ಕರ್ನಾಟಕ

karnataka

ಬಿಎಸ್​ವೈ ಭೇಟಿಯಾದ ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್: ಹೇಳಿದ್ದೇನು?

By

Published : Jul 13, 2022, 12:12 PM IST

"ಯಡಿಯೂರಪ್ಪ ಹಿರಿಯರು. ನಮ್ಮ ಸಮಾಜದ ಮುಖಂಡರು. ಇಂದು ಗುರುಪೂರ್ಣಿಮಾ. ಹಾಗಾಗಿ ಹಿರಿಯರ ಆಶೀರ್ವಾದ ಪಡೆಯೋಣವೆಂದು ಬಂದೆ" - ಲಕ್ಷ್ಮಿ ಹೆಬ್ಬಾಳ್ಕರ್, ಕಾಂಗ್ರೆಸ್ ಶಾಸಕಿ

lakshmi hebbalkar met BS Yadiyurappa
ಬಿಎಸ್​ವೈ ಭೇಟಿಯಾದ ಹೆಬ್ಬಾಳ್ಕರ್

ಬೆಂಗಳೂರು: "ನಮ್ಮ ಸಮಾಜದ ಹಿರಿಯರಾಗಿರುವ ಕಾರಣ ಸೌಹಾರ್ದಯುತವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೇನೆ. ಈ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ" ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದರು. ಬಿಎಸ್​ವೈ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದ ಶಾಸಕಿ ಕೆಲಕಾಲ ಮಾತುಕತೆ ನಡೆಸಿದ್ದಾರೆ. ಆದರೆ, ಈ ಭೇಟಿ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.


"ಈ ಭೇಟಿಯಲ್ಲಿ ಕುತೂಹಲದ ವಿಚಾರ ಏನಿಲ್ಲ. ಬೆಂಗಳೂರಿಗೆ ಬಂದಾಗ ಯಡಿಯೂರಪ್ಪ ಅವರನ್ನು ಭೇಟಿಯಾಗುತ್ತೇನೆ. ಅವರು ಹಿರಿಯರು. ನಮ್ಮ ಸಮಾಜದ ಮುಖಂಡರು. ಇಂದು ಗುರುಪೂರ್ಣಿಮಾ. ಹಾಗಾಗಿ ಹಿರಿಯರ ಆಶೀರ್ವಾದ ಪಡೆಯೋಣವೆಂದು ಬಂದೆ. ಅವರ ಮಾರ್ಗದರ್ಶನ ಪಡೆದಿದ್ದೇನೆ. ರಾಜಕಾರಣದ ಚರ್ಚೆ ನಡೆಸಿಲ್ಲ" ಎಂದು ಹೆಬ್ಬಾಳ್ಕರ್‌ ಸ್ಪಷ್ಟನೆ ಕೊಟ್ಟರು.

"ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಡಬೇಕು ಎನ್ನುವ ಆಸಕ್ತಿ ಯಡಿಯೂರಪ್ಪ ಅವರಿಗಿತ್ತು. ಆದರೆ ಕಾರಣಾಂತರಗಳಿಂದ ಕೊಡಲು ಆಗಲಿಲ್ಲ. ಆದರೂ ಶೀಘ್ರದಲ್ಲೇ ನಮಗೆ ಮೀಸಲಾತಿ ಸಿಗುವ ಭರವಸೆ ಇದೆ. ಸಿಎಂ ಬೊಮ್ಮಾಯಿ ಅವರ ಮೇಲೆಯೂ ಭರವಸೆ ಇದೆ. ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಮೀಸಲಾತಿ ಕೊಡಲಿದ್ದಾರೆ" ಎಂದು ತಿಳಿಸಿದರು.

ಇದನ್ನೂ ಓದಿ:ಹೆಚ್ಚುವರಿ ಹಣದೊಂದಿಗೆ ಪರಿಷ್ಕೃತ ಮಳೆ ಹಾನಿ ಪರಿಹಾರ ನೀಡಲು ಸರ್ಕಾರ ಆದೇಶ

ಡಿಕೆಶಿ ಉತ್ಸವಕ್ಕೆ ಬೆಂಬಲಿಗರ ಒತ್ತಾಯದ ವಿಚಾರದ ಕುರಿತು ಪ್ರತಿಕ್ರಿಯಿಸಿ, "ಅದರ ಬಗ್ಗೆ ನನಗೆ ಗೊತ್ತಿಲ್ಲ. ನಾವು ಸಿದ್ದರಾಮಯ್ಯ ಉತ್ಸವ ಮಾಡುತ್ತಿದ್ದೇವೆ. ಆ ಸಮಿತಿಯಲ್ಲಿ ನಾನೂ ಇದ್ದೇನೆ. ಇಂದು ನಡೆಯುವ ಸಭೆಯಲ್ಲಿ ಭಾಗವಹಿಸುತ್ತೇನೆ. ಅವರು ರಾಜಕಾರಣದಲ್ಲಿ ಸೇವೆ ಸಲ್ಲಿಸಿದ್ದಾರೆ, ಅದೊಂದು ಸಾರ್ಥಕತೆ. ಅವರು ತನ್ನ ಉತ್ಸವ ಮಾಡಿ ಎಂದು ಹೇಳಿಲ್ಲ, ನಾವೆಲ್ಲ ಸೇರಿ ಮಾಡುತ್ತಿದ್ದೇವೆ" ಎಂದರು.

ABOUT THE AUTHOR

...view details