ಕರ್ನಾಟಕ

karnataka

ಕುಳ್ಳ ವೆಂಕಟೇಶ್ ಮರ್ಡರ್ ಮಾಡಿದ್ದು ನಾನೇ ಎಂದು ಪೊಲೀಸರಿಗೆ ಆವಾಜ್ ಹಾಕಿದ್ದವನ ಬಂಧನ

By

Published : Oct 3, 2021, 7:29 PM IST

ಸೆ.25ರಂದು ಅವಲಹಳ್ಳಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಹಳೆ ರೌಡಿಶೀಟರ್ ಕುಳ್ಳ ವೆಂಕಟೇಶ್‌ನನ್ನ ಹತ್ಯೆಗೈಯ್ಯಲಾಗಿತ್ತು. ಪ್ರಕರಣದ ತನಿಖೆ ಆರಂಭಿಸಿದ್ದ ಪೊಲೀಸರು ರೌಡಿಶೀಟರ್ ಅನಿಲ್ ಹಾಗೂ ಆತನ ಐವರು ಸಹಚರರನ್ನ ಬಂಧಿಸಿದ್ದರು. ಅನಿಲ್​​ಗೆ ಹಿಂದೊಮ್ಮೆ ಹೆಂಗಸರ ಕೈಯಿಂದ ಪೊರಕೆಯಿಂದ ಹೊಡೆಸಿದ್ದ ಎಂಬ ದ್ವೇಷದ ಕಾರಣಕ್ಕೆ ಕುಳ್ಳ ವೆಂಕಟೇಶ್ ಹತ್ಯೆ ಮಾಡಲಾಗಿದೆ ಎಂಬುದು ತನಿಖೆಯಲ್ಲಿ‌ ಬಯಲಾಗಿತ್ತು..

ರೌಡಿಶೀಟರ್​ ಮಂಜ ಬಂಧನ
ರೌಡಿಶೀಟರ್​ ಮಂಜ ಬಂಧನ

ಬೆಂಗಳೂರು :ಸುಮ್ನಿರಲಾರದೆ ಇರುವೆ ಬಿಟ್ಟುಕೊಳ್ಳೋದು ಅಂತಾರಲ್ಲ ಆ ಮಾತು ಇಲ್ಲೊಬ್ಬ ರೌಡಿಶೀಟರ್‌ಗೆ ಹೇಳಿ ಮಾಡಿಸಿದಂತಿದೆ. ನಡೆದಿದ್ದು ಭೀಕರ ಹತ್ಯೆ. ಪೊಲೀಸರು ಆರೋಪಿಗಳನ್ನೂ ಹೆಡೆಮುರಿ ಕಟ್ಟಿಯಾಗಿತ್ತು. ಆದ್ರೆ, ಮಧ್ಯದಲ್ಲಿ ತಾನೇ ಮರ್ಡರ್ ಹಿಂದಿನ ಮಾಸ್ಟರ್ ಎಂದು ಬಿಟ್ಟಿ ಬಿಲ್ಡಪ್ ಕೊಡೋಕೆ ಹೋಗಿ ಇಂಗು ತಿಂದ ಮಂಗನಂತಾಗಿದ್ದಾನೆ.

