ಕರ್ನಾಟಕ

karnataka

ಸಿಎಂ ಭೇಟಿಯಾದ ಎಂಟಿಬಿ ನಾಗರಾಜ್: ಸಂಪುಟ ವಿಸ್ತರಣೆ ವಿಳಂಬಕ್ಕೆ ಬೇಸರ

By

Published : Nov 17, 2020, 2:12 PM IST

Updated : Nov 17, 2020, 2:27 PM IST

ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಎಂಎಲ್​​ಸಿ ಎಂಟಿಬಿ ನಾಗರಾಜ್ ಇಂದು ಬೆಳಗ್ಗೆಯೇ ಸಿಎಂ ಯಡಿಯೂರಪ್ಪ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಪದೇ ಪದೆ ಸಂಪುಟ ವಿಸ್ತರಣೆ ಮುಂದೂಡಿಕೆಯಾಗುತ್ತಿರುವುದಕ್ಕೆ ಎಂಟಿಬಿ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗ್ತಿದೆ.

mlc mtb nagraj meet yadiyurappa
ಸಿಎಂ ಭೇಟಿಯಾದ ಎಂಟಿಬಿ ನಾಗರಾಜ್

ಬೆಂಗಳೂರು: ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾದರು. ಈ ವೇಳೆ, ಸಚಿವ ಸ್ಥಾನದ ಕುರಿತು ಮಾತುಕತೆ ನಡೆಸಿದರು.

ಬೆಳಗ್ಗೆಯೇ ಸಿಎಂ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದ್ದ ಎಂಟಿಬಿ ನಾಗರಾಜ್ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಸದ್ಯದಲ್ಲೇ ಸಂಪುಟ ವಿಸ್ತರಣೆ ಆಗುವ ಹಿನ್ನೆಲೆಯಲ್ಲಿ ಮಹತ್ವದ ಮಾತುಕತೆ ನಡೆಸಿದರು. ಸಿಎಂ ಎದುರು ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ವಿಚಾರವನ್ನು ಎಂಟಿಬಿ ಪ್ರಸ್ತಾಪಿಸಿದರು ಎನ್ನಲಾಗ್ತಿದೆ.

ಪದೇ ಪದೆ ಸಂಪುಟ ವಿಸ್ತರಣೆ ಮುಂದೂಡಿಕೆಯಾಗುತ್ತಿರುವುದಕ್ಕೆ ಎಂಟಿಬಿ ನಾಗರಾಜ್ ಬೇಸರ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡಿ ಸಚಿವ ಸ್ಥಾನ ನೀಡುವಂತೆ ಸಿಎಂಗೆ ಮನವಿ ಮಾಡಿದರು. ಎಂಟಿಬಿಯನ್ನು ಸಮಾಧಾನ ಮಾಡಿದ ಸಿಎಂ ಈಗ ಎಲ್ಲವೂ ಸರಿಯಾಗಿದೆ. ಹೈಕಮಾಂಡ್ ನಾಯಕರು ಚುನಾವಣಾ ಕೆಲಸದಲ್ಲಿದ್ದ ಕಾರಣ ಭೇಟಿ ಸಾಧ್ಯವಾಗಿರಲಿಲ್ಲ, ಈಗ ವರಿಷ್ಠರ ಭೇಟಿಗೆ ಅನುಮತಿ ಕೋರಲಾಗುತ್ತದೆ. ಅನುಮತಿ ಸಿಗುತ್ತಿದ್ದಂತೆ ದೆಹಲಿಗೆ ಹೋಗಿ ಮಾತುಕತೆ ನಡೆಸಿ ಸಂಪುಟ ವಿಸ್ತರಣೆಗೆ ಅನುಮತಿ ಪಡೆದು ಬರುತ್ತೇನೆ. ಇನ್ನೊಂದು ವಾರದಲ್ಲಿ ಎಲ್ಲ ಆಗಲಿದೆ ಎಂದು ಅಭಯ ನೀಡಿದ್ದಾರೆ ಎನ್ನಲಾಗ್ತಿದೆ.

Last Updated : Nov 17, 2020, 2:27 PM IST

ABOUT THE AUTHOR

...view details