ಕರ್ನಾಟಕ

karnataka

ಸಂವಿಧಾನ ಕೊಲ್ಲಲು ಹೊರಟ ಶಕ್ತಿಗಳ ವಿರುದ್ಧ ಹೋರಾಡೋಣ: ಹೆಚ್​ಡಿಕೆ ಟ್ವೀಟ್​

By

Published : Jan 26, 2020, 1:18 PM IST

'ಎಲ್ಲರನ್ನೂ ಸಮಾನರೆಂದು ನೋಡುವ, ಸಮಾನ ಅವಕಾಶ ನೀಡುವ ಸಂವಿಧಾನದ ಆಶಯಗಳನ್ನೇ ಬಳಸಿಕೊಂಡು ಅಧಿಕಾರಕ್ಕೆ ಬಂದ ಶಕ್ತಿಗಳು ಇಂದು ಅದರ ಆತ್ಮಕ್ಕೆ ಕೈ ಹಾಕಿ ಕೊಲ್ಲುವ ಮಟ್ಟಕ್ಕಿಳಿದಿವೆ'

H DK
ಹೆಚ್​ಡಿಕೆ ಟ್ವೀಟ್​

ಬೆಂಗಳೂರು:ನಾಡಿನ ಜನತೆಗೆ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿಯವರು,ಸಂವಿಧಾನವನ್ನು ಕೊಲ್ಲಲು ಹೊರಟ ಶಕ್ತಿಗಳ ವಿರುದ್ಧ ಹೋರಾಡೋಣ ಎಂದು ಟ್ವೀಟ್​ ಮೂಲಕ ವಿರೋಧಿಗಳನ್ನು ಕುಟುಕಿದ್ದಾರೆ.

ಭಾರತೀಯ ಪ್ರಜಾಪ್ರಭುತ್ವದ ಆತ್ಮ ಸಂವಿಧಾನ ಜಾರಿಗೆ ಬಂದ ದಿನವಿದು. ಎಲ್ಲರನ್ನೂ ಸಮಾನರೆಂದು ನೋಡುವ, ಸಮಾನ ಅವಕಾಶ ನೀಡುವ ಸಂವಿಧಾನದ ಆಶಯಗಳನ್ನೇ ಬಳಸಿಕೊಂಡು ಅಧಿಕಾರಕ್ಕೆ ಬಂದ ಶಕ್ತಿಗಳು ಇಂದು ಅದರ ಆತ್ಮಕ್ಕೆ ಕೈ ಹಾಕಿ ಕೊಲ್ಲುವ ಮಟ್ಟಕ್ಕಿಳಿದಿವೆ. ಈ ಮೂಲಕ ಶಾಶ್ವತ ಅಧಿಕಾರ ರಕ್ಷಣೆಗೆ ಮುಂದಾಗಿವೆ. ಇದರ ವಿರುದ್ಧ ಹೋರಾಡುವ ಪಣ ನಮ್ಮದಾಗಲಿ ಎಂದು ಟ್ವೀಟ್​ ಮಾಡಿದ್ದಾರೆ.

ABOUT THE AUTHOR

...view details