ಕರ್ನಾಟಕ

karnataka

ಗುಜರಾತ್ ಗೆಲುವಿಗಾಗಿ ಪಂಚಾಯಿತಿ ಮಟ್ಟಕ್ಕಿಳಿದು ಮೋದಿ ಪ್ರಚಾರ: ಮುನಿಯಪ್ಪ ಲೇವಡಿ

By

Published : Dec 8, 2022, 6:13 PM IST

Updated : Dec 8, 2022, 7:33 PM IST

ಪ್ರಧಾನಿ ಮೋದಿ ಇಷ್ಟೊಂದು ದೊಡ್ಡ ದೇಶವನ್ನು ಬಿಟ್ಟು ಜಿಲ್ಲಾ ಮಟ್ಟದಲ್ಲಿ ಪ್ರಚಾರ ಮಾಡಿದರು. ಕಾಂಗ್ರೆಸ್‌ಗೆ ಗುಜರಾತ್‌ನಲ್ಲಿ ಅನುಕೂಲ ಪರಿಸ್ಥಿತಿ ಇರಲಿಲ್ಲ.- ಕಾಂಗ್ರೆಸ್ ಮುಖಂಡ ಕೆ ಎಚ್ ಮುನಿಯಪ್ಪ

Former Union Minister KH Muniyappa
ಕೇಂದ್ರದ ಮಾಜಿ ಸಚಿವ ಕೆ ಎಚ್ ಮುನಿಯಪ್ಪ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಗೆಲುವಿಗಾಗಿ ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಪ್ರಚಾರ ಮಾಡುವ ಮಟ್ಟಕ್ಕಿಳಿದಿದ್ದರು ಎಂದು ಕೇಂದ್ರದ ಮಾಜಿ ಸಚಿವ ಕೆ ಎಚ್ ಮುನಿಯಪ್ಪ ಲೇವಡಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗುಜರಾತ್ ಗೆಲುವಿಗಾಗಿ ಕಾಂಗ್ರೆಸ್ ಪ್ರಾಮಾಣಿಕ ಪ್ರಯತ್ನ ನಡೆಸಿತು. ಪಕ್ಷ ಎಲ್ಲ ಕೆಲಸವನ್ನೂ ಒಗ್ಗಟ್ಟಾಗಿ ಮಾಡಿತ್ತು. ಆದರೆ ಬಿಜೆಪಿಯವರು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ಪ್ರಧಾನಿ ಮೋದಿ ಇಷ್ಟೊಂದು ದೊಡ್ಡ ದೇಶವನ್ನು ಬಿಟ್ಟು ಜಿಲ್ಲಾ ಮಟ್ಟದಲ್ಲಿ ಪ್ರಚಾರ ಮಾಡಿದರು ಎಂದರು.

ಕೆ ಎಚ್ ಮುನಿಯಪ್ಪ

'ಹಣದ ಹೊಳೆ ಹರಿಸಿದ ಬಿಜೆಪಿ': ಅವರು ಹಣದ ಹೊಳೆ ಹರಿಸಿದರು. ಹೀಗಾಗಿ ನಮಗೆ ಗೆಲುವು ಕಷ್ಟವಾಯಿತು. ರಾಜಕಾರಣದಲ್ಲಿ ಕೋಮು ಗಲಭೆ ಮಾಡಿಸುವುದು, ಧರ್ಮದ ಆಧಾರದಲ್ಲಿ ಸಮಾಜ ಒಡೆಯುವುದನ್ನು ಬಿಜೆಪಿ ಮಾಡ್ತಿದೆ. ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ನಮ್ಮ ಸರ್ಕಾರ ಇದ್ದಾಗ ಅವರು ಇದನ್ನೆಲ್ಲಾ ಮಾಡಿದ್ದರು. ಪ್ರಜಾಪ್ರಭುತ್ವದ ಕಗ್ಗೊಲೆ ಇದು ಎಂದು ಟೀಕಿಸಿದರು. ಇದೇ ವೇಳೆ, ಗುಜರಾತ್ ಫಲಿತಾಂಶ ಕರ್ನಾಟಕದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ:ಸತತ ಏಳು ಬಾರಿ ಗೆದ್ದ ಎಡರಂಗದ ದಾಖಲೆ ಸರಿಗಟ್ಟಿದ ಬಿಜೆಪಿ!

Last Updated :Dec 8, 2022, 7:33 PM IST

ABOUT THE AUTHOR

...view details