ಕರ್ನಾಟಕ

karnataka

ಅಹ್ಮದ್ ಪಟೇಲ್ ಸಾವು ಆಘಾತ ತಂದಿದೆ: ಮಲ್ಲಿಕಾರ್ಜುನ ಖರ್ಗೆ

By

Published : Nov 25, 2020, 12:18 PM IST

ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್​​ ಸಾವು ಭಾರಿ ಆಘಾತ ತಂದಿದೆ ಎಂದು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಸಂತಾಪ ಸೂಚಿಸಿದ್ದಾರೆ. ಪಕ್ಷಕ್ಕೆ ಆಧಾರ ಸ್ತಂಭದಂತಿದ್ದ ಅವರು, ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು ಎಂದಿದ್ದಾರೆ.

mallikarjuna kharge
ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು : ಅಹ್ಮದ್ ಪಟೇಲ್ ನಿಧನದಿಂದ ನಮಗೆಲ್ಲ ಬಹಳ ದುಃಖವಾಗಿದೆ ಎಂದು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಕಂಬನಿ ಮಿಡಿದಿದ್ದಾರೆ.

ಅಹ್ಮದ್ ಪಟೇಲ್ ಸಾವಿಗೆ ಕಂಬನಿ ಮಿಡಿದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಅಹ್ಮದ್ ಪಟೇಲ್ 45 ವರ್ಷಗಳಿಂದ ನಮ್ಮ ಜೊತೆ ಕಾಂಗ್ರೆಸ್ ನಲ್ಲಿ ಕೆಲಸ ಮಾಡಿದ್ದರು. 1976 ರಿಂದ ಈವರೆಗೆ ಜೊತೆಯಾಗಿ ಪಕ್ಷದ ಅನೇಕ ಏರುಪೇರುಗಳನ್ನು ನೋಡಿದ್ದೇವೆ. ಕಾಂಗ್ರೆಸ್​​ಗೆ ಆಧಾರ ಸ್ತಂಭದಂತೆ ಇದ್ದ ಅವರು, ಎಲ್ಲ ರಾಜ್ಯದ ನಾಯಕರ ಜೊತೆ ಉತ್ತಮ ಸಂಬಂಧ ಹೊಂದಿದ್ದರು. ಆಲ್ ಪಾರ್ಟಿ ಮೀಟಿಂಗ್​​ನಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದರು ಎಂದರು.

ಇದನ್ನೂ ಓದಿ: ಕಾಂಗ್ರೆಸ್ ನಾಯಕನ ಅಗಲಿಕೆಗೆ ಸಿಎಂ ಬಿಎಸ್​ವೈ, ಸಿದ್ದರಾಮಯ್ಯ ಸೇರಿ ಗಣ್ಯರ ಸಂತಾಪ

ಅವರ ಅಗಲಿಕೆ ನಿಜಕ್ಕೂ ಶಾಕ್ ಆಗಿದೆ. ಭಗವಂತ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ. ಅಸ್ಸೋಂನ ಮಾಜಿ ಸಿಎಂ ತರುಣ್ ಗೊಗೊಯ್ ಸಹ ಇದೇ ವಾರ ತೀರಿಕೊಂಡಿದ್ದು, ಈ ದಿನ ನಮಗೆ ಕರಾಳದಿನವಾಗಿದೆ ಎಂದು ಅಗಲಿದ ನಾಯಕರಿಗೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸಂತಾಪ ಸೂಚಿಸಿದರು.

ABOUT THE AUTHOR

...view details