ಕರ್ನಾಟಕ

karnataka

ನಿಗಮ ಮಂಡಳಿ ನೇಮಕ ಸಂಬಂಧ ನನ್ನ ಅಭಿಪ್ರಾಯ ಕೇಳಿಲ್ಲ: ಸಚಿವ ಡಾ ಜಿ ಪರಮೇಶ್ವರ್

By ETV Bharat Karnataka Team

Published : Nov 28, 2023, 7:44 PM IST

ನಿಗಮ ಮಂಡಳಿ ನೇಮಕಾತಿ ಸಂಬಂಧ ನನ್ನ ಅಭಿಪ್ರಾಯವನ್ನು ಕೇಳಿಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ತಿಳಿಸಿದ್ದಾರೆ.

ಸಚಿವ ಡಾ ಜಿ ಪರಮೇಶ್ವರ್
ಸಚಿವ ಡಾ ಜಿ ಪರಮೇಶ್ವರ್

ಸಚಿವ ಡಾ ಜಿ ಪರಮೇಶ್ವರ್

ಬೆಂಗಳೂರು : ನಿಗಮ‌ ಮಂಡಳಿ ನೇಮಕಾತಿ ವಿಚಾರವಾಗಿ ನನ್ನ ಅಭಿಪ್ರಾಯ ಕೇಳಿಲ್ಲ. ಕೇಳಿದ್ರೆ ಒಳ್ಳೆಯದಾಗಿತ್ತು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ತಿಳಿಸಿದರು. ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಕಳೆದ ವಾರ ಸಭೆ ಮಾಡಿದ್ದಾರೆ. ನಮ್ಮ ಜನರಲ್ ಸೆಕ್ರೆಟರಿ ಸಿಎಂ, ಅಧ್ಯಕ್ಷರ ಜೊತೆ ಮಾತಾಡಿದ್ದಾರೆ. ಅಂತಿಮಗೊಳಿಸಬಹುದು, ನನಗೆ ಗೊತ್ತಿಲ್ಲ ಎಂದರು.

ಅವರು ನಮ್ಮ ಜೊತೆಗೆ ಚರ್ಚೆ ಮಾಡಿಲ್ಲ. ನನ್ನ ಅಭಿಪ್ರಾಯ ಕೇಳಿಲ್ಲ. ಕೇಳಿದ್ದರೆ ಒಳ್ಳೆಯದಾಗಿತ್ತು. ಯಾಕಂದ್ರೆ ನಾನು ಎಂಟು ವರ್ಷ ಅಧ್ಯಕ್ಷನಾಗಿದ್ದೆ. ಯಾರನ್ನ ಮಾಡಿದ್ರೆ ಒಳಿತು ಅಂತ ಸಲಹೆ ಕೊಡ್ತಿದ್ದೆ.‌ ನಮ್ಮನ್ನು ಕೇಳಿ ಮಾಡಿದ್ರೆ ಚೆನ್ನಾಗಿರುತ್ತಿತ್ತು. ಹೈಕಮಾಂಡ್ ಅನುಮತಿಯಿಂದ ಅವರು ಮಾಡುತ್ತಿದ್ದಾರೆ. ಶಾಸಕರಿಗೆ, ಕಾರ್ಯಕರ್ತರಿಗೆ ಅಧಿಕಾರ ಹಂಚಿಕೆ ಆದ್ರೆ ಒಳ್ಳೆಯದು ಎಂದು ಪರಮೇಶ್ವರ್​ ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ಭ್ರೂಣ ಹತ್ಯೆ ಪ್ರಕರಣ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಪೊಲೀಸರು ತನಿಖೆ ಮಾಡುತ್ತಿದ್ದಾರೆ. ತನಿಖೆ ಸಂಪೂರ್ಣ ಆಗಲಿ. ಯಾರು ಯಾರು ಇದರಲ್ಲಿ ಭಾಗಿಯಾಗಿದ್ದಾರೆ. ಹೇಗೆ ನಡೆಯುತ್ತಿದೆ, ಇದು ರಾಕೆಟ್ ತರಹ ನಡೆಯುತ್ತಿದೆ. ತನಿಖೆಯ ನಂತರ ಎಲ್ಲವೂ ಹೊರ ಬರಲಿದೆ. ಮುಂದೆ ಏನು ಮಾಡೋದು ಅಂತ ನೋಡೋಣ ಎಂದು ಹೇಳಿದರು.

