ಕರ್ನಾಟಕ

karnataka

ಇಂದಿನಿಂದ 9,11ನೇ ವಿದ್ಯಾರ್ಥಿಗಳಿಗೆ ಪೂರ್ಣಾವಧಿ ತರಗತಿ ಆರಂಭ: ಅರ್ಧದಷ್ಟು ವಿದ್ಯಾರ್ಥಿಗಳು ಹಾಜರ್​

By

Published : Feb 1, 2021, 5:33 PM IST

ಕೋವಿಡ್ ಭಯ ತಕ್ಕಮಟ್ಟಿಗೆ ಕಡಿಮೆ ಆಗುತ್ತಿದ್ದು, ದೈನಂದಿನ ಜೀವನಕ್ಕೆ ಮರಳುತ್ತಿದ್ದಾರೆ. ಈಗಾಗಲೇ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ಆರಂಭವಾದ ಹಿನ್ನೆಲೆ ಇದರ ಪರಿಣಾಮ ನೋಡಿಕೊಂಡು ಒಂಬತ್ತು ಮತ್ತು ಪ್ರಥಮ ಪಿಯು ತರಗತಿ ಶುರು ಮಾಡುವುದಾಗಿ ಇಲಾಖೆ ಹೇಳಿತ್ತು. ಇದೀಗ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ವಿದ್ಯಾರ್ಥಿಗಳು ಮತ್ತೆ ತಮ್ಮ ಶಾಲಾ - ಕಾಲೇಜಿಗೆ ಮರಳುತ್ತಿದ್ದಾರೆ.

Starting full-time class for students from today
ಇಂದಿನಿಂದ 9,11ನೇ ವಿದ್ಯಾರ್ಥಿಗಳಿಗೆ ಪೂರ್ಣಾವಧಿ ತರಗತಿ ಆರಂಭ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಕಾರಣಕ್ಕೆ ಪೂರ್ಣ ಪ್ರಮಾಣದ ಭೌತಿಕ ತರಗತಿಗಳನ್ನ ನಡೆಸಲು ಶಿಕ್ಷಣ ಇಲಾಖೆ ಹಿಂದೆಟ್ಟು ಹಾಕಿತ್ತು. ಆದರೆ, ಇದೀಗ ದಿನೇ ದಿನೇ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿರುವ ಕಾರಣ, ಒಂಬತ್ತನೇ ತರಗತಿ ಹಾಗೂ ಪ್ರಥಮ ಪಿಯು ತರಗತಿಗಳನ್ನು ಭೌತಿಕವಾಗಿ ಇಂದಿನಿಂದ ಶುರು ಮಾಡಲಾಗಿದೆ.

ಮೊದಲ ದಿನವಾದ ಇಂದು ನಗರದ ಶಾಲಾ - ಕಾಲೇಜಿಗೆ ವಿದ್ಯಾರ್ಥಿಗಳು ಆಗಮಿಸಿದ್ದಾರೆ.‌ ಕೋವಿಡ್ ಭ ತಕ್ಕಮಟ್ಟಿಗೆ ಕಡಿಮೆ ಆಗುತ್ತಿದ್ದು ದೈನಂದಿನ ಜೀವನಕ್ಕೆ ಮರಳುತ್ತಿದ್ದಾರೆ. ಈಗಾಗಲೇ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ಆರಂಭವಾದ ಹಿನ್ನೆಲೆ ಇದರ ಪರಿಣಾಮ ನೋಡಿಕೊಂಡು ಒಂಬತ್ತು ಮತ್ತು ಪ್ರಥಮ ಪಿಯು ತರಗತಿ ಶುರು ಮಾಡುವುದಾಗಿ ಇಲಾಖೆ ಹೇಳಿತ್ತು. ಇದೀಗ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ವಿದ್ಯಾರ್ಥಿಗಳು ಮತ್ತೆ ತಮ್ಮ ಶಾಲಾ - ಕಾಲೇಜಿಗೆ ಮರಳುತ್ತಿದ್ದಾರೆ.

ಇಂದಿನಿಂದ 9,11ನೇ ವಿದ್ಯಾರ್ಥಿಗಳಿಗೆ ಪೂರ್ಣಾವಧಿ ತರಗತಿ ಆರಂಭ

ಈ ಬಗ್ಗೆ ಮಾತಾನಾಡಿರುವ ಶೇಷಾದ್ರಿಪುರಂ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿರುವ ಪ್ರೊ. ಜಿ ಕೆ ಮಂಜುನಾಥ್, ಸರ್ಕಾರದ ಆದೇಶದಂತೆ ಇಂದು ಪ್ರಥಮ ಪಿಯುಸಿ ತರಗತಿಗಳನ್ನು ಆರಂಭ ಮಾಡಿದ್ದೇವೆ. ಪ್ರಥಮ ಪಿಯುಗೆ 840 ವಿದ್ಯಾರ್ಥಿಗಳು ದಾಖಲಾತಿ ಆಗಿದ್ದು, ಇದರಲ್ಲಿ ಮೊದಲ ದಿನ 566 ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details