ಬೆಂಗಳೂರು:ರಾಜ್ಯದಲ್ಲಿ ಅತಿವೃಷ್ಠಿಯಿಂದಾಗಿ ಈ ಬಾರಿ ಸುಮಾರು 792 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆಗೆ ತೀವ್ರ ಸ್ವರೂಪದ ಹಾನಿಯಾಗಿದೆ. 1.09 ಲಕ್ಷ ಹೆಕ್ಟೇರ್ ತೋಟಗಾರಿಕಾ ಬೆಳೆ, 1,06,25 ಹೆಕ್ಟೇರ್ ಕಾಫಿ, 244.45 ಹೆಕ್ಟೇರ್ ರೇಷ್ಮೆ ಬೆಳೆಗಳಿಗೆ ಹಾನಿಯಾಗಿದೆ. ಕಂದಾಯ ಇಲಾಖೆ ನೀಡಿರುವ ಒಟ್ಟು ನಷ್ಟದ ಅನುಸಾರ ಸುಮಾರು ₹1,150 ಕೋಟಿ ಮೌಲ್ಯದ ಬೆಳೆ ನೆಲಕಚ್ಚಿದೆ!
ಬೆಳೆಹಾನಿಗೆ ಖುಷ್ಕಿ ಭೂಮಿಯ ಪ್ರತಿ ಹಕ್ಟೇರಿಗೆ ₹6,800 ಜೊತೆಗೆ ಹೆಚ್ಚುವರಿ ₹10 ಸಾವಿರದಂತೆ ಒಟ್ಟು ₹16,800 ಹಾಗೂ ನೀರಾವರಿ ಪ್ರದೇಶಕ್ಕೆ ₹ 13,500 ಜೊತೆಗೆ ಹೆಚ್ಚುವರಿ ₹ 10 ಸಾವಿರದಂತೆ ₹ 23,500 ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇನ್ನು ಶಾಶ್ವತ ನೀರಾವರಿಯ ಯೋಜನೆಗೆ ಪ್ರತಿ ಹೆಕ್ಟೇರ್ಗೆ ₹ 18 ಸಾವಿರ ಜೊತೆಗೆ ಹೆಚ್ಚುವರಿಯಾಗಿ ₹ 10 ಸಾವಿರ ನೀಡಲು ನಿರ್ಧರಿಸಲಾಗಿದೆ.
ಈವರೆಗೆ 2,54,978 ಫಲಾನುಭವಿ ರೈತರಿಗೆ ಒಟ್ಟು ₹ 511.28 ಕೋಟಿ ಬೆಳೆ ನಷ್ಟ ಪರಿಹಾರ ಪಾವತಿ ಮಾಡಲಾಗಿದೆ.
ಜಿಲ್ಲಾವಾರು ನೀಡಿರುವ ಬೆಳೆ ಹಾನಿ ಪರಿಹಾರ:
ಬಾಗಲಕೋಟೆ
10,923 ಫಲಾನುಭವಿ ರೈತರು
₹ 27.58 ಕೋಟಿ ಪಾವತಿ
ಬೆಳಗಾವಿ
38,139 ಫಲಾನುಭವಿ ರೈತರು
₹ 63.54 ಕೋಟಿ ಪಾವತಿ
ಚಿಕ್ಕಮಗಳೂರು
10,377 ಫಲಾನುಭವಿ ರೈತರು
₹ 25.81 ಕೋಟಿ ಪಾವತಿ
ದ.ಕನ್ನಡ
761 ಫಲಾನುಭವಿ ರೈತರು
₹ 1.07 ಕೋಟಿ ಪಾವತಿ
ಧಾರವಾಡ
71,790 ಫಲಾನುಭವಿ ರೈತರು
₹162.33 ಕೋಟಿ ಪಾವತಿ