ಕರ್ನಾಟಕ

karnataka

ಬೆಂಗಳೂರು ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 10 ಹೊಸ ಠಾಣೆಗಳ ರಚನೆಗೆ ಸಿದ್ಧತೆ

By

Published : Oct 16, 2022, 3:59 PM IST

ಬೆಂಗಳೂರು ನಗರದಲ್ಲಿ ಸದ್ಯ 114 ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣೆ, 44 ಸಂಚಾರಿ, 2 ಮಹಿಳಾ ಠಾಣೆ ಹಾಗೂ 9 ಸೈಬರ್ ಠಾಣೆಗಳಿವೆ. ಈ ಪಟ್ಟಿಗೆ 10-12 ಠಾಣೆಗಳನ್ನು ಸೇರಿಸಲು ಗೃಹ ಇಲಾಖೆ ಮುಂದಾಗಿದೆ.

ಬೆಂಗಳೂರು ನಗರ ಪೊಲೀಸ್​ ಆಯುಕ್ತ ಪ್ರತಾಪ್ ರೆಡ್ಡಿ
ಬೆಂಗಳೂರು ನಗರ ಪೊಲೀಸ್​ ಆಯುಕ್ತ ಪ್ರತಾಪ್ ರೆಡ್ಡಿ

ಬೆಂಗಳೂರು:ಸಿಲಿಕಾನ್ ಸಿಟಿ ಗಾರ್ಡನ್ ಸಿಟಿ ದಿನೇ ದಿನೆ ವೇಗವಾಗಿ ಬೆಳೆಯುತ್ತಿದೆ.‌ ಸಿಟಿ ಬೆಳೆದಂತೆ ಜನಸಂಖ್ಯೆ ಹೆಚ್ಚಾಗ್ತಿದ್ದು, ಜನಸಂಖ್ಯೆ ಹೆಚ್ಚಾದಂತೆ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆ ಅಪರಾಧ ಕೃತ್ಯ ಹಾಗೂ ಕಾನೂನು ಸುವ್ಯವಸ್ಥೆ ತಡೆಗಟ್ಟಲು ಗೃಹ ಇಲಾಖೆ ಮುಂದಾಗಿದೆ.

ನಗರದಲ್ಲಿ ಸದ್ಯ 114 ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣೆ, 44 ಸಂಚಾರಿ, 2 ಮಹಿಳಾ ಠಾಣೆ ಹಾಗೂ 9 ಸೈಬರ್ ಠಾಣೆಗಳಿವೆ. ಈ ಪಟ್ಟಿಗೆ 10-12 ಠಾಣೆಗಳನ್ನು ಸೇರಿಸಲು ಗೃಹ ಇಲಾಖೆ ಮುಂದಾಗಿದೆ. 4-5 ಸಂಚಾರ ಠಾಣೆ ಹಾಗೂ 5-6 ಕಾನೂನು ಸುವ್ಯವಸ್ಥೆ ಠಾಣೆಗಳು ಈ ಪಟ್ಟಿಯಲ್ಲಿದ್ದು, ಬೆಂಗಳೂರ ಗಡಿಭಾಗದ ಠಾಣೆಗಳನ್ನ ಒಡೆದು ಮತ್ತಷ್ಟು ಠಾಣೆ ತೆರೆಯಲು ಇಲಾಖೆ ಮುಂದಾಗಿದೆ.

ಸದ್ಯ ಉತ್ತರ ವಿಭಾಗ ಸೋಲದೇವನಹಳ್ಳಿ, ಬಾಲಗುಂಟೆ, ಪೀಣ್ಯ ಭಾಗದಲ್ಲಿ ಒಂದು ಠಾಣೆ, ಪೂರ್ವ ವಿಭಾಗದ ಬ್ಯಾಡರಹಳ್ಳಿ ಠಾಣೆಯ ವ್ಯಾಪ್ತಿಯಲ್ಲಿ ಅಂದ್ರಹಳ್ಲಿ ಒಂದು ಪೊಲೀಸ್ ಠಾಣೆ, ಕೆಂಗೇರಿ ಜ್ಞಾನಭಾರತಿ ವ್ಯಾಪ್ತಿಯಲ್ಲಿ ಒಂದು ಠಾಣೆ, ದಕ್ಷಿಣ ವಿಭಾಗದ ತಲಘಟ್ಟಪುರ, ಸುಬ್ರಮಣ್ಯ ಪುರ ವ್ಯಾಪ್ತಿಯ ಉತ್ತರಹಳ್ಳಿಯಲ್ಲಿ ಒಂದು ಠಾಣೆ, ಪೂರ್ವ ವಿಭಾಗದ ರಾಮಮೂರ್ತಿ ನಗರ, ವ್ಯಾಪ್ತಿಯ ಕಲ್ಕೆರೆಯಲ್ಲಿ ಒಂದು ಠಾಣೆ ಹಾಗೂ ವೈಟ್ ಫಿಲ್ಡ್ ವಿಭಾಗದ ವರ್ತೂರು, ಮಾರತ್ ಹಳ್ಳಿ ವಿಭಾಗದಲ್ಲಿ ಹೊಸದಾಗಿ ಠಾಣೆ ತೆರೆಯಲು ಇಲಾಖೆಗೆ ಈಗಾಗಲೇ ಪ್ರಸಾವನೆ ಕೂಡ ಹೋಗಿದೆ.

ಇದರ ಜೊತೆಗೆ ಬ್ಯಾಡರಹಳ್ಳಿಯಲ್ಲಿ ಸಂಚಾರ ಪೊಲೀಸ್ ಠಾಣೆ ಹಾಗೂ ವರ್ತೂರು, ಬೆಳ್ಳಂದೂರು ಭಾಗದಲ್ಲಿ ಸಂಚಾರ ಪೊಲೀಸ್ ಠಾಣೆ ತೆರಯಲು ತಯಾರಿ ನಡೆಸಲಾಗಿದೆ. ಇನ್ನು ಗಡಿಭಾಗದ ಪೊಲೀಸ್ ಠಾಣೆಗಳಲ್ಲಿ ವರ್ಷಕ್ಕೆ 800ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗ್ತಿದ್ದು, ಅಧಿಕಾರಿ ಸಿಬ್ಬಂದಿ ಮೇಲೆ ಸಾಕಷ್ಟು ಒತ್ತಡ ಬೀಳುತ್ತಿದೆ.‌ ಜೊತೆಗೆ ತನಿಖೆ ಕೂಡ ಸೂಕ್ತ ರೀತಿಯಲ್ಲಿ ಆಗ್ತಿಲ್ಲ ಎಂಬ ಆರೋಪ‌ ಕೂಡ ಕೇಳಿ ಬರ್ತಿದ್ದು, ಜನಸಂಖ್ಯೆ ಆಧಾರದ ಮೇಲೆ ಠಾಣೆ ರಚಿಸಲು ಇಲಾಖೆ ಮುಂದಾಗಿದ್ದು, ಹೊಸವರ್ಷದ ಆರಂಭದಲ್ಲಿ ಹೊಸ ಠಾಣೆಗಳು ತಲೆಎತ್ತಲಿವೆ.

ಓದಿ:ಶಿಸ್ತು ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸುವ ಹಕ್ಕಿಲ್ಲ: ಗೃಹ ಇಲಾಖೆ ನಡೆಗೆ ವಿರೋಧ

ABOUT THE AUTHOR

...view details