ಕರ್ನಾಟಕ

karnataka

ಗಂಡನ ಮನೆಯವರಿಂದ ಕಿರುಕುಳ ಆರೋಪ: ಡೆತ್ ನೋಟ್ ಬರೆದಿಟ್ಟು ನವ ವಿವಾಹಿತೆ ಆತ್ಮಹತ್ಯೆ

By

Published : Feb 14, 2023, 7:55 AM IST

Updated : Feb 14, 2023, 12:47 PM IST

ಪತಿಯಿಂದ ನಿರಂತರ ನಿಂದನೆ ಆರೋಪ-ಮನನೊಂದ ಪತ್ನಿ ಆತ್ಮಹತ್ಯೆ- ಕೆಆರ್​​​ಪುರ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಘಟನೆ

Bengaluru
ಕೆಆರ್​​ಪುರ

ಮೃತ ಮಹಿಳೆಯ ಕುಟುಂಬಸ್ಥರಿಂದ ವರದಕ್ಷಿಣೆ ಕಿರುಕುಳ ಆರೋಪ..

ಬೆಂಗಳೂರು: ಕಳೆದ 8 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವ ವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಆರ್​​ಪುರ ಪೊಲೀಸ್​​ ಠಾಣಾ ವ್ಯಾಪ್ತಿಯ ಭಟ್ಟರಹಳ್ಳಿಯಲ್ಲಿ ನಡೆದಿದೆ. ರಾಣಿ (27) ಆತ್ಮಹತ್ಯೆಗೆ ಶರಣಾದ ಮಹಿಳೆ. ಕೆಆರ್​​ಪುರದ ಭಟ್ಟರಹಳ್ಳಿಯ ತನ್ನ ಅಕ್ಕನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

5 ಪುಟಗಳ ಡೆತ್ ನೋಟ್: ಗಂಡ ಹಾಗೂ ಅವರ ಕುಟುಂಬದವರು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿ ಮಹಿಳೆ ಐದು ಪುಟಗಳ ಡೆತ್ ನೋಟ್ ಬರೆದಿದ್ದಾರೆ. ಮೂಲತಃ ಕೋಲಾರ ಜಿಲ್ಲೆಯವರಾದ ರಾಣಿ ಜಯನಗರ ಮೂಲದವರಾದ ಜೀವನ್ ಕುಮಾರ್ ಎಂಬುವರನ್ನು ಕಳೆದ ವರ್ಷದ ಮೇ ತಿಂಗಳಿನಲ್ಲಿ ಮದುವೆಯಾಗಿದ್ದರು. ಮದುವೆಯಾದ ಮೂರೇ ತಿಂಗಳಿಗೆ ಸಣ್ಣ ಸಣ್ಣ ವಿಷಯಕ್ಕೂ ಜಗಳವಾಡುತ್ತಿದ್ದರು. ಹೀಗಾಗಿ ಕೆಲವೊಮ್ಮೆ ಹಿರಿಯರ ಸಮ್ಮುಖದಲ್ಲಿ ರಾಜಿ ಸಂಧಾನ ನಡೆಸಿದ್ದೆವು. ಆದರೆ ಇವರಿಬ್ಬರ ಜಗಳ ವಿಕೋಪಕ್ಕೆ ತಿರುಗಿದಾಗ ಬಸವನಗುಡಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ದಂಪತಿಗೆ ಸಮಾಲೋಚನೆ ನಡೆಸಲಾಗಿತ್ತು. ಆದಾಗ್ಯೂ ಸುಧಾರಣೆ ಕಾಣದಾಗ ಸ್ವಲ್ಪ ದಿನಗಳ ಕಾಲ ಅಕ್ಕನ ಮನೆಯಲ್ಲಿ ಇರು ಎಂದು ಕಳಿಸಿದ ಪತಿ 15 ದಿನಗಳ ನಂತರ ಡೈವೋರ್ಸ್​ ಲೆಟರ್ ಅನ್ನು ಕಳಿಸಿದ್ದರು. ಇದರಿಂದ ಮನನೊಂದ ರಾಣಿ ನೇಣಿಗೆ ಶರಣಾಗಿದ್ದಾಳೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.

ವರದಕ್ಷಿಣೆ ಕಿರುಕುಳ ಆರೋಪ: ಮೃತ ಮಹಿಳೆಯ ಕುಟುಂಬದವರು ತಮ್ಮ ಮಗಳಿಗೆ ವರದಕ್ಷಿಣೆ ಕಿರುಕುಳ ಕೊಡುತ್ತಿದ್ದರು. ತವರು ಮನೆಯಿಂದ ಹಣ ಹಾಗೂ ಆಭರಗಳು ತರುವಂತೆ ಪೀಡಿಸುತ್ತಿದ್ದರು. ಇದರಿಂದ ಆಗಾಗ ಜಗಳ ನಡೆಯುತ್ತಿತ್ತು. ಹಿರಿಯರು ಮಾತುಕತೆ ಮಾಡಿ ಕಳುಹಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.

