಿದ್ದಿದೆ.ದೇಶದ 4 ಹೈ ಪ್ರೊಫೈಲ್ ಕೇಸ್ ಗಳಿಗೆ ಬೈಕ್ ಸಪ್ಲೈ ಮಾಡಿದ್ದು ಒಬ್ಬನೇ ಅನ್ನೋ ಅಂಶ ಎಸ್ಐಟಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ‌.

ಕಲಬುರ್ಗಿ ಹತ್ಯೆಯಲ್ಲಿ ವಾಸುದೇವ್ ಆರೋಪಿಯನ್ನ ಎಸ್ ಐಟಿ ಬಂಧಿಸಿದ್ದು ಈ ವೇಳೆ ಆರೋಪಿ ವಾಸುದೇವ್ ತನಿಖಾಧಿಕಾರಿಗಳ ಎದುರು ಪನ್ಸಾರೆ,ದಾಬೋಲ್ಕರ್,ಕಲ್ಬುರ್ಗಿ ಹಾಗೂ ಗೌರಿ ಹತ್ಯೆ ಪ್ರಕರಣಗಳಿಗೆ ಬೈಕ್ ಸಪ್ಲೈ ಮಾಡಿರುವ ವಿಚಾರವನ್ನ ಬಾಯಿ ಬಿಟ್ಟಿದ್ದಾನೆ..

ಗೌರಿ‌ಹಾಗೂ ಕಲಬುರ್ಗಿ ಹತ್ಯೆಯ ಪ್ರಮುಖ ಆರೋಪಿ ಅಮೂಲ್ ಕಾಳೆ ಸೂಚನೆಯಂತೆ ತಾನು ಬೈಕ್ ಸಪ್ಲೈ ಮಾಡಿದ್ದೆ ಎಂದು ಎಸ್ ಐಟಿ ಅಧಿಕಾರಿಗಳ ಮುಂದೆ ತಪ್ಪನ್ನ ಒಪ್ಪಿಕೊಂಡಿದ್ದಾನೆ ಎಂದು ಉನ್ನತ ಮೂಲಗಳು ತಿಳಿಸಿವೆ
ಇನ್ನು ವಾಸುದೇವ್ ಭಗವಾನ್ ಸೂರ್ಯ ವಂಶಿ ಈತ ಮಹರಾಷ್ಟ್ರ ಮೂಲದವನಾಗಿದ್ದು ಈತ ಮಹಾರಾಷ್ಟ್ರ ದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸ್ತಿದ್ದ. ಸದ್ಯ ಕಲಬುರ್ಗಿ‌ ಕೇಸ್ ವಿಚಾರವಾಗಿ ಎಸ್ ಐಟಿ ವಶಕ್ಕೆ ಪಡೆದಿದ್ದಾರೆ‌
Body:KN_BNG_02_7_SIT INVESTIGASTION_BHAVYA_7204498Conclusion:KN_BNG_02_7_SIT INVESTIGASTION_BHAVYA_7204498
Last Updated : Jun 7, 2019, 2:38 PM IST

ABOUT THE AUTHOR

...view details