ಕರ್ನಾಟಕ

karnataka

ಸಿಡಿ ಪ್ರಕರಣ: ಸಿಬಿಐಗೆ ತನಿಖೆ ಕುರಿತು ಜಾರಕಿಹೊಳಿ ಮಾತುಕತೆ ನಡೆಸಿಲ್ಲ- ಪ್ರಹ್ಲಾದ್ ಜೋಷಿ

By

Published : Feb 3, 2023, 8:37 PM IST

Updated : Feb 3, 2023, 8:50 PM IST

ಮೋದಿ ಅವರ ಆಡಳಿತದಲ್ಲಿ ರಾಜ್ಯಕ್ಕೆ ಹೆಚ್ಚು ಅನುದಾನ ಬಂದಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಹೇಳಿದರು. ಇದೇ ವೇಳೆ ಸಿಡಿ ಪ್ರಕರಣದ ಬಗ್ಗೆಯೂ ಪ್ರತಿಕ್ರಿಯಿಸಿದರು.

ಸಚಿವ ಪ್ರಹ್ಲಾದ್ ಜೋಷಿ
ಸಚಿವ ಪ್ರಹ್ಲಾದ್ ಜೋಷಿ

ಸಿಡಿ ಪ್ರಕರಣದ ಬಗ್ಗೆ ಸಚಿವ ಪ್ರಹ್ಲಾದ್ ಜೋಶಿ ಅವರು ಮಾತನಾಡಿದರು

ಬೆಂಗಳೂರು: ಸಿಡಿ ಪ್ರಕರಣವನ್ನು ಸಿಬಿಐಗೆ ನೀಡುವ ಕುರಿತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಮ್ಮ ಜೊತೆ ಮಾತುಕತೆ ನಡೆಸಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರು ಸ್ಪಷ್ಟಪಡಿಸಿದ್ದಾರೆ. ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿಯವರು ಶಾಸಕರು, ಒಬ್ಬ ಮಾಜಿ ಸಚಿವರು ಇವತ್ತು ಅವರು ದೆಹಲಿಗೆ ಬಂದಿದ್ದರು, ನನ್ನನ್ನು ಭೇಟಿ ಮಾಡಿದ್ದು ನಿಜ, ಆದರೆ ನನ್ನನ್ನು ಬಿಟ್ಟು ಬೇರೆ ಯಾರನ್ನು ಭೇಟಿ ಮಾಡಿದರು ಅಂತಾ ಗೊತ್ತಿಲ್ಲ. ಅವರು ಬೇರೊಂದು ಕಾರಣಕ್ಕೆ ಬಂದು ಹಾಗೆಯೇ ನನ್ನನ್ನು ಭೇಟಿ ಮಾಡಿದ್ದರು ಅಷ್ಟೇ. ಸಿಡಿ ಪ್ರಕರಣವನ್ನು ಸಿಬಿಐಗೆ ಕೊಡುವ ಬಗ್ಗೆ ನನ್ನ ಬಳಿ ಅವರು ಏನು ಪ್ರಸ್ತಾಪ ಮಾಡಿಲ್ಲ ಎಂದರು.

ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್‌ ಪಟ್ಟಿ ಯಾವಾಗ? ಎನ್ನುವ ಕುರಿತು ಪ್ರತಿಕ್ರಿಯೆ ನೀಡಿದ ಪ್ರಹ್ಲಾದ್ ಜೋಷಿ, ಚುನಾವಣೆ ಘೋಷಣೆ ಆದ ಮೇಲೆ ಪಟ್ಟಿ ಪ್ರಕಟ ಆಗುತ್ತದೆ ಎಂದರು‌. ರಾಜ್ಯಕ್ಕೆ ಹೆಚ್ಚು ಅನುದಾನ ಬಂದಿಲ್ಲ ಅನ್ನೋದಕ್ಕೆ ಆಧಾರವಿಲ್ಲ. ಮೋದಿ ಅವರ ಆಡಳಿತದಲ್ಲಿ ಹೆಚ್ಚು ಅನುದಾನ ಬಂದಿದೆ. ಕಳೆದ ಎಂಟು ವರ್ಷಗಳಲ್ಲಿ ಇನ್ಫ್ರಾಸ್ಟ್ರಕ್ಟರ್​ಗೆ ಹೆಚ್ಚು ಆದ್ಯತೆ ನೀಡಲಾಗಿದೆ. ರೋಡ್, ಹೈವೇ, ರೈಲು ಹೊಸ ಮಾರ್ಗ, ರೈಲು ಡಬಲ್ಲಿಂಗ್, ಎಲೆಕ್ಟ್ರಿಫಿಕೇಶನ್ ಮಾಡಲಾಗಿದೆ. ಇಡೀ ದೇಶ ಮತ್ತು ಕರ್ನಾಟಕದಲ್ಲೂ ಕೂಡ ಆಗಿದೆ. 1960ರಿಂದ ಏನು ಆಗಿದೆಯೋ ಎಂಟು ವರ್ಷದಲ್ಲಿ ಡಬಲ್ ಕೆಲಸ ಆಗಿದೆ ಎಂದು ಹೇಳಿದರು.

