ಕರ್ನಾಟಕ

karnataka

ಫೋನ್​ ಕದ್ದಾಲಿಕೆ ದೂರು ವಾಪಸ್ ಪಡೆಯಲ್ಲ ಎಂದರಾ ಅರವಿಂದ ಬೆಲ್ಲದ?

By

Published : Jun 23, 2021, 7:17 PM IST

ಟೆಲಿಫೋನ್ ಕದ್ದಾಲಿಕೆ ಪ್ರಕರಣದ ಕುರಿತು ನಡೆಯುತ್ತಿರುವ ತನಿಖೆಯಿಂದ ಹಿಂದೆ ಸರಿಯದಿರಲು ಶಾಸಕ ಅರವಿಂದ ಬೆಲ್ಲದ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಆಪ್ತ ವಲಯದಲ್ಲಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅರವಿಂದ್​ ಬೆಲ್ಲದ್​
ಅರವಿಂದ್​ ಬೆಲ್ಲದ್​

ಬೆಂಗಳೂರು: ದೂರವಾಣಿ ಕದ್ದಾಲಿಕೆ ಆರೋಪ ಸಂಬಂಧ ದೂರು ವಾಪಸ್ ಪಡೆಯುತ್ತೇನೆ ಎನ್ನುವುದು ಸತ್ಯಕ್ಕೆ ದೂರವಾಗಿದ್ದು, ದೂರು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಅರವಿಂದ ಬೆಲ್ಲದ ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಟೆಲಿಫೋನ್ ಕದ್ದಾಲಿಕೆ ಪ್ರಕರಣದ ಕುರಿತು ನಡೆಯುತ್ತಿರುವ ತನಿಖೆಯಿಂದ ಹಿಂದೆ ಸರಿಯದಿರಲು ಶಾಸಕ ಅರವಿಂದ ಬೆಲ್ಲದ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಟೆಲಿಫೋನ್ ಟ್ಯಾಪ್ ಆಗಿರುವುದರ ಬಗ್ಗೆ ಗೃಹ ಇಲಾಖೆಗೆ ಸಲ್ಲಿಸಿದ್ದ ದೂರಿನನ್ವಯ ತನಿಖೆ ನಡೆಯುತ್ತಿದ್ದು, ಸಂಪೂರ್ಣ ಸಹಕಾರ ನೀಡುತ್ತಿದ್ದೇನೆ. ಆದರೆ, ಕೆಲವು ಮಾಧ್ಯಮಗಳಲ್ಲಿ ನಾನು ದೂರು ಹಿಂಪಡೆಯುತ್ತಿದ್ದೇನೆ ಎಂಬ ಸುದ್ದಿಗಳು ಪ್ರಕಟವಾಗುತ್ತಿರುವುದನ್ನು ಗಮನಿಸಿದ್ದೇನೆ. ಅದು ಸತ್ಯಕ್ಕೆ ದೂರವಾದಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಪೂರ್ಣ ತನಿಖೆಯಾಗಿ ಸತ್ಯ ಹೊರಬರಬೇಕಿದೆ. ಹೀಗಾಗಿ ದೂರು ವಾಪಸ್ ಪಡೆಯುವ ಪ್ರಶ್ನೆ ಇಲ್ಲ ಎಂದು ಬೆಲ್ಲದ ಆಪ್ತರ ಬಳಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ:ಅರವಿಂದ್ ಬೆಲ್ಲದ್​​ಗೆ ಜೈಲಿನಿಂದ ಕರೆ ಆರೋಪ: ತನಿಖೆ‌ ಚುರುಕು!

ABOUT THE AUTHOR

...view details