ಕರ್ನಾಟಕ

karnataka

ಕೆಸಿಆರ್ ಭೇಟಿ: ದೇವೇಗೌಡರ ನಿವಾಸದಲ್ಲಿ ಬಿರಿಯಾನಿ, ನಾಟಿ ಕೋಳಿ ಸಾರಿನ ಘಮಲು

By

Published : May 26, 2022, 4:30 PM IST

Updated : May 26, 2022, 4:35 PM IST

ಕೆಸಿಆರ್​ ಆಗಮನ ಹಿನ್ನೆಲೆಯಲ್ಲಿ ಮಾಂಸಹಾರದಲ್ಲಿ ಬಿರಿಯಾನಿ, ನಾಟಿ ಕೋಳಿ ಸಾರು, ಲಾಲಿ ಪಪ್, ಫಿಶ್ ಹಾಗೂ ಸಸ್ಯಹಾರದಲ್ಲಿ ಶ್ಯಾವಿಗೆ ಬಾತ್, ಪಾಯಿಸಾ, ಬಾತ್ ಸಿದ್ಧಪಡಿಸಲಾಗಿತ್ತು.

cm-kcr-had-special-lunch-in-hd-deve-gowda-house
ಗೌಡರ ನಿವಾಸದಲ್ಲಿ ಭೂರಿ ಭೋಜನ ಸವಿದ ಕೆಸಿಆರ್

ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್​​ ವರಿಷ್ಠ ಹೆಚ್.ಡಿ.ದೇವೇಗೌಡರ ನಿವಾಸಕ್ಕೆ ಭೇಟಿ ಕೊಟ್ಟಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಗೌಡರ ನಿವಾಸದಲ್ಲಿ ಭೂರಿ ಭೋಜನ ಸವಿದರು. ಮಾಂಸಾಹಾರ, ಸಸ್ಯಹಾರ ಎರಡನ್ನೂ ಮಾಡಿಸಲಾಗಿತ್ತು.

ಮಾಂಸಹಾರದಲ್ಲಿ ಬಿರಿಯಾನಿ, ನಾಟಿ ಕೋಳಿ ಸಾರು, ಲಾಲಿ ಪಪ್, ಫಿಶ್ ಮಾಡಿಸಲಾಗಿತ್ತು. ಸಸ್ಯಹಾರದಲ್ಲಿ ಶ್ಯಾವಿಗೆ ಬಾತ್, ಪಾಯಿಸಾ, ಬಾತ್ ಸಿದ್ಧಪಡಿಸಲಾಗಿತ್ತು. ಭೋಜನ ಸಮಯದಲ್ಲಿ ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ, ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮತ್ತಿತರರು ಇದ್ದರು.

ಇದೇ ಸಂದರ್ಭದಲ್ಲಿ ಪ್ರಸಕ್ತ ರಾಜಕಾರಣ, ರಾಷ್ಟ್ರಪತಿ ಚುನಾವಣೆ ಹಾಗೂ ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ, 2024ರ ಲೋಕಸಭೆ ಚುನಾವಣೆ ಬಗ್ಗೆಯೂ ನಾಯಕರು ಚರ್ಚೆ ನಡೆಸಿದರು.

ಇದನ್ನೂ ಓದಿ:ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ ಕೆಸಿಆರ್-ಹೆಚ್​ಡಿಡಿ ಭೇಟಿ

Last Updated : May 26, 2022, 4:35 PM IST

ABOUT THE AUTHOR

...view details