ಭದ್ರಾ ಯೋಜನೆಗೆ 60:40 ರೇಶಿಯೋದಲ್ಲಿ ಅನುದಾನ ಬಿಡುಗಡೆ ಆಗಿದೆ. ಅತಿ ಹೆಚ್ಚು ಖರ್ಚು ಮಾಡಿ ಯೋಜನೆ ರೂಪಿಸಲಾಗಿದೆ. ಇದರಿಂದ ಉದ್ಯೋಗ, ಇನ್ಫ್ರಾಸ್ಟ್ರಕ್ಚರ್ ಕ್ರಿಯೇಟ್ ಆಗಿದೆ. ಸಾಮಾನ್ಯವಾಗಿ ಟೀಕಿಸೋ ಜನ ಹೆಚ್ಚಿರುತ್ತಾರೆ. ಈ ಬಾರಿ ಪೊಲಿಟಿಕಲ್ ಪಾರ್ಟಿ ಬಿಟ್ಟರೆ ಜನರು ಬಜೆಟ್ ಸ್ವಾಗತ ಮಾಡಿದ್ದಾರೆ. ಭಾರತ ಬ್ರೈಟ್ ಸ್ಪಾಟ್ ಎಂದು ತಿಳಿಸಿದರು.

ಡಿ ಕೆ ಶಿವಕುಮಾರ್ ಅವರಿಗೆ ಸಿ ಟಿ ರವಿ ಟಾಂಗ್

ಡಿಕೆಶಿಗೆ ಸಿ.ಟಿ.ರವಿ ಟಾಂಗ್:ಪಾಕಿಸ್ತಾನ ರಿಪೋರ್ಟ್ ಇಟ್ಟುಕೊಂಡು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡುತ್ತಿದ್ದಾರೆ. ಪಾಕಿಸ್ತಾನದ ಈಗಿನ ಸರ್ಕಾರ ಪತನ ಆಗುತ್ತದೆ ಅಂತಿದೆ. ಆ ಮಾಹಿತಿ ಇವರ ಬಳಿ ಇದೆ. ಆದರೆ ಉತ್ತರ ಪ್ರದೇಶ, ಗೋವಾ, ಗುಜರಾತ್ ಮಾದರಿಯ ಫಲಿತಾಂಶವೇ ಇಲ್ಲಿ ಬರಲಿದೆ ಎಂದು ಡಿಕೆಶಿಗೆ ಸಿ.ಟಿ.ರವಿ ಟಾಂಗ್ ನೀಡಿದರು.

ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ 160 ಸೀಟು ಬರುತ್ತದೆ ಎಂದು ಡಿಕೆಶಿ ಹೇಳಿಕೆ ನೀಡಿದ್ದಾರೆ. ಬಹುಶ: ಅವರು ಪಾಕಿಸ್ತಾನದ ಸರ್ವೇ ರಿಪೋರ್ಟ್ ಕೈಯಲ್ಲಿ ಇಟ್ಟುಕೊಂಡಿರಬೇಕು ಅನ್ನಿಸುತ್ತದೆ. ಅವರು ಇನ್ನೊಮ್ಮೆ ಚೆಕ್ ಮಾಡಿಕೊಳ್ಳುವುದು ಒಳ್ಳೆಯದು ಎಂದರು.

ಇದನ್ನೂ ಓದಿ :ಹೈಕಮಾಂಡ್ ನೋಟಿಸ್ ನೀಡಿಲ್ಲ, ನೋಟಿಸ್ ತೋರಿಸಿದ್ರೆ ₹10 ಲಕ್ಷ ಕೊಡ್ತೇನೆ: ಯತ್ನಾಳ್

Last Updated :Feb 3, 2023, 8:50 PM IST

ABOUT THE AUTHOR

...view details