ಕರ್ನಾಟಕ

karnataka

ಡಿಕೆಶಿ ಸಿಎಂ ಆಗಲು ಸಿದ್ದರಾಮಯ್ಯ ಸಹಕರಿಸಬೇಕು: ರಾಮನಗರ ಜಿಲ್ಲಾ ಕಾಂಗ್ರೆಸ್ ವಕ್ತಾರ ಮರಸಪ್ಪ ರವಿ

By

Published : May 14, 2023, 9:46 PM IST

ಡಿ ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗಲು ಅಡ್ಡಿ ಮಾಡುವ ಮನಸ್ಸು ಮಾಡಬೇಡಿ ಎಂದು ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಕಾಂಗ್ರೆಸ್ ವಕ್ತಾರ ಮರಸಪ್ಪ ರವಿ ವಿನಂತಿಸಿಕೊಂಡಿದ್ದಾರೆ.

ಜಿಲ್ಲಾ ಕಾಂಗ್ರೆಸ್ ವಕ್ತಾರ ಮರಸಪ್ಪ ರವಿ
ಜಿಲ್ಲಾ ಕಾಂಗ್ರೆಸ್ ವಕ್ತಾರ ಮರಸಪ್ಪ ರವಿ

ಜಿಲ್ಲಾ ಕಾಂಗ್ರೆಸ್ ವಕ್ತಾರ ಮರಸಪ್ಪ ರವಿ

ರಾಮನಗರ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ಸಿಗೆ ಕರೆ ತಂದು ಮುಖ್ಯಮಂತ್ರಿ ಮಾಡಿದ ಕೀರ್ತಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಮರಸಪ್ಪ ರವಿ ಹೇಳಿದ್ದಾರೆ. ಜಿಲ್ಲೆಯ ಕನಕಪುರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಸಂಕಷ್ಟದ ಸುಳಿಗೆ ಸಿಲುಕಿದಾಗಲು ಅವರನ್ನ ತಮ್ಮ ತಂತ್ರಗಾರಿಕೆ ಮೂಲಕ ಬಚಾವ್ ಮಾಡಿದ್ದು ಡಿಕೆಶಿ. ಅವರ ಸಂಪುಟದಲ್ಲಿ ಅತ್ಯುತ್ತಮ ಸಚಿವನಾಗಿ ಸರ್ಕಾರಕ್ಕೆ ಕೀರ್ತಿ ತಂದುಕೊಟ್ಟಿದ್ದು ಶಿವಕುಮಾರ್. ಇವರು ಮುಖ್ಯಮಂತ್ರಿಯಾಗಲು ಅಡ್ಡಿ ಆಗುವ ಮನಸ್ಸು ಮಾಡಬೇಡಿ ಎಂದು ಸಿದ್ದರಾಮಯ್ಯ ಅವರಲ್ಲಿ ಮರಸಪ್ಪ ಮನವಿ ಮಾಡಿದ್ದಾರೆ.

ಜನತಾ ದಳದಲ್ಲಿ ಮೂಲೆಗುಂಪಾಗುತ್ತಿದ್ದ ನಿಮ್ಮನ್ನ ಗುರುತಿಸಿ ತಮಗೆ ಸ್ಥಾನಮಾನ ಕೊಡಿಸಿದ ಹಿನ್ನೆಲೆ ಡಿಕೆಶಿಗೆ ಇದೆ. ಇಂತಹ ವ್ಯಕ್ತಿತ್ವದ ಮನುಷ್ಯನ ಉಜ್ವಲ ಆಕಾಂಕ್ಷೆಯನ್ನು ಈಡೇರಿಕೆ ಮಾಡುವುದು ತಮ್ಮ ಗುಣ ಕೂಡ ಹೌದೆಂದು ಭಾವಿಸಿದ್ದೇನೆ. ಸಕಾರಾತ್ಮಕವಾಗಿ ಇದಕ್ಕೆ ಸ್ಪಂದಿಸುವಂತೆ ನಾನು ಕೋರುತ್ತೇನೆ ಎಂದು ಮರಸಪ್ಪ ರವಿ ಅವರು ಸಿದ್ದರಾಮಯ್ಯಗೆ ಬೇಡಿಕೊಂಡಿದ್ದಾರೆ.

