ಕರ್ನಾಟಕ

karnataka

ರಾಜಧಾನಿಯ ಗಂಗಮ್ಮ ದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಸಂಭ್ರಮ

By

Published : Oct 8, 2021, 9:26 PM IST

ಇನ್ನೂ 7 ದಿನ ನವರಾತ್ರಿ ಉತ್ಸವವನ್ನು ದೇವಿ ಸನ್ನಿಧಿಯಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತದೆ. ನಿತ್ಯ ಹೋಮ, ವಿಶೇಷ ಅಲಂಕಾರಗಳು, ಪಂಚಾಮೃತ ಅಭಿಷೇಕ ಮಾಡಲಾಗುತ್ತದೆ ಎಂದು ದೇವಸ್ಥಾನದ ಅರ್ಚಕ ರಘುವೀರ್ ಮಾಹಿತಿ ನೀಡಿದರು..

gangamma devi temple
ಗಂಗಮ್ಮ ದೇವಿ ದೇವಸ್ಥಾನ

ಬೆಂಗಳೂರು :ರಾಜಧಾನಿಯಲ್ಲಿ ಶರನ್ನವರಾತ್ರಿ ಸಂಭ್ರಮ ಕಳೆಗಟ್ಟಿದೆ. ಪ್ರಸಿದ್ಧ ಗಂಗಮ್ಮ ದೇವಿ ದೇವಸ್ಥಾನದಲ್ಲಿ ನಿತ್ಯ ವಿಶೇಷಾಲಂಕಾರ ಹೋಮ-ಹವನಗಳಿಂದ ದೇವಿಯನ್ನು ಆರಾಧಿಸಲಾಗುತ್ತಿದೆ.

ನಗರದ ಮಲ್ಲೇಶ್ವರದ ಗಂಗಮ್ಮ ದೇವಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಶುಕ್ರವಾರ ವಿಶೇಷ ಪೂಜೆ ನೆಡೆಯಿತು. ಕೋವಿಡ್ ಮಾರ್ಗಸೂಚಿಗಳನ್ನು ದಸರಾ ಹಬ್ಬದ ಪ್ರಯುಕ್ತ ಸಡೆಲಿಸಲಾಗಿರುವುದರಿದ ಅಪಾರ ಭಕ್ತ ಸಮೂಹವೇ ನೆರೆದಿತ್ತು.

ಗಂಗಮ್ಮ ದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಸಂಭ್ರಮ..

ಅ.7 ರಿಂದ 15ರವರೆಗೆ ಶರನ್ನವರಾತ್ರಿ ಉತ್ಸವ ನಗರದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನಿನ್ನೆ ಗಣಪತಿ ಅನುಗ್ರಹ ಹೋಮದ ಜೊತೆಗೆ ಅರಿಶಿಣ-ಕುಂಕುಮ ಅಲಂಕಾರ ಮಾಡಲಾಗಿತ್ತು. ಇಂದು ದೇವಿಗೆ ಹಣ್ಣಿನಿಂದ ಅಲಂಕರಿಸಿ ಹೋಮ ಕೈಗೊಳ್ಳಲಾಯಿತು ಎಂದು ದೇವಸ್ಥಾನದ ಕಾರ್ಯದರ್ಶಿ ಕೆ.ಚಂದ್ರಶೇಖರ್ ಈಟಿವಿ ಭಾರತಕ್ಕೆ ತಿಳಿಸಿದರು.

ಶರನ್ನವರಾತ್ರಿಯ ಪ್ರಯುಕ್ತ ಪ್ರತಿದಿನ ಬೆಳಗ್ಗೆ 11 ಗಂಟೆಗೆ ಮಹಾಮಂಗಳಾರತಿ ಹಾಗೂ ಸಂಜೆ 7ಕ್ಕೆ ವಿಶೇಷ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಸರ್ಕಾರದ ಆದೇಶದ ಅನ್ವಯ ಭಕ್ತರು ದೇವಸ್ಥಾನದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದಾರೆ ಎಂದರು.

ಗಂಗಮ್ಮ ದೇವಿ ದೇವಸ್ಥಾನ

ಇನ್ನೂ 7 ದಿನ ನವರಾತ್ರಿ ಉತ್ಸವವನ್ನು ದೇವಿ ಸನ್ನಿಧಿಯಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತದೆ. ನಿತ್ಯ ಹೋಮ, ವಿಶೇಷ ಅಲಂಕಾರಗಳು, ಪಂಚಾಮೃತ ಅಭಿಷೇಕ ಮಾಡಲಾಗುತ್ತದೆ ಎಂದು ದೇವಸ್ಥಾನದ ಅರ್ಚಕ ರಘುವೀರ್ ಮಾಹಿತಿ ನೀಡಿದರು.

ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ.. ಮೆಟ್ರೋ ಸಂಚಾರದಲ್ಲಿ ವ್ಯತ್ಯಯ.. 2 ದಿನಗಳ ಕಾಲ ನೇರಳೆ ಮಾರ್ಗ ಬಂದ್..

ABOUT THE AUTHOR

...view details