ಕರ್ನಾಟಕ

karnataka

ಸುಷ್ಮಾ ಸ್ವರಾಜ್ ಪುಣ್ಯತಿಥಿ: ಸಿಎಂ ಸೇರಿ ಬಿಜೆಪಿ ನಾಯಕರಿಂದ ಸ್ಮರಣೆ

By

Published : Aug 6, 2020, 1:00 PM IST

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಪಕ್ಷ ಹಾಗೂ ದೇಶಕ್ಕೆ ಸುಷ್ಮಾ ಸ್ವರಾಜ್ ನೀಡಿರುವ ಕೊಡುಗೆಯನ್ನು ಸ್ಮರಿಸಿದ್ದಾರೆ.

CM tweet
ಸುಷ್ಮಾ ಸ್ವರಾಜ್ ಪುಣ್ಯತಿಥಿ: ಸಿಎಂ ಸೇರಿ ಬಿಜೆಪಿ ನಾಯಕರಿಂದ ಸ್ಮರಣೆ

ಬೆಂಗಳೂರು:ಬಿಜೆಪಿ ನಾಯಕಿ ದಿ. ಸುಷ್ಮಾ ಸ್ವರಾಜ್ ಪುಣ್ಯತಿಥಿಯಾದ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಪಕ್ಷ ಹಾಗೂ ದೇಶಕ್ಕೆ ಸುಷ್ಮಾ ಸ್ವರಾಜ್ ನೀಡಿರುವ ಕೊಡುಗೆಯನ್ನು ಸ್ಮರಿಸಿದ್ದಾರೆ.

ಭಾರತೀಯ ನಾರಿ ಶಕ್ತಿಯ ಪ್ರತೀಕದಂತಿದ್ದ, ಹಿರಿಯ ನಾಯಕಿ, ಮಾಜಿ ವಿದೇಶಾಂಗ ಸಚಿವೆ ಶ್ರೀಮತಿ ಸುಷ್ಮಾ ಸ್ವರಾಜ್ ಅವರ ಪುಣ್ಯ ತಿಥಿಯಂದು ಅವರನ್ನು ಸ್ಮರಿಸೋಣ. ಸವಾಲುಗಳಿಗೆ ಎಂದೂ ಅಂಜದೆ, ರಾಜಕೀಯ ವಿರೋಧಿಗಳ ವಿರುದ್ಧ ಅವರು ತಮ್ಮ ಬಲವಾದ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು. ವಿದೇಶಾಂಗ ಸಚಿವೆಯಾಗಿ ಅವರ ಕಾರ್ಯಗಳು ಆದರ್ಶಪ್ರಾಯವಾದದ್ದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ವಿವಿಧ ಉನ್ನತ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಸಾರ್ವಜನಿಕ ಜೀವನದಲ್ಲಿ ತಮ್ಮದೇ ಛಾಪು ಮೂಡಿಸಿದ್ದ, ಮಾರ್ಗದರ್ಶಕರೂ ಆಗಿದ್ದ ಸುಷ್ಮಾ ಸ್ವರಾಜ್ ಅವರ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ ಅವರಿಗೆ ಹೃದಯ ಪೂರ್ವಕ ನಮನಗಳನ್ನು ಸಲ್ಲಿಸೋಣ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

ಇಂದು ನಾವು ಬಹಳ ಪ್ರೀತಿಯಿಂದ ಸುಷ್ಮಾ ಸ್ವರಾಜ್ ಅವರನ್ನು ನೆನಪಿಸಿಕೊಳ್ಳುತ್ತೇವೆ. ಅವರ ಕೊಡುಗೆಗಳು ಉತ್ಸಾಹ ಮತ್ತು ಸಮರ್ಪಣೆಯೊಂದಿಗೆ ಸೇವೆ ಸಲ್ಲಿಸಲು ನಮ್ಮೆಲ್ಲರಿಗೂ ಪ್ರೇರಣೆ ನೀಡುತ್ತಿವೆ ಎಂದು ಡಿಸಿಎಂ ಡಾ. ಅಶ್ವತ್ಥನಾರಾಯಣ್ ಟ್ವೀಟ್ ಮಾಡಿದ್ದಾರೆ.

ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರ ಪುಣ್ಯತಿಥಿಯ ಸ್ಮರಣೆಗಳು. ಪಕ್ಷದ ಹಿರಿಯ ನಾಯಕಿ, ವಿದೇಶಾಂಗ ಸಚಿವರಾಗಿ ದೇಶಕ್ಕೆ ಅಪಾರ ಕೊಡುಗೆ ನೀಡಿರುವ ದಿ. ಸುಷ್ಮಾ ಸ್ವರಾಜ್ ಅವರ ಪ್ರಥಮ ಪುಣ್ಯತಿಥಿಯಂದು ಅವರಿಗೆ ಅನಂತ ನಮನಗಳು. ಅವರ ದಕ್ಷ ಆಡಳಿತ ಹಾಗೂ ಪಕ್ಷಕ್ಕೆ ನೀಡಿರುವ ಸೇವೆ ನಮ್ಮೆಲ್ಲರಿಗೂ ಮಾದರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
ಬಿ.ವೈ ವಿಜಯೇಂದ್ರ

ದೇಶ ಕಂಡ ಅತ್ಯುತ್ತಮ ವಿದೇಶಾಂಗ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಅವರ ಪ್ರಥಮ ಪುಣ್ಯತಿಥಿಯಂದು, ನಮ್ಮೆಲ್ಲರ ಪ್ರೇರಣದಾಯಕ ಶಕ್ತಿ, ಭಾರತ ಮಾತೆಯ ಮಾನಸ ಪುತ್ರಿಗೆ ಗೌರವ ಪೂರ್ಣ ನಮನಗಳು ಎಂದು ಸಂಸದೆ ಶೋಭಾ ಕರಂದ್ಲಾಜೆ ಸ್ಮರಿಸಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ

ABOUT THE AUTHOR

...view details