ಕರ್ನಾಟಕ

karnataka

ಪ್ರೊ ಕೆ ಲಕ್ಷ್ಮ ಗೌಡರಿಗೆ ಪ್ರೊ.ಎಂಎಸ್ ನಂಜುಂಡ ರಾವ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ: ಬಿ ಎಲ್ ಶಂಕರ್

By

Published : Jan 4, 2023, 6:17 PM IST

ಜನವರಿ 8 ರಿಂದ ಕರ್ನಾಟಕ ಚಿತ್ರಕಲಾ ಪರಿಷತ್ತಿನ 20ನೇ ಚಿತ್ರ ಸಂತೆ ಕಾರ್ಯಕ್ರಮ-ಪ್ರೊ ಕೆ ಲಕ್ಷ್ಮ ಗೌಡ ಅವರಿಗೆ ಪ್ರೊ ಎಂಎಸ್ ನಂಜುಂಡ ರಾವ್ ರಾಷ್ಟ್ರೀಯ ಪ್ರಶಸ್ತಿ ಪರಿಷತ್ ನೀಡಲು ನಿರ್ಧಾರ - ಪರಿಷತ್ ಅಧ್ಯಕ್ಷ ಬಿಎಲ್ ಶಂಕರ್ ಮಾಹಿತಿ.

Karnataka Chitra Kala Parishad on chitra sante
ಪ್ರೊ ಕೆ ಲಕ್ಷ್ಮ ಗೌಡರಿಗೆ ಪ್ರೊ.ಎಂಎಸ್ ನಂಜುಂಡ ರಾವ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ: ಬಿಎಲ್ ಶಂಕರ್

ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿಎಲ್ ಶಂಕರ್

ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತಿನ 20ನೇ ಚಿತ್ರ ಸಂತೆ ಕಾರ್ಯಕ್ರಮದಲ್ಲಿ ಪ್ರೊ ಕೆ ಲಕ್ಷ್ಮ ಗೌಡ ಅವರಿಗೆ ಪ್ರೊ ಎಂಎಸ್ ನಂಜುಂಡ ರಾವ್ ರಾಷ್ಟ್ರೀಯ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದು ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿಎಲ್ ಶಂಕರ್ ತಿಳಿಸಿದರು. 20ನೇ ಚಿತ್ರಸಂತೆ ಕಾರ್ಯಕ್ರಮವು ಮುಂದಿನ ಭಾನುವಾರ ಜ.8 ರಂದು ನಡೆಯಲಿದ್ದು, ಉನ್ನತ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ಇದರ ಮುನ್ನ ವಿಶೇಷ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು, ಕೆ ಲಕ್ಷ್ಮ ಗೌಡಗೆ ನಂಜುಂಡ ರಾವ್ ಪ್ರಶಸ್ತಿ ನೀಡುವ ಜೊತೆಗೆ ಇತರ ನಾಲ್ವರಿಗೂ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಇದರಲ್ಲಿ ಹೆಚ್‌ಕೆ ಕೇಜ್ರಿವಾಲ್ ಪ್ರಶಸ್ತಿಯನ್ನು ಪೋಲೆಂಡ್ ಮೂಲದ ವಿಮರ್ಶಕಿ ಮಾರ್ತಾ ಯಾಕಿಮೋವಿಝ್ ಅವರಿಗೆ, ಎಂ ಆರ್ಯ ಮೂರ್ತಿ ಪ್ರಶಸ್ತಿಯನ್ನು ರಜಿನಿ ಪ್ರಸನ್ನ ಅವರಿಗೆ, ಡಿ ದೇವರಾಜ ಅರಸು ಪ್ರಶಸ್ತಿ ಶಾಂತಾಮಣಿ ಅವರಿಗೆ ಹಾಗೂ ವೈ ಸುಬ್ರಹ್ಮಣ್ಯ ರಾಜು ಪ್ರಶಸ್ತಿಯನ್ನು ಕೆ ವಿಠ್ಠಲ್ ಭಂಡಾರಿ ಅವರಿಗೆ ನೀಡಲು ನಿರ್ಧರಿಸಲಾಗಿದೆ. ಪ್ರೊಫೆಸರ್ ಎಂಎಸ್ ನಂಜುಂಡ ರಾವ್ ಹೆಸರಿನಲ್ಲಿ ನೀಡುತ್ತಿರುವ ರಾಷ್ಟ್ರಮಟ್ಟದ ಪ್ರಶಸ್ತಿ ಹಿರಿಯ ಕಲಾವಿದರಿಗೆ ನೀಡುತ್ತಿದ್ದು ಇದು ಒಂದು ಲಕ್ಷ ರೂಪಾಯಿ ನಗದು ಹಾಗೂ ಪ್ರಶಸ್ತಿ ಮತ್ತು ಫಲಕವನ್ನು ಒಳಗೊಂಡಿರುತ್ತದೆ.

ಅದೇ ರೀತಿ ಉಳಿದ ಪ್ರಶಸ್ತಿಗಳು 50,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿರುತ್ತವೆ. ಚಿತ್ರಕಲಾ ಪರಿಷತ್ ಮೂಲಕ ಅತ್ಯಂತ ಗೌರವಯುತವಾಗಿ ಅವರನ್ನು ಸನ್ಮಾನಿಸುವ ಕಾರ್ಯ ಒಂದು ನಡೆಯಲಿದೆ ಎಂದು ಬಿ ಎಲ್​ ಶಂಕರ್​ ಮಾಹಿತಿ ನೀಡಿದರು.