ಸಿಎಂ ಜನತಾ ಸ್ಪಂದನ ಗೃಹ ಇಲಾಖೆ ಸಮಸ್ಯೆಗಳ ಅಹವಾಲು ಹೆಚ್ಚಿದ್ದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಮೊದಲು ಠಾಣೆಗೆ ಹೋಗಲು ಜನ ಹೆದರುತ್ತಿದ್ದರು. ಈಗ ಯಾರು ಬೇಕಾದರೂ ಪೊಲೀಸ್ ಠಾಣೆಗೆ ಹೋಗಬಹುದು. ಸಮಸ್ಯೆ ಬಗ್ಗೆ ದೂರು ಕೊಡಬಹುದು. ಕೊಟ್ಟ ನಂತರ ಎಫ್.ಐ.ಆರ್ ದಾಖಲು ಮಾಡಬೇಕು. ಈ ಬಗ್ಗೆ ನಾವು ಸೂಚನೆ ಕೊಟ್ಟಿದ್ದೇನೆ. ಅದಕ್ಕೆ ಹೆಚ್ಚೆಚ್ಚು ಜನ ಠಾಣೆಗಳಿಗೆ ಹೋಗ್ತಿದ್ದಾರೆ. ಅಪರಾಧಗಳು ಹೆಚ್ಚಾಗುತ್ತಿವೆ ಎಂದು ಆರೋಪಿಸಲಾಗುತ್ತಿದೆ. ವಿಪಕ್ಷಗಳು ಬೊಬ್ಬೆ ಹೊಡೆಯುತ್ತಿವೆ. ಯಾಕೆ ಜಾಸ್ತಿಯಾಗುತ್ತಿವೆ ಎಂದರೆ ನಾವು ಅವರಿಗೆ ಅವಕಾಶ ಕೊಡುತ್ತಿದ್ದೇವೆ‌. ದೂರು ತೆಗೆದುಕೊಂಡು ತನಿಖೆ ಮಾಡುತ್ತಿದ್ದೇವೆ.‌ ಲಾಜಿಕಲ್ ಎಂಡ್​ಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಅದರಿಂದ ಜನ ವಿಶ್ವಾಸದ ಮೇಲೆ ಠಾಣೆಗಳಿಗೆ ಬರ್ತಾ ಇದ್ದಾರೆ ಎಂದು ತಿಳಿಸಿದರು.

ಮೊದಲು ಇವರು ಠಾಣೆಗಳಿಗೆ ಬರಲು ಬಿಡುತ್ತಿರಲಿಲ್ಲ. ದೂರು ಕೊಟ್ಟರೆ ಪರಿಗಣಿಸುತ್ತಿರಲಿಲ್ಲ. ನಮ್ಮಲ್ಲಿ ಸೈಬರ್ ಕೇಸ್ ಹೆಚ್ಚಾಗುತ್ತಿವೆ. ಯಾರಿಗೆ ಎಲ್ಲಿ ಹೋಗಬೇಕು ಎಂದು ಗೊತ್ತಿರಲಿಲ್ಲ. ಎಲ್ಲಾ ಠಾಣೆಗಳಲ್ಲಿ ಸೈಬರ್ ಕೇಸ್ ತೆಗೆದುಕೊಳ್ಳಿ ಎಂದು ಹೇಳಿದ್ದೇವೆ.‌ ಅದಕ್ಕೆ ಸೈಬರ್ ಪೊಲೀಸ್ ಸ್ಟೇಷನ್ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ :ರಾಜ್ಯದಲ್ಲಿ ಸೈಬರ್ ಪ್ರಕರಣ ಹೆಚ್ಚಳ, ಸೈಬರ್ ಕ್ರೈಂ ತಡೆಗೆ ಹೊಸ ನಿಯಮ ತರಲು ಕ್ರಮ: ಡಾ. ಪರಮೇಶ್ವರ್

ABOUT THE AUTHOR

...view details