ಹಿರಿಯ ಅಧಿಕಾರಿಗಳು‌ ಅಂದರೆ ಭಯ ಹಾಗಿರಲಿ ಗೌರವವೇ ಇಲ್ಲ. ರಾಜಾರೋಷವಾಗಿ ನಾನೇ ಕೊಲೆ ಮಾಡಿದ್ದು ಎಂದು ಮಂಜ ಎಂಬಾತ ಹೇಳಿಕೊಂಡು ಓಡಾಡುತ್ತಿದ್ದಾನೆ. ಅವಲಹಳ್ಳಿಯಲ್ಲಿ ನಡೆದಿದ್ದ ಕುಳ್ಳ ವೆಂಕಟೇಶ್ ಹತ್ಯೆಯನ್ನ ನಾನೇ ಮಾಡಿದ್ದು, ತಾಕತ್ತಿದ್ದರೆ ಹಿಡಿಯಿರಿ ಎಂದು ಪೊಲೀಸರಿಗೆ ಆವಾಜ್ ಹಾಕಿದ್ದ ಈ ಮಂಜ, ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಬಾಯಿಗೆ ಬಂದಂತೆ ಮಾತನಾಡಿ ತಮಿಳುನಾಡಿನಲ್ಲಿ ಬಿಲ ಸೇರಿಕೊಂಡಿದ್ದವನನ್ನ ಅವಲಹಳ್ಳಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಸೆ.25ರಂದು ಅವಲಹಳ್ಳಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಹಳೆ ರೌಡಿಶೀಟರ್ ಕುಳ್ಳ ವೆಂಕಟೇಶ್‌ನನ್ನ ಹತ್ಯೆಗೈಯ್ಯಲಾಗಿತ್ತು. ಪ್ರಕರಣದ ತನಿಖೆ ಆರಂಭಿಸಿದ್ದ ಪೊಲೀಸರು ರೌಡಿಶೀಟರ್ ಅನಿಲ್ ಹಾಗೂ ಆತನ ಐವರು ಸಹಚರರನ್ನ ಬಂಧಿಸಿದ್ದರು. ಅನಿಲ್​​ಗೆ ಹಿಂದೊಮ್ಮೆ ಹೆಂಗಸರ ಕೈಯಿಂದ ಪೊರಕೆಯಿಂದ ಹೊಡೆಸಿದ್ದ ಎಂಬ ದ್ವೇಷದ ಕಾರಣಕ್ಕೆ ಕುಳ್ಳ ವೆಂಕಟೇಶ್ ಹತ್ಯೆ ಮಾಡಲಾಗಿದೆ ಎಂಬುದು ತನಿಖೆಯಲ್ಲಿ‌ ಬಯಲಾಗಿತ್ತು.

ಆದರೆ, ಈ ನಡುವೆ ಅನಿಲ್ ಬಂಧನದ ಬಗ್ಗೆ ಮಾತನಾಡಿದ್ದ ಮಂಜ ಪೊಲೀಸರ ಕಾರ್ಯವೈಖರಿ ಬಗ್ಗೆ ತುಚ್ಚವಾಗಿ ಮಾತನಾಡಿ, ನಾನೇ ಪ್ರಕರಣದ ಎ1 ಆರೋಪಿ ತಾಖತ್ತಿದ್ದರೆ ನನ್ನ ಬಂಧಿಸಿ, ನಾನು ಬೆಂಗಳೂರಿಗೆ ಮುಂದಿನ ಡಾನ್ ಎಂದೆಲ್ಲಾ ಬಡಬಡಿಸಿದ್ದ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಆಡಿಯೋ ವೈರಲ್ ಆಗುವವರೆಗೂ ಮಂಜನ ಬಗ್ಗೆ ಯೋಚನೆಯೇ ಮಾಡದ ಪೊಲೀಸರಿಗೆ ಮಂಜನ ಉದ್ಧಟತನದ ಹೇಳಿಕೆ ಕಣ್ಣು ಕೆಂಪಾಗಿಸಿತ್ತು. ತಕ್ಷಣ ಎಚ್ಚೆತ್ತ ಅವಲಹಳ್ಳಿ ಪೊಲೀಸರು ಆಡಿಯೋ ಮೂಲ ಹುಡುಕಿ ಹೊರಟಾಗ ತಮಿಳುನಾಡಿನಲ್ಲಿದ್ದ ಮಂಜ ಲಾಕ್ ಆಗಿದ್ದಾನೆ. ಸುಮ್ಮನೆ ಇರಲಾರದೇ ಫಿಲ್ಮ ಸ್ಟೈಲ್‌ನ​​ಲಿ ಆವಾಜ್ ಹಾಕಲು ಹೋದ ಮಂಜನ ಪರಿಸ್ಥಿತಿ ಇಂಗು ತಿಂದ ಮಂಗನಂತಾಗಿದೆ.

ABOUT THE AUTHOR

...view details