ಇನ್ನು, ಬಲ್ಲ ಮೂಲಗಳ ಮೂಲಗಳ ಪ್ರಕಾರ, "ಮೃತಳ ಗಂಡನ ಜಾತಕ ಪ್ರಕಾರ ಮೊದಲ ಹೆಂಡತಿ ಮದುವೆ ನಂತರ ಮರಣ ಹೊಂದುತ್ತಾಳೆ ಎಂದು ಜಾತಕದಲ್ಲಿ ಇತ್ತು ಎಂದು ಹೇಳಲಾಗಿದೆ. ಇದರಿಂದ ಆಕೆಯನ್ನು ಮದುವೆ ಆಗಲು ಇಷ್ಟವಿಲ್ಲದಿದ್ದರೂ ಮದುವೆಯಾಗಿದ್ದನಂತೆ. ಹಾಗಾಗಿ ಅನ್ಯೋನ್ಯವಾಗಿ ಸಂಸಾರ ನಡಸದೆ ಪ್ರತಿನಿತ್ಯ ನೀನು ಸುಂದರವಾಗಿಲ್ಲ, ನಿನ್ನೊಂದಿಗೆ ನಾನು ಸಂಸಾರ ಮಾಡಲು ಸಾಧ್ಯವಿಲ್ಲ ಎಂದು ಹಿಂಸಿಸುತ್ತಿದ್ದನಂತೆ. ಇದರಿಂದ ಮನನೊಂದ ರಾಣಿ ಭಟ್ಟರಹಳ್ಳಿಯ ಅಕ್ಕನ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗುತ್ತಿದೆ.

ಜೈಲಿಗೆ ಬೇಕಾದರೆ ಕಳಿಸಿ, ಆಕೆಯೊಂದಿಗೆ ಬಾಳಲ್ಲ:ಆರಂಭದಿಂದಲೇ 'ನೀನು ಸುಂದರವಾಗಿಲ್ಲ, ಇದು ಬಲವಂತದ ಮದುವೆ' ಎಂದು ಪತಿ ಜೀವನ್ ಕುಮಾರ್ ಹೀಯಾಳಿಸುತ್ತಿದ್ದನಂತೆ. 2 ಕುಟುಂಬಗಳ ಹಿರಿಯರ ಮಧ್ಯಸ್ಥಿಕೆಯಲ್ಲಿ ರಾಜಿ ಸಂಧಾನಕ್ಕೂ ಯತ್ನಿಸಲಾಗಿತ್ತಂತೆ. ಅಲ್ಲದೇ ಕಿರುಕುಳ ಸಹಿಸಲಾರದೆ ರಾಣಿ ಬಸವನಗುಡಿ ಮಹಿಳಾ ಪೊಲೀಸ್‌ ಠಾಣೆಗೆ ಪತಿ ವಿರುದ್ಧ ದೂರು ನೀಡಿದ್ದಳಂತೆ. ಪೊಲೀಸರ ಮುಂದೆ ಜೀವನ್ ಕುಮಾರ್ 'ನನ್ನನ್ನ ಬೇಕಾದರೆ ಜೈಲಿಗೆ ಕಳುಹಿಸಿ, ಆದರೆ ಆಕೆಯೊಂದಿಗೆ ಜೀವನ ಮಾಡಲಾರೆ' ಎಂದಿದ್ದನಂತೆ. ಗಂಡನ ಈ ಮಾತಿನಿಂದ ನೊಂದ ರಾಣಿ ತವರು ಮನೆ ಸೇರಿದ್ದಳು. 15 ದಿನಗಳ ಹಿಂದೆ ಕೆಆರ್​​ಪುರಂನಲ್ಲಿರುವ ತನ್ನ ಸಹೋದರಿ ಮನೆಗೆ ಬಂದಿದ್ದಳು. ನಿನ್ನೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಘಟನೆ ಸಂಬಂಧ ಮೃತಳ ಪತಿ ಜೀವನ್ ಕುಮಾರ್, ಮಾವ ವರದರಾಜು, ಅತ್ತೆ ನಿರ್ಮಲಾ, ಮೈದುನರಾದ ವಿವೇಕ್ ಹಾಗೂ ಮಧುಸೂದನ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ವರದಕ್ಷಿಣೆ ಕಿರುಕುಳ ಆರೋಪದಡಿ, ಕೆಆರ್​​ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.

ಇದನ್ನೂ ಓದಿ:4 ತಿಂಗಳ ಹಿಂದೆ ಪ್ರೇಮ ವಿವಾಹ: ಬೆಂಗಳೂರಿನಲ್ಲಿ ಯುವತಿ ಆತ್ಮಹತ್ಯೆ

Last Updated : Feb 14, 2023, 12:47 PM IST

ABOUT THE AUTHOR

...view details