ಕರ್ನಾಟಕ

karnataka

ಮೋದಿ ಹತ್ಯೆಯಾಗಬೇಕು ಎಂದ ರಾಜಾ ಪಟೇರಿಯಾ ಬಂಧಿಸಿ: ರವಿಕುಮಾರ್ ಆಗ್ರಹ

By

Published : Dec 12, 2022, 7:35 PM IST

ಪಂಚಮಸಾಲಿ ಹೋರಾಟದಲ್ಲಿ ಮೂರು ಪೀಠಗಳ ಸ್ವಾಮಿಜಿಗಳು ಪರಸ್ಪರ ಹೇಳಿಕೆ ನೀಡದಂತೆ ಸಚಿವ ಮುನೇನಕೊಪ್ಪ ಇದೇ ವೇಳೆ ಮನವಿ ಮಾಡಿದ್ದಾರೆ.

ravikumar-statement-against-raja-pateria
ಮೋದಿ ಹತ್ಯೆಯಾಗಬೇಕು ಎಂದ ರಾಜಾ ಪಟೇರಿಯಾ ಬಂಧಿಸಿ:ರವಿಕುಮಾರ್ ಆಗ್ರಹ

ಬೆಂಗಳೂರು: ಸಂವಿಧಾನ ಉಳಿಬೇಕು ಎಂದರೆ ಪ್ರಧಾನಿ ನರೇಂದ್ರ ಮೋದಿ ಹತ್ಯೆ ಆಗಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಮಧ್ಯಪ್ರದೇಶದ ಕಾಂಗ್ರೆಸ್ ಮಾಜಿ ಸಚಿವ ರಾಜಾ ಪಟೇರಿಯಾ ಅವರನ್ನು ಕೂಡಲೇ ಬಂಧಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಆಗ್ರಹಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ರೀತಿಯ ಹೇಳಿಕೆ ನೀಡಿರುವುದು ಸರಿಯಲ್ಲ. ಇಂತಹ ಹೇಳಿಕೆ ನೀಡುವವರು ದೇಶದ್ರೋಹಿಗಳು. ಹಾಗಾಗಿ ಈ ರೀತಿ ಹೇಳಿಕೆ ನೀಡಿರುವ ರಾಜಾ ಪಟೇರಿಯಾರನ್ನು ಕೂಡಲೇ ಬಂಧಿಸಬೇಕು ಎಂದರು.

ರವಿಕುಮಾರ್ ಹೇಳಿಕೆಯನ್ನು ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಸಮರ್ಥಿಸಿಕೊಂಡರು. ಮೋದಿ ಅವರು ವಿಶ್ವನಾಯಕರಾಗಿದ್ದಾರೆ, ಇಡೀ ದೇಶ ಒಪ್ಪಿದ ಜನನಾಯಕ. ಅಂಥವರ ಬಗ್ಗೆ ಈ ರೀತಿ ಹೇಳಿಕೆ ಕೊಟ್ಟಿದ್ದು ಸರಿಯಲ್ಲ ಇದನ್ನು ನಾವು ಖಂಡಿಸುತ್ತೇವೆ ಎಂದರು.

ಮೀಸಲಾತಿ ವಿಚಾರದಲ್ಲಿ ಶ್ರೀಗಳ ನಡುವೆ ಹೇಳಿಕೆ ಬೇಡ: ಪಂಚಮಸಾಲಿ ಹೋರಾಟದಲ್ಲಿ ಮೂರು ಪೀಠಗಳ ಸ್ವಾಮೀಜಿಗಳು ಪರಸ್ಪರ ಹೇಳಿಕೆ ನೀಡದಂತೆ ಸಚಿವ ಮುನೇನಕೊಪ್ಪ ಮನವಿ ಮಾಡಿದ್ದಾರೆ. ಪಂಚಮಸಾಲಿಗೆ 2ಎ ಮೀಸಲಾತಿ ನೀಡುವ ವಿಚಾರದ ಹೋರಾಟ ಬಹಳ ವರ್ಷದಿಂದ ನಡೆಯುತ್ತಿದೆ. ನಾನು ಕೂಡ ಆ ವ್ಯವಸ್ಥೆಯಲ್ಲಿದ್ದೇನೆ. ಕೂಡಲ ಸಂಗಮ ಶ್ರೀ, ವಚನಾನಂದ ಶ್ರೀ ಇಬ್ಬರೂ ಹೋರಾಟ ಮಾಡುತ್ತಿದ್ದಾರೆ. ಹಾಗಾಗಿ ಯಾರೂ ಸ್ವಾಮೀಜಿಗಳ ಬಗ್ಗೆ ಹೇಳಿಕೆ ಕೊಡಬಾರದು. ಅದೇ ರೀತಿ ಸ್ವಾಮೀಜಿಗಳು ಪರಸ್ಪರರ ವಿರುದ್ಧ ಹೇಳಿಕೆ ನೀಡಬಾರದು. ಈ ಸಮಸ್ಯೆಯನ್ನು ಸರ್ಕಾರ ಬಗೆಹರಿಸುತ್ತದೆ ಎಂದರು.

ಇದನ್ನೂ ಓದಿ:ಪ್ರಧಾನಿ ಮೋದಿ ವಿರುದ್ಧ ಮಧ್ಯಪ್ರದೇಶ ಕಾಂಗ್ರೆಸ್‌ ನಾಯಕನ ವಿವಾದಾತ್ಮಕ ಹೇಳಿಕೆ!

ABOUT THE AUTHOR

...view details