ಕರ್ನಾಟಕ

karnataka

ಭಾರತದಲ್ಲಿ ಪಿಎಫ್​ಐ ನಿಷೇಧ: ಪ್ರತಿಭಟನಾಕಾರರಿಗೆ ಎಚ್ಚರಿಕೆ ರವಾನಿಸಿದ ಡಿಜಿ ಪ್ರವೀಣ್​ ಸೂದ್​

By

Published : Sep 28, 2022, 12:34 PM IST

Updated : Sep 28, 2022, 1:56 PM IST

ಕೇಂದ್ರ ಸರ್ಕಾರ ಪಿಎಫ್ಐ ಹಾಗೂ ಅಂಗಸಂಸ್ಥೆಗಳನ್ನು ಬ್ಯಾನ್ ಮಾಡಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಪೊಲೀಸ್​ ಮಹಾ ನಿರ್ದೇಶಕ ಪ್ರವೀಣ್​ ಸೂದ್​ ಹೇಳಿದ್ದಾರೆ.

PFI ban in India  Praveen Sood sent a warning message to protestors  Popular front of India banned news  mha bans pfi  pfi ban news  pfi ban in india  pfi ban uapa act  what is uapa act  ಭಾರತದಲ್ಲಿ ಪಿಎಫ್​ಐ ನಿಷೇಧ  ಪ್ರತಿಭಟನಾಕಾರರಿಗೆ ಎಚ್ಚರಿಕೆ ಸಂದೇಶ ರವಾನಿಸಿದ ಡಿಜಿ  ಕೇಂದ್ರ ಸರ್ಕಾರ ಪಿಎಫ್ಐ ಹಾಗೂ ಅಂಗಸಂಸ್ಥೆಗಳನ್ನು ಬ್ಯಾನ್  ಪೊಲೀಸ್​ ಮಹಾ ನಿರ್ದೇಶಕರಾದ ಪ್ರವೀಣ್​ ಸೂದ್  ನಿಷೇಧ ವಿಚಾರ ಕುರಿತು ಡಿಜಿ ಪ್ರವೀಣ್ ಸೂದ್ ಪ್ರತಿಕ್ರಿಯಿ  ಪಿಎಫ್ಐ ಸಂಘಟನೆಯನ್ನು UAPA ಕಾಯ್ದೆ ಅಡಿ ಬ್ಯಾನ್  ಬ್ಯಾನ್ ಆಗಿರುವ ಆರ್ಗನೈಜೇಷನ್ ವಿರುದ್ದ ಕ್ರಮ
ಪ್ರತಿಭಟನಾಕಾರರಿಗೆ ಎಚ್ಚರಿಕೆ ಸಂದೇಶ ರವಾನಿಸಿದ ಡಿಜಿ ಪ್ರವೀಣ್​ ಸೂದ್​

ಬೆಂಗಳೂರು: ಪಿಎಫ್ಐ ನಿಷೇಧ ವಿಚಾರ ಕುರಿತು ಡಿಜಿ ಪ್ರವೀಣ್ ಸೂದ್ ಪ್ರತಿಕ್ರಿಯಿಸಿದ್ದಾರೆ. ಸೆ.22ರಂದು ಎನ್ಐಎ ನಮ್ಮ ರಾಜ್ಯಕ್ಕೆ ಬಂದು ದಾಳಿ‌ ಮಾಡಿತ್ತು. ಖಚಿತ ಮಾಹಿತಿ ಮೇರೆಗೆ ಮುನ್ನೆಚ್ಚರಿಕೆ ಕ್ರಮವಾಗಿ 101 ಪಿಎಫ್​ಐ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದೇವೆ. ಎನ್​ಐಎ ಹಾಗೂ ರಾಜ್ಯ ಪೊಲೀಸರಿಂದ 15 ಮಂದಿಯನ್ನ ಅರೆಸ್ಟ್ ಮಾಡಿದ್ದೇವೆ. ಬಂಧಿತರ ವಿಚಾರಣೆ ವೇಳೆ ಕೆಲ ವಸ್ತುಗಳು ಸಿಕ್ಕಿವೆ ಎಂದು ಹೇಳಿದರು.

ನಿನ್ನೆ ರಾತ್ರಿ ಕೇಂದ್ರ ಸರ್ಕಾರ ಪಿಎಫ್ಐ ಸಂಘಟನೆಯನ್ನು UAPA ಕಾಯ್ದೆ ಅಡಿ ಬ್ಯಾನ್ ಮಾಡಿದೆ. ವಶಕ್ಕೆ ಪಡೆದುಕೊಂಡು ಆರೋಪಿಗಳನ್ನು ತಹಸೀಲ್ದಾರ್ ಮುಂದೆ ಹಾಜರು ಪಡಿಸಿದ್ದೇವೆ. ಈಗ ಪಿಎಫ್ಐ ಕೇಂದ್ರ ಸರ್ಕಾರದಿಂದ ಬ್ಯಾನ್ ಆಗಿದೆ. ಡಿಸ್ಟ್ರಿಕ್ ಮ್ಯಾಜಿಸ್ಟ್ರೇಟ್ ಕಮೀಷನರ್ ವ್ಯಾಪ್ತಿಯಲ್ಲಿ ಆರ್ಗನೈಜೇಷನ್ ಬ್ಯಾನ್ ಬಗ್ಗೆ ಕ್ರಮ ಆಗುತ್ತೆ ಎಂದು ಹೇಳಿದರು.

