ಕರ್ನಾಟಕ

karnataka

ಅಕ್ರಮ ಆಸ್ತಿ ಗಳಿಕೆ ಆರೋಪ: ಕೆಎಎಸ್ ಅಧಿಕಾರಿ ಸುಧಾ ಸಸ್ಪೆಂಡ್ ಸಾಧ್ಯತೆ!

By

Published : Jan 18, 2021, 2:11 PM IST

ಕೆಎಎಸ್ ಅಧಿಕಾರಿ ಸುಧಾ ಮನೆ ಹಾಗೂ ಆಪ್ತರ ಮನೆ ಮೇಲೆ ದಾಳಿ ನಡೆಸಿದ್ದ ಎಸಿಬಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅವರನ್ನು ಅಮಾನತು ಮಾಡಲು‌ ಮುಂದಾಗಿದೆ ಎಂದು ತಿಳಿದು ಬಂದಿದೆ.

sudha
ಕೆಎಎಸ್ ಅಧಿಕಾರಿ ಸುಧಾ ಸಸ್ಪೆಂಡ್ ಸಾಧ್ಯತೆ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಕಳೆದ ಎರಡು ತಿಂಗಳ ಹಿಂದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಭೂ ಸ್ವಾಧೀನ ಅಧಿಕಾರಿಯಾಗಿದ್ದ ಡಾ.ಬಿ.ಸುಧಾ ಅವರನ್ನು ರಾಜ್ಯ ಸರ್ಕಾರ ಅಮಾನತು ಮಾಡಲು‌ ಮುಂದಾಗಿದೆ ಎಂದು ತಿಳಿದು ಬಂದಿದೆ.

ಕೆಎಎಸ್ ಅಧಿಕಾರಿ ಹಾಗೂ ಪ್ರಸ್ತುತ ಜೈವಿಕ ತಂತ್ರಜ್ಞಾನ ಇಲಾಖೆಯ ಅಧಿಕಾರಿಯಾಗಿದ್ದ ಸುಧಾ ಅಕ್ರಮ ಆಸ್ತಿ ಸಂಪಾದನೆ ಸಂಬಂಧ ಕಳೆದ ವರ್ಷ ನವೆಂಬರ್​ನಲ್ಲಿ ಎಸಿಬಿ ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿರುವ ಮನೆ ಸೇರಿದಂತೆ ರಾಜ್ಯದ ಉಡುಪಿ, ಮೈಸೂರು ಸೇರಿ ಒಟ್ಟು 6 ಕಡೆ ದಾಳಿ ನಡೆಸಿತ್ತು. ದಾಳಿ ವೇಳೆ, ಮಹತ್ವದ ದಾಖಲೆಗಳು ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಪತ್ತೆಯಾಗಿತ್ತು.

ಎಸಿಬಿಯಲ್ಲಿ ತನಿಖೆ ನಡೆಸಿ ರಾಜ್ಯ ಸರ್ಕಾರಕ್ಕೆ ವರದಿ ನೀಡಿತ್ತು. ಸದ್ಯ ಅವ್ಯವಹಾರ ನಡೆಸಿದ ಆರೋಪದಡಿ ರಾಜ್ಯ ಸರ್ಕಾರ ಸುಧಾರನ್ನು ಅಮಾನತು ಮಾಡಲು‌ ಮುಂದಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸುಧಾ, ಅಮಾನತು ಆದೇಶ ಬಗ್ಗೆ ನನಗೇ‌ನೂ ಗೊತ್ತಿಲ್ಲ. ಆದೇಶ ಪತ್ರ ಬಂದಿಲ್ಲ.. ಒಂದು ವೇಳೆ ಆದೇಶ ಪತ್ರ ಬಂದರೆ ಕಾನೂನು ಹೋರಾಟ ನಡೆಸುವೆ ಎಂದಿದ್ದಾರೆ.

ABOUT THE AUTHOR

...view details