ಡಿಕೆಶಿ ಅವರು ಮುಖ್ಯಮಂತ್ರಿಯಾಗಲು ಸಹಕರಿಸಿ: ಪಕ್ಷ ಸಂಕಷ್ಟದಲ್ಲಿ ಸಿಲುಕಿದ್ದಾಗ ತಮ್ಮ ವೈಯಕ್ತಿಕ ಬದುಕನ್ನು ಲೆಕ್ಕಿಸದೆ ಪಕ್ಷವನ್ನ ಸದೃಢಗೊಳಿಸಿದ ಶಕ್ತಿ ಶಿವಕುಮಾರ್ ಅವರದ್ದು. ಅವರ ಆಸೆಯನ್ನು ತಾವು ಮಂಕಾಗಿಸಬೇಡಿ. ಅವರ ಸಾಮರ್ಥ್ಯವನ್ನು ತಾವು ಮನದಲ್ಲಿಡಿ. ತಮಗೆ ಸಹಾಯ ಮಾಡಿ, ಸಹಕಾರಿಯಾದ ಡಿಕೆಶಿ ಅವರನ್ನು ಮುಖ್ಯಮಂತ್ರಿಯಾಗಲು ಸಹಕರಿಸಿ ಎಂದು ಅವರು ಹೇಳಿದ್ದಾರೆ.

ಸಭೆ ಕರೆದ ಒಕ್ಕಲಿಗ ಮಠಾಧೀಶರು:ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕೇಂದ್ರೀಕೃತವಾಗಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ.

ಇದನ್ನೂ ಓದಿ:ನೂತನ ಕಾಂಗ್ರೆಸ್​ ಶಾಸಕರ ಟೆಂಪಲ್ ರನ್.. ಚುಂಚಶ್ರೀ ಆಶೀರ್ವಾದ ಪಡೆದ ಜನಪ್ರತಿನಿಧಿಗಳು

ಕೆಪಿಸಿಸಿ ಅಧ್ಯಕ್ಷನ ನಿವಾಸಕ್ಕೆ ಭೇಟಿ ನೀಡಿ ವಿವಿಧ ಒಕ್ಕಲಿಗ ಸಮುದಾಯದ ಮಠಾಧೀಶರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಸಭೆಯಲ್ಲಿ ಒತ್ತಾಯಿಸಲು ಚಿಂತನೆ ನಡೆಸಿದ್ದಾರೆ. ಈ ಮಧ್ಯ ಸಾಕಷ್ಟು ಚರ್ಚೆ ನಡೆಸಿರುವ ಸ್ವಾಮೀಜಿಗಳು ಒಕ್ಕಲಿಗ ಸಮುದಾಯದ ವಿವಿಧ ಸಂಘಟನೆಗಳು ಹಾಗೂ ನಾಯಕರನ್ನು ಸಹ ಈ ವಿಚಾರ ಬೆಂಬಲಿಸುವಂತೆ ಕೋರುವ ಸಾಧ್ಯತೆ ಇದೆ.

ಮತ್ತೊಂದು ಕಡೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಎಂದು ಒತ್ತಾಯಿಸಿ ಕೆಲ ನಾಯಕರುಗಳು ಪಕ್ಷದ ಹೈಕಮಾಂಡ್​ ಮೇಲೆ ಒತ್ತಡ ಹೇರುತ್ತಿದ್ದಾರೆ. ಈಗಾಗಲೇ ಶಿವಾನಂದ ವೃತ್ತ ಸಮೀಪದ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದ್ದಾರೆ. ಇಂದು ಸಿದ್ದರಾಮಯ್ಯ ಅವರನ್ನು ಭೇಟಿಯಾದ ಹರಪನಹಳ್ಳಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದ ಪಕ್ಷೇತರ ಅಭ್ಯರ್ಥಿ ಲತಾ ಮಲ್ಲಿಕಾರ್ಜುನ ಅವರು ಇಂದು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಕಾಂಗ್ರೆಸ್​ಗೆ ಬೆಂಬಲ ಘೋಷಿಸಿದರು.

ಇದನ್ನೂ ಓದಿ:ಕಾಂಗ್ರೆಸ್ ಪಕ್ಷಕ್ಕೆ ಮರಳಿದ ಪಕ್ಷೇತರ ಶಾಸಕಿ ಲತಾ ಮಲ್ಲಿಕಾರ್ಜುನ್; ಬೇಷರತ್ತಾಗಿ ಪಕ್ಷ ಸೇರ್ಪಡೆ

ABOUT THE AUTHOR

...view details