ಪಿಎಫ್​ಐ ಬ್ಯಾನ್ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಪಿಎಫ್​ಐ ಸೇರಿ ಬ್ಯಾನ್ ಆಗಿರುವ ಆರ್ಗನೈಜೇಷನ್ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಬ್ಯಾನ್ ಆಗಿರುವ ಆರ್ಗನೈಜೇಷನ್ ಪರವಾಗಿ ಯಾರಾದ್ರು ಪ್ರತಿಭಟನೆ ಮಾಡಿದ್ರೆ ದುಷ್ಪರಿಣಾಮ ಎದುರಿಸಬೇಕಾಗುತ್ತೆ. ಸದ್ಯ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಪಿಎಫ್​ಐ ಬ್ಯಾನ್ ಆಗಿದ್ದರಿಂದ ಯಾರಾದ್ರು ಪ್ರತಿಭಟನೆ ಮಾಡಿದ್ರೆ ಅವರ ವಿರುದ್ಧ ಕ್ರಮ ಕೈಗೊಳ್ತಿವಿ. ಕಳೆದೆರಡು ದಿನಗಳಿಂದ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೇವೆ ಎಂದು ಪ್ರವೀಣ್​ ಸೂದ್​ ಹೇಳಿದ್ದಾರೆ.

ಪ್ರತಿಭಟನಾಕಾರರಿಗೆ ಎಚ್ಚರಿಕೆ ಸಂದೇಶ ರವಾನಿಸಿದ ಡಿಜಿ ಪ್ರವೀಣ್​ ಸೂದ್​

ಈ ಸಂಘಟನೆಗಳೆಲ್ಲವೂ ನಿಷೇಧ:ದೇಶವ್ಯಾಪಿ ಎನ್​ಐಎ ದಾಳಿಯ ಬೆನ್ನಲ್ಲೇ ಪಿಎಫ್​ಐ ಮತ್ತು ಅದರ ಅಂಗ ಸಂಘಟನೆಗಳಾದ ರಿಹಾಬ್ ಇಂಡಿಯಾ ಫೌಂಡೇಷನ್, ಕ್ಯಾಂಪಸ್​ ಫ್ರಂಟ್​ ಆಫ್​ ಇಂಡಿಯಾ, ರೈಟ್​ ಆರ್ಗನೈಷೇನ್, ನ್ಯಾಷನಲ್​​ ಕಾನ್​ಫಡರೇಷನ್ ಆಫ್​​ ಹ್ಯೂಮನ್, ಆಲ್​ ಇಂಡಿಯಾ ಇಮಾಮ್ಸ್​ ಕೌನ್ಸಿಲ್, ಜೂನಿಯರ್​ ಫ್ರಂಟ್​​, ಎಂಪವರ್​​​ ಇಂಡಿಯಾ ಫೌಂಡೇಷನ್ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.

ಕಾನೂನುಬಾಹಿರ ಕೃತ್ಯಗಳನ್ನು ತಡೆಯುವ ಉದ್ದೇಶದಿಂದ ದೇಶದಲ್ಲಿ ಪಿಎಫ್ಐ ಮತ್ತು ಅದರ ಅಂಗ ಸಂಘಟನೆಗಳನ್ನು ನಿಷೇಧಿಸಿಸಲಾಗಿದೆ. ಈ ಸಂಘಟನೆಗಳ ಎಲ್ಲ ಕಾರ್ಯಚಟುವಟಿಕೆಗಳೂ ಕಾನೂನುಬಾಹಿರ ಎನಿಸಿಕೊಳ್ಳುತ್ತವೆ. ಪಿಎಫ್​ಐ ಹೆಸರಿನಲ್ಲಿ ಯಾವುದೇ ಚಟುವಟಿಕೆ ನಡೆಸಿದರೂ UAPA ಕಾಯ್ದೆಯ ಅಡಿಯಲ್ಲಿ ಪ್ರಕರಣ ಎದುರಿಸಬೇಕಾಗುತ್ತದೆ. ಯಾರೂ ಪಿಎಫ್​ಐ ಹೆಸರು ಬಳಸುವಂತಿಲ್ಲ, ಹೊಸದಾಗಿ ಸೇರುವಂತಿಲ್ಲ. ಈವರೆಗೆ ಬಂಧನಕ್ಕೆ ಒಳಗಾಗದ ಪಿಎಫ್​ಐ ಮುಖಂಡರು ಸಹ ಯಾವುದೇ ಕಾರ್ಯಕ್ರಮ, ಪ್ರತಿಭಟನೆ, ಹಣ ಸಂಗ್ರಹಣೆ ಮಾಡುವಂತಿಲ್ಲ. ಪಿಎಫ್ಐ ಹೆಸರು ಬಳಕೆ ಮಾಡಿದರೆ, ಪಿಎಫ್ಐ ಹೆಸರಿನಲ್ಲಿ ಸಭೆ ನಡೆಸಿದರೆ ಕಾನೂನುಬಾಹಿರ ಚಟುವಟಿಕೆಯಡಿಯಲ್ಲಿ ಪ್ರಕರಣ ಎದುರಿಸಬೇಕಾಗುತ್ತದೆ ಎಂಬುದು ಕಾನೂನು ತಜ್ಞರು ಮಾತಾಗಿದೆ.

ಓದಿ:ಮೋದಿ ನಾಯಕತ್ವ ಇರುವಾಗ ವಿಧ್ವಂಸಕ ಕೃತ್ಯಗಳಿಗೆ ಈ ದೇಶದಲ್ಲಿ ಅವಕಾಶವಿಲ್ಲ: ಸಿಎಂ ಬೊಮ್ಮಾಯಿ

Last Updated :Sep 28, 2022, 1:56 PM IST

ABOUT THE AUTHOR

...view details