ಚಿತ್ರಸಂತೆ ವಿವರ:ಈ ವರ್ಷದ ಚಿತ್ರ ಸಂತೆಯು ಜನವರಿ 8 ರಂದು ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಚಿತ್ರ ಸಂತೆಯನ್ನು ಉದ್ಘಾಟಿಸಲಿದ್ದಾರೆ. ಕಲಾ ಪ್ರದರ್ಶನದ ಉದ್ಘಾಟನೆಯನ್ನು ಉನ್ನತ ಶಿಕ್ಷಣ ಸಚಿವ ಡಾ ಸಿಎನ್ ಅಶ್ವತ್ಥ ನಾರಾಯಣ ನೆರವೇರಿಸಲಿದ್ದಾರೆ. ಸಮಾರಂಭದಲ್ಲಿ ಸಚಿವರಾದ ಆರಗ ಜ್ಞಾನೇಂದ್ರ, ಆರ್ ಅಶೋಕ್ ಎಸ್ ಟಿ ಸೋಮಶೇಖರ್ ವಿ ಸುನಿಲ್ ಕುಮಾರ್ ಸಂಸದ ಪಿ ಸಿ ಮೋಹನ್ ಹಾಗೂ ಶಾಸಕ ರಿಜ್ವಾನ್ ಅರ್ಷದ್ ಉಪಸ್ಥಿತರಿರುತ್ತಾರೆ ಎಂಬ ವಿವರ ನೀಡಿದರು.

ಈ ಬಾರಿ ಚಿತ್ರಸಂತೆಯಲ್ಲಿ ದೇಶದ ವಿವಿಧ ಭಾಗಗಳಿಂದ ಸುಮಾರು 1500 ಕಲಾವಿದರ ಕಲಾಕೃತಿಗಳು ಪ್ರದರ್ಶನ ಗೊಳ್ಳಲಿವೆ. ದೇಶದ ಕರ್ನಾಟಕ ಕೇರಳ ತಮಿಳುನಾಡು ಆಂಧ್ರಪ್ರದೇಶ ಗೋವಾ ಮಹಾರಾಷ್ಟ್ರ ಪಂಜಾಬ್ ಪಶ್ಚಿಮ ಬಂಗಾಳ ಒಡಿಶಾ ಜಾರ್ಖಂಡ್ ದೆಹಲಿ ಪಾಂಡಿಚೇರಿ ಗುಜರಾತ್ ಸಿಕ್ಕಿಂ ಮೊದಲಾದ ರಾಜ್ಯಗಳ ಕಲಾವಿದರು ಆಗಮಿಸಲಿದ್ದಾರೆ. ಪರಿಷತ್ ಮುಂಭಾಗದ ಕುಮಾರ ಕೃಪ ರಸ್ತೆಯಲ್ಲಿ ಹಾಗೂ ಕ್ರೆಸೆಂಟ್ ರಸ್ತೆಯಲ್ಲಿ ಕಲಾಕೃತಿಗಳು ಇರಲಿವೆ.

ಹಿರಿಯ ನಾಗರಿಕರು ಹಾಗೂ ವಿಕಲಚೇತನರಿಗೆ ಪರಿಷತ್ ಆವರಣದಲ್ಲಿಯೇ ಮಳಿಗೆ ತೆರೆಯಲು ಅವಕಾಶ ನೀಡಲಾಗಿದೆ. ಬೆಳಗ್ಗೆ ಎಂಟರಿಂದ ರಾತ್ರಿ 8ರವರೆಗೂ ಚಿತ್ರ ಪ್ರದರ್ಶನ ಇರಲಿದ್ದು ಈ ಮಾರ್ಗವಾಗಿ ವಾಹನ ಸಂಚಾರ ಇರುವುದಿಲ್ಲ. ಪೊಲೀಸ್ ಭದ್ರತೆ ಹಾಗೂ ಇತರ ಸವಲತ್ತುಗಳಿಗಾಗಿ ಸಂಬಂಧಿಸಿದ ಇಲಾಖೆಯನ್ನು ಸಂಪರ್ಕಿಸಿ ಸಮನ್ವಯ ಮಾಡಿಕೊಳ್ಳಲಾಗಿದೆ. ಬಿಎಂಟಿಸಿ ಹಾಗೂ ಕೆಎಸ್​ಆರ್​ಟಿಸಿ ಅಧಿಕಾರಿಗಳ ಜೊತೆಗೂ ಸಮಲೋಚಿಸಲಾಗಿದೆ. ಎಲ್ಲವೂ ಅತ್ಯಂತ ಅಚ್ಚುಕಟ್ಟಾಗಿ ನೆರವೇರಲಿದ್ದು, ಚಿತ್ರಸಂತೆ ಯಶಸ್ವಿಯಾಗುವ ನಿರೀಕ್ಷೆ ಇದೆ ಎಂದರು.

ಇದನ್ನೂ ಓದಿ:ಐವರು ಪೊಲೀಸರ ವಿರುದ್ಧ ಇಲಾಖಾ ವಿಚಾರಣೆ ಶಿಫಾರಸು: ಮಾನವ ಹಕ್ಕು ಆಯೋಗ ಆದೇಶ

ABOUT THE AUTHOR

...view details